ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

Rohan Corporation Marks the Finale of Freedom Palette 2026 at Rohan City

Mangaluru: The final round of Freedom Palette 2026, organised by Rohan Corporation, was held at Rohan City, Bejai, Mangaluru, marking the culmination of the art competition. The first round received a tremendous response, with 2,857 entries submitted by participants aged 16 years and below, from which 60 finalists were shortlisted to compete in the final round.. The final round was held on the theme “The Coast in the Story of India,” with participants portraying how Mangaluru’s coastal heritage, culture and identity contribute to the larger story of India through their artwork.The entries were evaluated by Pixncil Studio, the Jury Partner for Freedom Palette 2026. The participants were assessed on concept, creativity and colour scheme.The programme was graced by Dion Monteiro, Director of Rohan Corporation, Sumana, General Manager of the company, and jury members Pruthvi Raj and Mehika, who joined the dignitaries on stage.Addressing the participants, Dion Monteiro said, “Freedom Palette provides children with a platform to express their ideas and creativity through art. This year’s theme gave them an opportunity to explore Mangaluru’s coastal identity and present their own interpretation of it. We are pleased to see the enthusiasm and effort shown by all the finalists.”Speaking about the response to the competition, Mrs. Sumana added, “The response from the participants and their parents has been encouraging. Every finalist has brought a unique perspective to the theme, and we appreciate their effort and enthusiasm. We congratulate all the participants and wish them the very best.”The results of Freedom Palette 2026 will be announced during the Independence Day celebrations at Rohan Square, Pumpwell, Mangaluru, on August 15. The competition carries cash prizes of ₹25,000 for the first prize, ₹15,000 for the second prize and ₹10,000 for the third prize.Freedom Palette 2026 was organised by Rohan Corporation as part of its Independence Day celebrations, with the objective of encouraging creativity and providing children with a platform to express their ideas through art.

