ಮಂಗಳೂರು: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮಿಡ್ ಟೌನ್ ನ 2024-25 ರ ಸಾಲಿನ ಪದಾಧಿಕಾರಿಗಳ ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭವು ಕದ್ರಿ ಪಾರ್ಕ್ ಹತ್ತಿರದ ಲಯನ್ಸ್ ಅಶೋಕ್ ಭವನದಲ್ಲಿ ಇತ್ತೀಚೆಗೆ ಜರಗಿತು. ಪದಗ್ರಹಣ ಸಮಾರಂಭದ ಅಧಿಕಾರಿಯಾಗಿ ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ 317ಡಿ ಯ ನಿಕಟಪೂರ್ವ ಜಿಲ್ಲಾ ರಾಜಪಾಲರಾದ ಲಯನ್ ಡಾ. ಮೇಲ್ವಿನ್ ಡಿಸೋಜಾ ಅವರು 2024-25 ರ ಸಾಲಿನ ನೂತನ ಪದಾಧಿಕಾರಿಗಳಿಗೆ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ತತ್ವ ಸಿದ್ಧಾಂತದ ಬಗ್ಗೆ ಬೋಧಿಸಿದರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಅವರು ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ವೇಣಿ ಮರೋಳಿ. ಗುರುಪೀತ ಆಳ್ವ ವಲಯ ಅಧ್ಯಕ್ಷ ಚಂದ್ರಕಲ ರಾವ್ ಉಪಸ್ಥಿತರಿದ್ದರು ಕಾರ್ಯಕ್ರಮದ ಸ್ವಾಗತವನ್ನು ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿ ವಿಮಲಾ ತುಳಸಿ ರಾಜ್ ಧನ್ಯವಾದಗೈದರು.
ಸನ್ಮಾನ: ಈ ಸಂದರ್ಭದಲ್ಲಿ ತುಳುನಾಡು ಪ್ರತಿಷ್ಠಾಪನದ ಅಧ್ಯಕ್ಷ, ಪತ್ರಕರ್ತ ರಾಜೇಶ್ ಅಮೀನ್ ಮುಲ್ಕಿ ಅವರನ್ನು ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು.




























































































































































































