ಕಿಚ್ಚ ಸುದೀಪ್‌ಗೆ ಪ್ರಶ್ನೆಗಳ ಸುರಿಮಳೆ! ವರ್ಷಕ್ಕೆ 2 ಸಿನಿಮಾ ಎಲ್ಲಿ ಅಂತ ಪ್ರಶ್ನಿಸಿದ ಫ್ಯಾನ್ಸ್

105.2K Views 15 Feb 2024

ಕಿಚ್ಚ ಸುದೀಪ್ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಅಂತ ಬ್ಯುಸಿ ನಡುವೆ ಒಂದೊಂದು ಸಿನಿಮಾ ಮಾಡಿಕೊಡ್ತಿದ್ದಾರೆ. ಇದರಿಂದ ಬೇಸರಗೊಂಡ ಅಭಿಮಾನಿಗಳು ವಿಕ್ರಾಂತ್ ರೋಣ ಆದ್ಮೇಲೆ ಸಿನಿಮಾನೇ ಮಾಡಿಲ್ಲ ಅಂತಲೂ ಪ್ರಶ್ನೆ ಮಾಡಿದ್ದರು.

ಅಭಿಮಾನಿಗಳ ಈ ಒಂದು ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದರು. ಒಂದರ ಮೇಲೆ ಒಂದು ಅನ್ನುವ ಹಾಗೆ ವರ್ಷಕ್ಕೆ ಎರಡು ಇಲ್ವೇ ಮೂರು ಸಿನಿಮಾ ಮಾಡ್ತೀನಿ ಅಂತಲೇ ತಿಳಿಸಿದ್ದರು. ಹಾಗಾಗಿಯೇ ಮ್ಯಾಕ್ಸ್ ಸಿನಿಮಾ ಮೊದಲು ಅನೌನ್ಸ್ ಆಗಿತ್ತು ನೋಡಿ.

ಕಿಚ್ಚ ಸುದೀಪ್ 10 ನಿಮಿಷದ ಟ್ವಿಟರ್ ಸೆಷನ್ ಮಾಡಿದ್ದಾರೆ. ಇದರಲ್ಲಿ ಅನೇಕ ಅಭಿಮಾನಿಗಳು ಹತ್ತಾರು ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆ ಸುದೀಪ್ ಸಿನಿಮಾಗೆ ಸಂಬಂಧಿಸಿದ್ದೇ ಆಗಿದೆ. ಆ ಪ್ರಶ್ನೆಯ ವಿವರ ಹೀಗಿದೆ.

ಸುದೀಪ್ ಈ ಹಿಂದೆ ವರ್ಷಕ್ಕೆ ಎರಡು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಆ ಒಂದು ಹೇಳಿಕೆಯನ್ನ ಪ್ರಶ್ನೆಯಾಗಿಸಿರೋ ಅಭಿಮಾನಿ “ವರ್ಷಕ್ಕೆ ಎರಡು ಸಿನಿಮಾ” ಅಂತಲೇ ಹೇಳಿದ್ದೀರಿ. ಆದರೆ ಎಲ್ಲಿ ಎರಡು ಸಿನಿಮಾ ಅಣ್ಣ ಅಂತಲೇ ಅಭಿಮಾನಿ ಕೇಳಿದ್ದದಾರೆ.

ಕಿಚ್ಚ ಸುದೀಪ್ ತಮ್ಮ ಅಭಿಮಾನಿ ಸ್ನೇಹಿತರು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅದು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಟ್ವಿಟರ್ ಸೆಷಲ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರೋ ಕಿಚ್ಚ ಸುದೀಪ್, ಇಂಗ್ಲೀಷ್‌ನಲ್ಲಿಯೇ ಹೀಗೆ ಉತ್ತರಿಸಿದ್ದಾರೆ. ಅದು ಹೀಗಿದೆ ಓದಿ.

ಸತತ ಪ್ರಯತ್ನ ಮಾಡುತ್ತಿದ್ದೇನೆ. ಅಭಿಮಾನಿಗಳ ಈ ಪ್ರಶ್ನೆಯನ್ನ ನಮ್ಮ ಟೀಮ್ ಕೂಡ ನೋಡಿದೆ ಅಂತ ಭಾವಿಸುತ್ತೇನೆ. ಒಂದು ವೇಳೆ ವರ್ಷಕ್ಕೆ ಎರಡು ಸಿನಿಮಾ ಮಾಡದೇ ಹೋದ್ರೆ, ನನ್ನ ಈ ಅಭಿಮಾನಿ ಸ್ನೇಹಿತರು ಕೊಂದೇ ಬಿಡ್ತಾರೆ ಅಂತಲೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹೀಗೆ ತಮ್ಮ ಅಭಿಮಾನಿಗಳಿಂದ ಹಲವಾರು ಪ್ರಶ್ನೆಗಳನ್ನ ಎದುರಿಸಿದ್ದಾರೆ. ಅದಕ್ಕೆ ಸೂಕ್ತ ಅನಿಸೋ ಉತ್ತರವನ್ನೂ ಕೊಟ್ಟಿದ್ದಾರೆ ಅಂತಲೂ ಹೇಳಬಹುದು.

Read More News

Scroll to Top