Author name: editor

ಕರಾವಳಿ ಸುದ್ದಿ

ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಪ್ರದಾನ

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್) ದಲ್ಲಿ ನಡೆಯಿತು.ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು, ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು 13ನೇ ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು.ದಿನಕರ ಡಿ. ಬಂಗೇರ ಅವರು ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.ಈ ಸೌಹಾರ್ದ ಸಂಗಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರು ಮತ್ತು ಮೂಲ್ಕಿ ಸುಂದರರಾಮ್ ಶೆಟ್ಟಿ ಸೌಹಾರ್ದ ಸಹಕಾರಿ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ *ಅನುಪಮ ಜನಸೇವಕ, ಸಾಮಾಜಿಕ, ಸಹಕಾರಿ ರಂಗದ ಸಾಧಕ, ಅಪೂರ್ವ ಸಂಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕ, ಮೂಲ್ಕಿ ಸುಂದರರಾಮ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ. ಬೆಂಗಳೂರ ಇದರ ಅಧ್ಯಕ್ಷರಾಗಿರುವ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮತ್ತು ಪಾವೂರು ಗುತ್ತು ಬಂಟ ಮನೆತನದ ಹಿರಿಯ ನಾಯಕರಾಗಿದ್ದಾರೆ.ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ, ಅನುಪಮ ನಿಸ್ವಾರ್ಥ ಸೇವೆ ಗೈದಿರುವ ಸನ್ಮಾನಿತರು ಪ್ರತಿಷ್ಠಿತ ಮಲೇಷಿಯಾದ ಇಂಟರ್‍ನ್ಯಾಷನಲ್ ಅವಾರ್ಡ್, ಇಂದಿರಾ ಗಾಂಧಿ ಸದ್ಭಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋಪರೇಟಿವ್ ಸೊಸೈಟಿಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ, ಸಮಾಜ ಸೇವಾರತ್ನ ಅವಾರ್ಡ್, ಡಾ. ರಾಜ್‍ಕುಮಾರ್ ಅವಾರ್ಡ್ ಸಹಿತ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುತ್ತಾರೆ.ಆರ್ ಬಿ ಐ ನ ನಿರ್ದೇಶಕರಾಗಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿ, ಸುಂದರರಾಮ್ ಶೆಟ್ಟಿ ವೆಲ್ಫೇರ್ ಅಸೋಸಿಯೇಸನ್ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸನ್ಮಾನಿತರು ಬೆಂಗಳೂರಿನಲ್ಲಿ 535 ಮಾದರಿ ವಸತಿ ಸಂಕೀರ್ಣ ಸೊಸೈಟಿ ಮುಖಾಂತರ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ.ವಿಜಯಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಮುಖಾಂತರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬಿಳೇಕ ಹಳ್ಳಿಯಲ್ಲಿ 111.31 ಗುಂಟ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ನಿರ್ಮಾಣದಲ್ಲಿ ಸೊಸೈಟಿಯ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ,1991ರಿಂದ 2015ರವರೆಗೆ ಪ್ರಮುಖ ಪಾತ್ರ ವಹಿಸಿರುತ್ತಾರೆ.ಬೆಂಗಳೂರಿನ ಸುಂದರರಾಮ ಶೆಟ್ಟಿ ನಗರದಲ್ಲಿ ಅಯ್ಯಪ್ಪ ದೇವಾಲಯ, ಶಿವನ ದೇವಾಲಯ ಮತ್ತು ಇತರ ಗುಡಿಗಳ ನಿರ್ಮಾಣ ಕಾರ್ಯ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಗಾಗಿ ಸನ್ಮಾನಿತರಿಗೆ ಕರ್ನಾಟಕ ಸರಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.ಕೊಡುಗೈದಾನಿ, ನಿಸ್ವಾರ್ಥ ಸಮಾಜಸೇವಕ, ನುಡಿದಂತೆ ನಡೆವ ಅಪರೂಪದ ಅದ್ವಿತೀಯ ಸಾಧಕ, ಸೌಹಾರ್ದ ನಾಟಕ ಸನ್ಮಾನ್ಯ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಗಣ್ಯರ ಸಮ್ಮುಖದಲ್ಲಿ ‘ಸೌಹಾರ್ದ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

Electrical Corridor Safety for Udupi–Kasargode 400 kV Transmission LineDate | Udupi, Karnataka / Kasargode, Kerala

The ongoing development of the Udupi–Kasargode 400 kV (Quad) D/c Transmission Line has brought critical focus to electrical safety guidelines and construction within its designated corridor. Udupi-Kasargode Transmission Limited (UKTL), the entity executing the project under the powers of the Electricity Act, 2003, has issued a public clarification to address concerns and ensure adherence to established norms.The transmission line project, crucial for regional power stability, operates with the