ಪ್ರಾದೇಶಿಕ ವಾರ್ತೆಗಳು

*ರೆಡ್‌ಕ್ರಾಸ್‌ನಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ. ‘ಅಂಗಾಂಗ ದಾನದ ಅರಿವು ಮೂಡಿಸುವುದು ಅಗತ್ಯ’-ಡಾ.ರವಿಶಂಕರ್ ಶೆಟ್ಟಿ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ ಗುರುವಾರ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಜೀವ ಸಾರ್ಥಕತೆಯ ರಾಜ್ಯ ಸಂಯೋಜಕ ಡಾ.ರವಿಶಂಕರ್ ಶೆಟ್ಟಿ ಮಾತನಾಡಿ ” ಪರರ ಜೀವ ಉಳಿಸುವ ಅಂಗಾಂಗ ದಾನಕ್ಕಿಂತ ಮಿಗಿಲಾದ ದಾನವಿಲ್ಲ. ಜನತೆ ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಣಿಯಾಗುವ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸುವ ಅನಿವಾರ್ಯತೆ ಇದೆ. ಖಾಸಗಿ ಅಸ್ಪತ್ರೆಗಳು, ರೆಡ್‌ಕ್ರಾಸ್‌ನಂತಹ ಸೇವಾ ಸಂಸ್ಥೆಗಳು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ‘ಎಂದರುಮಿದುಳು ನಿಷ್ಕ್ರಿಯ ಆದವರ ಅಂಗಾಂಗ ದಾನದಲ್ಲಿ (198) ಕರ್ನಾಟಕ ದೇಶದಲ್ಲಿ ತೃತೀಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಕಿಡ್ನಿ ದಾನದ ಅಗತ್ಯವಿದೆ. ಆದರೆ ನೋಂದಣಿ ಸಂಖ್ಯೆ ತೀರಾ ಕಡಿಮೆ. ಮಂಗಳೂರು ಶಿಕ್ಷಣ ಕೇಂದ್ರವಾಗಿ ಬೆಳೆದಿದ್ದರೂ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಜನರಲ್ಲಿ ಇರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಿ ಅಂಗಾಂಗ ದಾನಕ್ಕೆ ಪ್ರೇರಣೆ ನೀಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.ಮುಖ್ಯ ಅತಿಥಿಗಳಾದ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಮತ್ತು ಎಎಂಸಿ ಮಂಗಳೂರು ಘಟಕದ ಅಧ್ಯಕ್ಷ ಡಾ.ಪ್ರಶಾಂತ್.ಬಿ. ಅವರು ಅಂಗಾಂಗ ದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಂಗಾಂಗ ದಾನ ಪಡೆದ ಡಾ.ಸುಭಾಶ್ಚಂದ್ರ ರೈ ಮಾತನಾಡಿ ಸಕಾಲದಲ್ಲಿ ಅಂಗಾಂಗ ದಾನ ಮಾಡಿದವರು ನನಗೆ ಮರುಜನ್ಮ ನೀಡಿದರು’ ಎಂದರು.ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೂತ್ ರೆಡ್‌ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ.ಸುಮನಾ.ಬಿ. ಮುಖ್ಯಅತಿಥಿಯನ್ನು ಪರಿಚಯಿಸಿದರು. ರೆಡ್‌ಕ್ರಾಸ್ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ ಯೇನೆಪೊಯ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ನಿತ್ಯಶ್ರೀ ಬಿ.ವಿ., ಬೆಸೆಂಟ್ ಕಾಲೇಜಿನ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ದೀಕ್ಷಿತಾ ಉಪಸ್ಥಿತರಿದ್ದರು.ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಸ್ವಾಗತಿಸಿ, ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಖೈರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಿಜೈ ಕಾಪಿಕಾಡ್ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಮೆಟ್ರೊ ವತಿಯಿಂದ ನಗರದ ಬಿಜೈ ಕಾಪಿಕಾಡ್ ಅಂಗನವಾಡಿಯ ಮಕ್ಕಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಕ್ಕಳ ಸಮವಸ್ತ್ರ ವನ್ನು ಶಾಲಾ ಶಿಕ್ಷಕಿ ನಂದಾ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಅಧ್ಯಕ್ಷ ಶ್ಯಾಮ್ ಪ್ರಕಾಶ್, ಸಹಾಯಕ ಗವರ್ನರ್ ಡಾ. ಅರವಿಂದ್, ಸದಸ್ಯರಾದ ಸ್ವಾತಿ ಪ್ರಸಾದ್, ಚಂದ್ರಶೇಖರ್, ಡಾ. ರಿತೇಶ್ ಪ್ರಭು, ದಯಾನಂದ ಪ್ರಭು, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಬಿಜೈ ಕಾಪಿಕಾಡ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ ಎಸ್, ಅಂಗನವಾಡಿ ಸಹಾಯಕಿ ಪ್ರಭಾ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕನ್ನಡ ಭಾಷಾ ಬೆಳವಣಿಯಲ್ಲಿ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ -ಪ್ರೊ.ಪಿ.ಎಲ್.ಧರ್ಮ. ಸಂಶುದ್ಧೀನ್ ರಿಗೆ ಪ.ಗೋ ಪ್ರಶಸ್ತಿ ಪ್ರದಾನ

