ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಈ ಮಳೆಗಾಲದಲ್ಲಿ 13 ರಜೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜ್ ಗಳಿಗೆ ನೀಡಿದ್ದು, ಇದನ್ನು ಭರ್ತಿ ಮಾಡಲು ಶೈಕ್ಷಣಿಕ ಇಲಾಖೆ ಮುಂದಿನ 26 ಶನಿವಾರಗಳನ್ನು ದಿನವಿಡೀ ತರಗತಿ ನಡೆಸಲು ನಿರ್ಧರಿಸಿರುವ ಬಗ್ಗೆ ಸುದ್ದಿ ಬಂದಿದೆ. ಈ ಬಗ್ಗೆ ಮಕ್ಕಳ ಹೆತ್ತವರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.



























































































































































