same authority as the telegraph authority under the Indian Telegraph Act, 1885, granting UKTL the mandate to lay overhead lines. This legal backing underscores the strategic importance and the inherent safety requirements of such infrastructure. Key safety clearances from electrical conductors, as stipulated by the Indian Electricity Act, are central to the guidelines. A minimum horizontal clearance of 5.63 meters from any building and a vertical clearance of 7.33 meters above any building are mandatory. These specifications are non-negotiable and aim to prevent hazardous proximity to high-voltage lines.For existing residential structures that fall within the transmission corridor or directly beneath the conductors, a government assessment is slated to determine appropriate compensation based on established guidelines. This acknowledges potential impacts on existing habitations and outlines a formal process for redressal. A significant advisory has been issued for new construction projects within the transmission corridor. Individuals planning to build new houses are urged to consult with the UKTL office prior to commencing construction. This measure is designed to proactively ensure that any new structures comply with the stringent electrical clearances, thereby mitigating future risks and regulatory complications.In a move to alleviate concerns regarding land utility, UKTL has clarified that various agricultural activities remain permissible within the transmission corridor. Farmers can continue cultivating crops such as paddy, papaya, mango, black pepper (on cement poles), pineapple, and dragon fruit. This allowance is contingent on these activities not interfering with overhead line structures or clearance zones, and their adherence to relevant safety norms. This suggests a balance between infrastructure development and continued agricultural livelihood.On the project’s progress front, UKTL reports significant milestones. The Kerala section has seen the successful completion of all 101 tower foundations, while 77 out of 177 tower foundations have been completed in the Karnataka section. These figures indicate steady advancement of the vital transmission link.The public clarification by UKTL comes as a timely intervention, emphasizing the paramount importance of safety, regulatory compliance, and public awareness in the context of large-scale infrastructure projects that intersect with populated and agricultural areas.

ಪ್ರಾದೇಶಿಕ ವಾರ್ತೆಗಳು

ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ

ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ. ನವದೆಹಲಿ- ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾಮಲೈ ಆಯ್ಕೆಯಾಗಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಎಂಪಿ ಎಂಎಲ್ಎ ನ್ಯೂಸ್ 13 ನೇ ಸೌಹಾರ್ದ ಸಂಗಮ ಯಶಸ್ವಿಯಾಗಿ ಜನರನ್ನು ತಲುಪಿದೆ. ಜಿಲ್ಲೆಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸೌಹಾರ್ದತೆ ಅತ್ಯಗತ್ಯವಾಗಿದೆ. ಸೌಹಾರ್ದ ಸಂಗಮಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಗಣ್ಯರು.