ಮಂಗಳೂರು, ಆ. 11; ಕನ್ನಡ ಭಾಷಾ ಬೆಳವಣಿಯಲ್ಲಿ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ,ಜಿಲ್ಲೆಯ ಪತ್ರಕರ್ತರ ಸಂಶೋಧನಾ ಪ್ರವೃತ್ತಿ ಪತ್ರಕರ್ತರ ವೃತ್ತಿಗೆ ಘನತೆಯನ್ನು ತಂದು ಕೊಟ್ಟಿದೆ ಎಂದು ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನಾ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ.ಗೋ. ಪ್ರಶಸ್ತಿ ಪ್ರದಾನ ಸಮಾ ರಂಭವನ್ನುದ್ದೇಶಿಸಿ ಮಾತನಾಡುತ್ತಾ, ಪತ್ರಕರ್ತರ ಕೆಲವೊಂದು ವರದಿಗಳು,ಪುಸ್ತಕಗಳು ಯಾವುದೇ ಸಂಶೋಧನಾ ಬರಹಗಳಿಗೂ ಕಡಿಮೆಯಿಲ್ಲ ಎಂದು ಅವರು ಶ್ಲಾಘಿಸಿದರು.ಪತ್ರಕರ್ತರ ಕನ್ನಡ ಭಾಷಾ ಬಳಕೆ ಅನುಕರಣೀಯವಾಗಿದೆ. ಕನ್ನಡ ಭಾಷೆಯನ್ನು ಬೆಳೆಸುವ ಚಳವಳಿಯ ಭಾಗವಾಗಿಯೂ ಇಲ್ಲಿನ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಶುದ್ದೀನ್ ಅವರ ವಿಶೇಷ ವರದಿಯಲ್ಲೂ ಅವರು ಬಳಸಿರುವ ಭಾಷೆ, ಸರಕಾರವನ್ನು ಎಚ್ಚರಿಸುವ ಉತ್ತಮ ಪ್ರಯತ್ನವಾಗಿದೆ ಎಂದು ಹೇಳಿದ ಅವರು, ಜಿಲ್ಲೆಯ ಕನ್ನಡ ಪತ್ರಕರ್ತರ ಭಾಷಾ ಪ್ರಯೋಗಗಳು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ.ಹೊಸ ಹೊಸ ಶಬ್ಧಗಳ ಪ್ರಯೋಗಗಳನ್ನು ನಾನು ಗಮನಿಸಿದ್ದೇನೆ ಎಂದರು. ಖಾಸಗೀಕರಣದ ಭರಾಟೆಯ ನಡುವೆ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ,ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರು ಹಾಗೂ ಅವರಿಗಿಂತಲೂ ತಳಮಟ್ಟದ ಜೀವನ ಸಾಗಿಸುತ್ತಿರುವ ಸಾಕಷ್ಟು ಸಮುದಾಯ, ಕುಟುಂಬಗಳಿಗೆ ಈ ಸರಕಾರಿ ಸಂಸ್ಥೆಗಳು, ಶಿಕ್ಷಣ ಕ್ಷೇತ್ರಗಳು ಇಂದಿಗೂ ಆಶಾಕಿರಣ ವಾಗಿವೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಆಗಬೇಕಾಗಿದೆ ಎಂದರು .ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್, ‘ಈ ಪ್ರಶಸ್ತಿಯು ಜವಾಬ್ಧಾರಿಯನ್ನು ಹೆಚ್ಚಿಸಿದೆ’ ಅವಕಾಶ ವಂಚಿತ ಮೂಲ ನಿವಾಸಿಗಳ ಸಮಸ್ಯೆ ಪರಿಹರಿಸಲು ಸರಕಾರದ ಸಹಾಯ ಅಗತ್ಯವಾಗಿ ಸಿಗಬೇಕಾಗಿದೆ ಎಂದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಮಾತನಾಡುತ್ತಾ, ಪದ್ಯಾಣ ಗೋಪಾಲ ಕೃಷ್ಣ (ಪ.ಗೋ.)ಅವರ ಜತೆಗಿನ ತನ್ನ ಒಡನಾಟವನ್ನು ಹಂಚಿ ಕೊಂಡರು. ಸೌಲಭ್ಯಗಳ ಕೊರತೆಗಳಿದ್ದ ಆ ಕಾಲದಲ್ಲಿ ಪ.ಗೋ, ತಮ್ಮ ವೃತ್ತಿಯಲ್ಲಿ ಎಂದಿಗೂ ಜಾತಿ, ಧರ್ಮ, ಭಾಷೆ ಬಗ್ಗೆ ವ್ಯತ್ಯಾಸ ಮಾಡಿದವರಲ್ಲ ಎಂದರು.ಅವರ ಹೆಸರಿನಲ್ಲಿ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿತರಿಸಲಾಗುತ್ತಿರುವ ಪ.ಗೋ ಪ್ರಶಸ್ತಿ ನೀಡುತ್ತಿ ರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.ರವರು ಮಾತನಾಡುತ್ತಾ, ಪ್ರಯೋಗಶೀಲ ಪತ್ರಕರ್ತರ ರಾಗಿದ್ದ ಪ.ಗೋ. ಅವರು ಜಿಲ್ಲೆ,ರಾಜ್ಯಗಳ ಗಡಿಗಳನ್ನು ಮೀರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯ ಕೊಡುಗೆ ನೀಡಿದವರು ಎಂದರು.ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಆಷಾಡದ ಔಷಧಿಯ ಕಷಾಯ ಶ್ರೇಷ್ಠ: ಚರಿಷ್ಮಾ