ಮಂಗಳೂರು: ನಮ್ಮ ಜಿಲ್ಲೆ ಸೌಹಾರ್ದತೆಗೆ ಹೆಸರಾಗಿದೆ .ಆದರೆ, ಇತ್ತೀಚಿನ ದಿನಗಳಲ್ಲಿ ಹೆಸರು ಕೆಡುತ್ತಿದ್ದು ಜಾತೀಯತೆ ಎನ್ನುವುದು ಕೇವಲ ಬಾಯಲ್ಲಿ ಇರಬಾರದು .ಅದು ಹುಟ್ಟುವಾಗಲೇ ಬರಬೇಕು .ಸೌಹಾರ್ದ ಸಂಗಮ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ಜನರನ್ನು ತಲುಪಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರವರು ಹೇಳಿದರುಅವರು ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು, ವರ್ತಮಾನ ಕಾಲದಲ್ಲಿ ಇಡೀ ಜಗತ್ತಿಗೆ ಸೌಹಾರ್ದತೆಯ ಅಗತ್ಯವಿದೆ. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಹದಗೆಡುತ್ತಿರುವ ಇಂದಿನ ದಿನದಲ್ಲಿ ಸಾಮರಸ್ಯ ನಮ್ಮ ನಡುವಿನ ಸೇತುವೆಯಾಗಬೇಕು .ಈ ನಿಟ್ಟಿನಲ್ಲಿ ಸೌಹಾರ್ದ ಸಂಗಮ ವಿಶೇಷ ಕಾರ್ಯಕ್ರಮವಾಗಿ ನಮ್ಮೆದುರಿಗೆ ಇದೆ ಎಂದರು. ಇಡೀ ದೇಶದಲ್ಲಿ ಅಭಿವೃದ್ಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ ಹಿರಿಯರಾದ ಶ್ರೀನಿವಾಸ್ ಮಲ್ಯ ಸೇರಿದಂತೆ ಅನೇಕ ಗಣ್ಯರು ಈ ಜಿಲ್ಲೆಯನ್ನು ಮುನ್ನಲೆಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ,ಇಂದು ಸೌಹಾರ್ದತೆಯಲ್ಲಿ ಈ ಜಿಲ್ಲೆಯಲ್ಲಿ ಕೊರತೆ ಇದೆ .ನಮ್ಮ ನಡುವೆ ಸೌಹಾರ್ದತೆ ಸಹಬಾಳ್ವೆ ಮೆರೆದು ಹಿರಿಯರ ತ್ಯಾಗವನ್ನು ನಾವು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತರ ವಲಯದ ಮಾಜಿ ನಿರ್ದೇಶಕರಾದ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿ ಅವರಿಗೆ ಸೌಹಾರ್ದರತ್ನ ಪ್ರಶಸ್ತಿ, ಪುಣೆಯ ಖ್ಯಾತ ಮಕ್ಕಳ ತಜ್ಞರಾದ ಡಾ. ಸುಧಾಕರ್ ಶೆಟ್ಟಿ ಪುಣೆ ಮೂಡಬಿದ್ರೆ ಇವರಿಗೆ ಸಮಾಜ ರತ್ನ ಪ್ರಶಸ್ತಿ, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ಡಾ. ರೋಹನ್ ಮೊಂತೆರೋ ಅವರಿಗೆ ಉದ್ಯಮ ರತ್ನ ಪ್ರಶಸ್ತಿ, ಖ್ಯಾತ ಹಿರಿಯ ಶಸ್ತ್ರ ಚಿಕಿತ್ಸಾತಜ್ಞರಾದ ಡಾ. ಶ್ರೀರಾಮ್ ಭಟ್ ಎಂ ಅವರಿಗೆ ವೈದ್ಯರತ್ನ ಪ್ರಶಸ್ತಿ, ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಗಾಸ್ಟ್ರೋ ಎಂಟರಲಾಜಿ ಡಾ ಅನುರಾಗ್ ಜೆ .ಶೆಟ್ಟಿ ಇವರಿಗೆ ಬೆಸ್ಟ್ ಡಾಕ್ಟರ್ಸ್ ಅವಾರ್ಡ್, ಜನಪ್ರಿಯ ನಾಟಿವೈದ್ಯ ಬಂಟ್ವಾಳ ಅನಂತಾಡಿಯ ಗಂಗಾಧರ ಕರಿಯ ಪಂಡಿತ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿಈ ಸಮಾಜಕ್ಕೆ ಸೌಹಾರ್ದತೆ ಎನ್ನುವುದು ಬೀಜ ಮಂತ್ರವಾಗಲಿ .