ಮೂಲ್ಕಿ: ಆಷಾಡ ಮಾಸದ ಅಮಾವಾಸ್ಯೆಯಂದು ತುಳುವರು ಸೇವಿಸುವ ಔಷಧೀಯ ಗುಣಗಳುಳ್ಳ ಕಷಾಯವು ಶ್ರೇಷ್ಠವಾಗಿದೆ. ತುಳುನಾಡಿನ ಪ್ರತೀ ಆಚರಣೆಗೂ ಒಂದು ವೈಜ್ಞಾನಿಕ ಮಹತ್ವ ಇದೆ ಎಂದು ಮೂಲ್ಕಿ ಯವವಾಹಿನಿ ಘಟಕ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಹೇಳಿದರು‌.ಅವರು ಮೂಲ್ಕಿ ಬಸ್ ನಿಲ್ದಾಣದಲ್ಲಿ ನಡೆದ ಮೂಲ್ಕಿ ಯುವವಾಹಿನಿ ಘಟಕದ ಸಂಯೋಜನೆಯಲ್ಲಿ ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ರೋಟರಿ ಕ್ಲಬ್ ಮೂಲ್ಕಿ, ನವದುರ್ಗಾ ಯುವಕ ವೃಂದ ಕೋಟೆಕೇರಿ, ಮುಲ್ಕಿ ಇದರ ಸಹಕಾರದಲ್ಲಿ ನಡೆದ ಆಟಿಯ (ಆಷಾಡ) ಕಷಾಯದ ಉಚಿತ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೂಲ್ಕಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ವಿನೋದ್ ಸಾಲ್ಯಾನ್, ರೋಟರಿ ಕ್ಲಬ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ನವದುರ್ಗಾ ಯುವಕ ವೃಂದ ಕೋಟೆಕೇರಿಯ ಜಯ ಪೂಜಾರಿ, ಯುವವಾಹಿನಿಯ ಸತೀಶ್ ಕಿಲ್ಪಾಡಿ, ಮಾಧವ ಕಿಲ್ಪಾಡಿ, ವಿನಯಕುಮಾರ್ ಮಟ್ಟು, ಭಾಸ್ಕರ ಕೊಕ್ರಾಣಿ, ಲತೀಶ್ ಕುಮಾರ್, ಲಯನ್ಸ್ ನ ಕಿಶೋರ್ ಕುಮಾರ್ ಶೆಟ್ಟಿ, ಸದಾಶಿವ ಹೊಸದುರ್ಗಾ ಮತ್ತಿತರರು ಇದ್ದರು.

ಪ್ರಾದೇಶಿಕ ವಾರ್ತೆಗಳು

ಸಮಾಜ ರತ್ನ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅಭಿನಯದ ಚಾರ್ಜ್‍ಶೀಟ್ ಆ. 14ಕ್ಕೆ ಬಿಡುಗಡೆ