ಶಾಂತಿ ಸಾಮರಸ್ಯದ ಸಂದೇಶವನ್ನು ಇಂತಹ ಸೌಹಾರ್ದ ಸಂಗಮ ಕಾರ್ಯಕ್ರಮದ ಮೂಲಕ ರಾಷ್ಟ್ರ ವ್ಯಾಪಿಸಲಿ ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಹಿರಿಯ ನ್ಯಾಯವಾದಿ ಕೆ ದಯಾನಂದ ರೈ ಅವರು ಈ ದೇಶದ ಸಂವಿಧಾನದಲ್ಲಿ ನಾವೆಲ್ಲ ಒಂದಾಗಿ ಬ್ರಾತೃತ್ವದಿಂದ ಬದುಕಬೇಕು ಎಂದು ಬರೆದಿದೆ .ಈ ಸೌಹಾರ್ದತೆ ಎನ್ನುವುದು ಇಂತಹ ಕಾರ್ಯಕ್ರಮದ ಮೂಲಕ ಜಾತಿ ಮತ ಪಕ್ಷಗಳ ಭೇದವಿಲ್ಲದೆ ಪಸರಿಸಲಿ. ಜೊತೆಗೆ ವಿವಿಧ ಕ್ಷೇತ್ರದ ಸಾಧಕರುಗಳನ್ನು ಜಾತಿ ಮತ ಭೇದವಿಲ್ಲದೆ ಸಾಧನೆಯನ್ನು ಗುರುತಿಸಿ ಸನ್ಮಾನಿಸುವುದು ಅವರ ಮುಂದಿನ ನಡೆಗೆ ಪ್ರೇರಣೆಯಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಸಂಘಟಕರ ಪ್ರಯತ್ನ ಶ್ಲಾಘನೀಯವಾಗಿದೆ ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರನ್ನು ಮುನ್ನಲೆಗೆ ತಂದು ಗುರುತಿಸುವ ಜೊತೆಗೆ ಸೌಹಾರ್ದ ಸಂದೇಶವನ್ನು ನೀಡಿ ಶಾಂತಿ ಸಾಮರಸ್ಯಕ್ಕೆ ಕರೆ ನೀಡಿರುವುದು ಅಭಿನಂದನೀಯ ಕೆಲಸ. ಕಾರ್ಯಕ್ರಮದಲ್ಲಿ ಯುವ ವಾಹಿನಿ. ರಿ. ಕೇಂದ್ರ ಸಮಿತಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ನಾಟಕ ಸಿನಿಮಾ ಕಲಾವಿದೆ ಉಷಾ ದೇವರಾಜ್ ಕುಲಾಲ್ ಇವರಿಗೆ ಸೌಹಾರ್ದ ಪುರಸ್ಕಾರ ನೀಡಿ ಗೌರವಿಸಲಾಯಿತು ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯಾ ಆರ್.ಶೆಟ್ಟಿ, ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಶ್ ಬಿ ,ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯನ್ ಸಾಲ್ದಾನ, ಎಂಸಿಸಿ ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೋ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೂತ್ರ ರೋಗ ತಜ್ಞರಾದ ಡಾ. ಸದಾನಂದ ಪೂಜಾರಿ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್, ಮಂಗಳೂರು ಪ್ರೆಸ್ ಅಧ್ಯಕ್ಷ ಪಿ. ಬಿ .ಹರೀಶ್ ರೈ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ,ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮುಂತಾದವರು ಉಪಸ್ಥಿತರಿದ್ದರು .ಎಂಪಿ ಎಂ ಎಲ್ ಎ ನ್ಯೂಸ್ ನ ಸಂಪಾದಕರಾದ ಡಾ.ಅಶೋಕ್ ಶೆಟ್ಟಿ ಬಿ.ಎನ್. ಪ್ರಸ್ತಾವನೆ ಮಾತುಗಳನ್ನಾಡಿದರು. ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿ, ಎಸ್.ಆರ್ .ಪ್ರದೀಪ್ ಧನ್ಯವಾದ ಕಾರ್ಯಕ್ರಮ ನಿರೂಪಿಸಿದರು. ನರೇಶ್ ಸಸಿಹಿತ್ಲು, ಮಲ್ಲಿಕಾಶೆಟ್ಟಿ, ದಿನಕರ ಡಿ.