ಬೆಂಗಳೂರು -ವೆಂಕಟ್ ಭಾರದ್ವಾಜ್ ನಿರ್ದೇಶನದ, ಸುಂದರ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಸುಂದರ ರಾಜ್ ಅವರ 250ನೇ ಸಿನೆಮಾ ‘ಚಾರ್ಜ್ ಶೀಟ್ 03-08’ ಸಿನಿಮಾ ಆ.14ರಂದು ತೆರೆಗೆ ಬರಲಿದೆ. ಕ್ರೈಂ-ಥ್ರಿಲ್ಲರ್ ಕುತೂಹಲ ಕೆರಳಿಸುವ ಸಿನೆಮಾ ಇದಾಗಿದೆ, ತಂದೆ -ಮಗಳ ನಡುವಿನ ಬಾಂಧವ್ಯದ ಸುತ್ತ ನಡೆಯುವ ಕಥಾಹಂದರ ಸಿನಿಮಾದಲ್ಲಿದೆ. 2003 ರಿಂದ 2008ರ ಸಮಯದಲ್ಲಿ ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನಿರ್ವಹಿಸಿದ ವಿಶೇಷ ಪ್ರಕರಣಗಳೇ ಚಿತ್ರದ ಕಥೆಗೆ ಪ್ರೇರಣೆ ಆಗಿದೆ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಣ್ ಮತ್ತು ದಿನೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಮೀರ್ ಕುಲಕರ್ಣಿ.ಸಂಗೀತ, ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ ಹಾಗೂ ಶಮೀಕ್ ವಿ. ಭಾರದ್ವಾಜ್ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಹರ್ಷ್ ಅರ್ಜುನ್, ಸತ್ಯಶ್ರೀ, ಅಮರ್, ರೂಪೇಶ್, ಡಾ.ಪ್ರಮೋದ್, ಡಾ.ಸುಧಾಕರ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.ಈ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಅವರು ಹಾಡಿರುವ ‘ಋತುಮಾನವು’ ಹಾಡಲ್ಲಿ ತಂದೆ, ಮಗಳ ನಡುವಿನ ಭಾವನಾತ್ಮಕ ಪ್ರೀತಿಯನ್ನು ವಿವರಿಸಲಾಗಿದ್ದು, ಆ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಅಪರಾಧವನ್ನು ತನಿಖೆ ಮಾಡುವ ಕಥೆಗಳು ಹಲವಿದ್ದರೂ, ಸಮಾಜದ ಹೃದಯವನ್ನು ಸ್ಪರ್ಶಿಸುವ ಕಥೆಗಳು ವಿರಳ. ಅಂತಹ ಅಪರೂಪದ ಪ್ರಯತ್ನವೇ ಚಾರ್ಜ್ಶೀಟ್ 03-08ಬೆಂಗಳೂರಿನಲ್ಲಿ 2003ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರ ‘ಚಾರ್ಜ್ ಶೀಟ್ 03/08’. ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಜೀವನಾನುಭವ ಹಾಗೂ ಅವರು ಬರೆದ ಕಾದಂಬರಿಯೇ ಈ ಸಿನಿಮಾದ ಕಥಾಹಂದರ. ಸತ್ಯದ ಹುಡುಕಾಟ, ವ್ಯವಸ್ಥೆಯೊಳಗಿನ ಸಂಘರ್ಷ ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟವನ್ನು ಈ ಸಿನಿಮಾ ಚಿತ್ರಿಸುವುದರ ಜೊತೆಗೆ ಉತ್ತಮ ಸಂದೇಶವನ್ನೂ ನೀಡಲಿದೆ.ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ನೈಜ ಕಥೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, 2000ದ ದಶಕದ ಆರಂಭದ ಬೆಂಗಳೂರಿನ ವಾತಾವರಣವನ್ನು ಇಲ್ಲಿ ನೈಜವಾಗಿ ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಸುಂದರ್‍ರಾಜ್, ಹರ್ಶ್ ಅರ್ಜುನ್, ಅಮರ್, ಸತೆಯಾ, ರಾಮ್, ಚೇತನ ಖೋಟ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾ.ಸುಧಾಕರ ಶೆಟ್ಟಿಯವರ ಮೊದಲ ಚಿತ್ರ ವೆಂಕಟ್ ಭಾರಧ್ವಜ್ ನಿರ್ದೇಶನದ ಹೇ ಪ್ರಭು, ಎರಡನೆ ಚಿತ್ರ ಚಾರ್ಜ್ ಶೀಟ್, ಮೂರನೇ ಚಿತ್ರ ರಕ್ಕಿ,ನಾಲ್ಕನೇ ಚಿತ್ರ ಡಾ.ಮೋಹನ್ ಎಂಬಿಬಿಯಸ್ .ಇದು ತುಳು ಮತ್ತು ಮರಾಠಿ ಚಿತ್ರವಾಗಿದ್ದು, ಡಾ.ಸುಧಾಕರ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಸಮರ್ಪಿತ ಮತ್ತು ಪ್ರಾಮಾಣಿಕ ವೈದ್ಯರ ಕಥೆಯನ್ನು ಆಧರಿಸಿದೆ. ಬದುಕು ಬರೆದ – ಸಾಂಗ್ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು. https://www.youtube.com/embed/I4QAjpus4X4?feature=oembed

ಪ್ರಾದೇಶಿಕ ವಾರ್ತೆಗಳು

Dr Sudhakar Shetty, as forensic expert in Kannada film ” CHARGESHEET 03-08″ to be released on 14th August

The Kannada film ” CHARGESHEET ” is based on true story which happened in Bengalaru in 2003 ,when SK Umesh was serving as DSP in Bangaluru Police.This true story is cased on a novel written by him.Its a fight for justice & also has a good message.Directed by award winning director Venkat Bharadwaj.The shooting has been completed & the atmosphere of Bengalaru in the early 2000s has been captured.The film has stars like Sunder raj,Harsh Arjun,Amar Satheya,Ram,Chetana khot,Dr Pramod, Dr Sudhakar Shetty ,Roopesh & Venkat Bharadwaj in the lead roles. Dr Sudhakar Shetty’s first film “Hey Prabhu” has already been released and its songs – eddelo egga & baduku bareda” has been a superhit.Its already been take up by Air India Engineering Services to be screened in Prime minister’s official aircraft ” BHARAT” for PM & his onboard staff.2nd film is ” CHARGESHEET ” ,3rd film is ” RAKKY” presented by Ashwini Puneeth Rajkumar ,4th film is in tulu & marathi ” Dr Mohan MBBS. 5th untitled film is in hindi which will go on floor shortly.In all these films Dr Shetty has played the role of doctor to inspire young doctors & is directed by Venkat Bharadwaj who is the son of Dr Shetty’s film Guru legendary late Shri C V SHIVASHANKAR (Putana kanagal awardee) You can watch the ‘Baduku Bareda’ song via the link below. https://www.youtube.com/embed/I4QAjpus4X4?feature=oembed

ಪ್ರಾದೇಶಿಕ ವಾರ್ತೆಗಳು

ನಿಧನ: ಆಲಿಯಾ ಫೆರ್ನಾಂಡಿಸ್ (38 ವರ್ಷ)

ಮಂಗಳೂರಿನ ಕುಡುಪು ಪಂಜಿರೆಲ್ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಮತ್ತು ರೆನ್ನಿ ಮೊಂತೇರೊ ಇವರ ಪುತ್ರಿ ಇಂದು 11-08-2026 ರಂದು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ತಂದೆ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಸಮಾಜ ಸೇವಾ ಕ್ಷೇತ್ರದಲ್ಲಿ ರಾಜೇಶ್ ಅಮೀನ್ ಮೂಲ್ಕಿ ಅವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು- ಮೂಲ್ಕಿಯ ತುಳುನಾಡು ಪ್ರತಿಷ್ಠಾನದ ಅಧ್ಯಕ್ಷ, ಹಾಯ್ ತುಳುನಾಡು ಪತ್ರಿಕೆಯ ಸಂಪಾದಕ , ಆಯುಷ್ ಇಲಾಖೆಯ ಖಾಯಂ ನೌಕರ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಅಮೀನ್ ಮೂಲ್ಕಿ ಅವರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕೊಯಂಬತ್ತೂರಿನ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯು ಬೆಂಗಳೂರಿನ ಹೊಸೂರಿನಲ್ಲಿ ನಡೆದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ರಾಜೇಶ್ ಅಮೀನ್ ಅವರಿಗೆ ಈ ಹಿಂದೆ ಅಂಬೇಡ್ಕರ್ ಫೆಲೋ ಶಿಪ್ ರಾಷ್ಟ್ರ ಪ್ರಶಸ್ತಿ ದೊರಕಿದೆ.

ಪ್ರಾದೇಶಿಕ ವಾರ್ತೆಗಳು

ಆ.12ರಂದು ವಿಶ್ವ ಅಂಗಾಂಗ ದಾನ ದಿನಾಚರಣೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ಆ.೧೩ರಂದು ಬೆಳಗ್ಗೆ ೧೧ಕ್ಕೆ ವಿಶ್ವ ಅಂಗಾಂಗ ದಾನ ದಿನಾಚರಣೆ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ. ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜೀವ ಸಾರ್ಥಕತೆಯ ರಾಜ್ಯ ಸಂಯೋಜಕ ಡಾ.ರವಿಶಂಕರ್ ಶೆಟ್ಟಿ ಕೆ., ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ.ಸದಾನಂದ ಪೂಜಾರಿ, ಎಎಂಸಿ ಮಂಗಳೂರು ಘಟಕದ ಅಧ್ಯಕ್ಷ ಡಾ.ಪ್ರಶಾಂತ್.ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top