ಬಂಗೇರ,ಡಾ.ಅಶೋಕ್ ಶೆಟ್ಟಿ ಬಿ .ಎನ್. ಪ್ರಶಸ್ತಿ ಪುರಸ್ಕೃತರ ವಿವರವನ್ನು ವಾಚಿಸಿದರು .ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು -,ಕನ್ನಡ ಚಲನ ಚಿತ್ರ ಹಿನ್ನೆಲೆ ಗಾಯಕರಾದ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸ ಮಂಜರಿ ಹಾಗೂ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಾಚಲನ. ರಿ. ಮಂಗಳೂರು ಕಲಾವಿದರಿಂದ ಯುವ ಜಾಗೃತಿ ಹಾಡುಗಳ ಮಿಶ್ರಣ ನಾಟಕ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು. ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ,ಡಿಸಿಪಿ ಸಿದ್ದಾರ್ಥ ಗೋಯಲ್,ಪಾಂಡೇಶ್ವರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ,ಪಾಂಡೇಶ್ವರ ಠಾಣಾ ಎಎಸ್ಐ ಹರೀಶ್, ಸುನಿಲ್ ಅವರಿಗೆ ಕಾರ್ಯಕ್ರಮದ ಸಂಘಟಕ ಡಾ.ಅಶೋಕ್ ಶೆಟ್ಟಿ ಬಿ. ಎನ್.ಅವರು ಧನ್ಯವಾದ ಸಲ್ಲಿಸಿದರು. 13ನೇ ಸೌಹಾರ್ದ ಸಂಗಮವು ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ನೇರಪ್ರಸಾರ ಗೊಂಡು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ಸೀನಿಯರ್ ಚೇಂಬರ್ ಅಧ್ಯಕ್ಷರಾಗಿ ತಾರಾನಾಥ ಕೊಟ್ಟಾರಿ. ಜು.29ರಂದು ಬಿಸಿರೋಡಿನಲ್ಲಿಪದಗ್ರಹಣ

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿಷ್ಠತ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ಟಿ. ತಾರಾನಾಥ ಕೊಟ್ಟಾರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಆನಂದ ಬಂಜನ್ ಪ್ರಕಟಿಸಿದ್ದಾರೆ.ಹಿರಿಯ ಜೇಸಿಗಳಾದ ಪಿ.ಮಹಮ್ಮದ್ (ಆಡಳಿತ) ಸಂದೀಪ್ ಸಾಲ್ಯಾನ್ (ಸಾರ್ವಜನಿಕ ಸಂಪರ್ಕ) ಮಹೇಶ ನಿಟಿಲಾಪುರ (ವ್ಯಕ್ತಿತ್ವವಿಕಸನ)ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್,ಜೊತೆಕಾರ್ಯದರ್ಶಿ ಯಾಗಿ ಯೋಗೀಶ ಬಂಗೇರ, ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಪಿಪಿಎಫ್ ಜಯಾನಂದ ಪೆರಾಜೆ, ಮಾಜಿಅಧ್ಯಕ್ಷ ಡಾ.ಆನಂದ ಬಂಜನ್ ನಿಯುಕ್ತಿಗೊಂಡಿದ್ದಾರೆ.ಹದಿನಾಲ್ಕು ಮಂದಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷ ಕೇದಿಗೆ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಗ್ರಹಣ ಸಮಾರಂಭವನ್ನು ಜು.29 ರಂದು ಬೆಳಿಗ್ಗೆ 10.25ಕ್ಕೆ ಬಿಸಿರೋಡಿನ ಪೊಳಲಿ ದ್ವಾರದ ಬಳಿ ನೂತನ ಸಭಾಂಗಣ ಅಕ್ಷಯ ಸಭಾಭವನ ಲೋಕಾರ್ಪಣೆ ಗೊಳ್ಳಲಿದೆ.ಪದಗ್ರಹಣ ಸಮಾರಂಭ11 ಗಂಟೆಗೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್ವಿಎಸ್ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಗಂಗಾಧರ ಆಳ್ವ ಮುಖ್ಯ ಅತಿಥಿಯಾಗಿ, ಗೌರವ ಅತಿಥಿಗಳಾಗಿ ಎಸ್ಸಿಐ ರಾಷ್ಟ್ರಾಧ್ಯಕ್ಷರಾದ ಎಂ.ಆರ್.ಜಯೇಶ್, ಮಾಜಿ ರಾಷ್ಟ್ರಾಧ್ಯಕ್ಷ ಡಾ.ಕೆ.ಅರವಿಂದ ರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕ

ಮಂಗಳೂರು: ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ದೇರೆಬೈಲ್‌ ಘಟಕವು 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ತಿಗೊಳಿಸಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಜೂನ್‌ 28 ರಂದು ಸಂಜೆ 5 ಗಂಟೆಗೆ ದೇರೆಬೈಲ್‌ ಮೋಸ್ಟ್ ಹೋಲಿ ರೆಡೀಮರ್‌ ಚರ್ಚ್‌ ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಚರ್ಚ್ ನ ಗೋಲ್ಡನ್‌ ಜ್ಯೂಬಿಲಿ ಹಾಲ್‌ ನಲ್ಲಿ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮ ನಡೆಯಲಿದೆ.ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಡಾ. ಜೋಸೆಫ್ ಮಾರ್ಟಿಸ್‌ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಘಟಕದ ಅಧ್ಯಕ್ಷ ನೆಲ್ಸನ್‌ ಕ್ಯಾಸ್ಟೆಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ವಿಗಾರ್‌ವಾರ್‌ ವಂದನೀಯ ಫಾ. ಜೇಮ್ಸ್ ಡಿ’ಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಫೆಡ್ರಿಕ್‌ ಮೊಂತೇರೊ, ಸ್ಥಾಪಕ ಆಧ್ಯಾತ್ಮಿಕ ನಿರ್ದೇಶಕ ಫೆರ್ಮಾಯ್‌ ಚರ್ಚ್ ಧರ್ಮಗುರು ವಂದನೀಯ ಫಾ. ಮಾರ್ಕ್ ಕ್ಯಾಸ್ಟೆಲಿನೊ, ಕ್ಯಾಥೊಲಿಕ್‌ ಸಭಾ ಮಂಗಳೂರು ಪ್ರದೇಶ್‌ ಅಧ್ಯಕ್ಷ ಸಂತೋಷ್‌ ಡಿ’ಸೋಜಾ, ದೇರೆಬೈಲ್‌ ಚರ್ಚ್ ಸಹಾಯಕ ಗುರು ವಂದನೀಯ ಫಾ. ನೆಲ್ಸನ್‌ ಸ್ಟೀವನ್‌ ಪೆರಿಸ್‌ ಅವರು ಉಪಸ್ಥಿತರಿರುವರು.ಕ್ಯಾಥೊಲಿಕ್‌ ಸಭಾ ಸಿಟಿ ವಲಯದ ಅಧ್ಯಕ್ಷೆ ಹಾಗೂ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ದೇರೆಬೈಲ್‌ ಚರ್ಚ್ ಉಪಾಧ್ಯಕ್ಷೆ ಶೀಲಾ ಡಿ’ಸೋಜಾ, ಕಾರ್ಯದರ್ಶಿ ಡೆನ್ಝಿಲ್‌ ಪಿಂಟೊ, ಸರ್ವ ಅಯೋಗಗಳ ಸಂಯೋಜಕ ಆನಿಲ್‌ ಪತ್ರಾವೊ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಥೊಲಿಕ್ ಸಭಾ ದೇರೆಬೈಲ್‌ ಘಟಕದ ಅದ್ಯಕ್ಷ ನೆಲ್ಸನ್‌ ಕ್ಯಾಸ್ಟೆಲಿನೊ, ಕಾರ್ಯದರ್ಶಿ ಶೈಲಾ ನೊರೊನ್ಹಾ ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಂಚಾಲಕ ವಿಕ್ಟರ್‌ ಕೊರೆಯಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಧರ್ಮಗುರು ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರಿಂದ ಹುದ್ದೆ ಸ್ವೀಕಾರ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ನೂತನ ಧರ್ಮಗುರುಗಳಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಜೂನ್ 20 ರಂದು ಹುದ್ದೆಯನ್ನು ವಹಿಸಿಕೊಂಡರು. ಅವರು ಕಳೆದ 17 ವರ್ಷಗಳಿಂದ ಕಂಕನಾಡಿ ಫಾದರ್‌ ಮುಲ್ಲರ್‌ ಸಮೂಹಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಶುಕ್ರವಾರ ಪಾಲ್ದನೆ ಚರ್ಚ್ ಗೆ ಆಗಮಿಸಿದ ಸಂದರ್ಭ ಧರ್ಮಗುರು ವಂದನೀಯ ಆಲ್ಬನ್‌ ಡಿ’ಸೋಜಾ, ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ,ಚರ್ಚ್‌ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌ ಕಾರ್ಯದರ್ಶಿ ಆಸ್ಟಿನ್‌ ಮೊಂತೇರೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ಮತ್ತು ಪದಾಧಿಕಾರಿಗಳು ಹಾರ್ದಿಕ ಸ್ವಾಗತ ಕೋರಿದರು. ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಿಟಿ ವಲಯದ ವಿಕಾರ್ ವಾರ್ ವಂದನೀಯ ಫಾ. ಜೇಮ್ಸ್ ಡಿ ಸೋಜಾ ಅವರು ಹುದ್ದೆ ಸ್ವೀಕಾರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಚರ್ಚಿನನಿರ್ಗಮನ ಧರ್ಮಗುರು ವಂದನೀಯ ಫಾ. ಆಲ್ಬನ್‌ ಡಿ’ಸೋಜಾ ಅವರು ತನಗೆ ಇದುವರೆಗೆ ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.ಬಳಿಕ ಮಾತನಾಡಿದ ನೂತನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊಅವರು ತನ್ನ ಮುಂದಿನ ಸೇವೆಗೆ ಚರ್ಚ್ ಆಡಳಿತ ಮಂಡಳಿ ಮತ್ತು ವಿಶ್ವಾಸಿಗಳ ಸಹಕಾರ ಕೋರಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಅವರು ಸ್ವಾಗತಿಸಿ ನೂತನ ಧರ್ಮಗುರುಗಳ ಕಿರು ಪರಿಚಯ ನೀಡಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಹಾಗೂ ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ವೇದಿಕೆಯಲ್ಲಿದ್ದ ಧರ್ಮಗುರುಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫಾವುಸ್ತಿನ್ ಲೋಬೊ, ಫಾ. ಅಜಿತ್ ಮಿನೇಜಸ್, ಫಾ. ಜೀವನ್ ಸಿಕ್ವೇರಾ, ಫಾ. ನೆಲ್ಸನ್ ಪಾಯ್ಸ್, ಫಾ. ಸಿಲ್ವೆಸ್ಟರ್ ಲೋಬೊ, ಫಾ. ರುಡಾಲ್ಫ್ ರವಿ ಡೆಸಾ, ಫಾ. ನೀಲೇಶ್ ಕ್ರಾಸ್ತಾ, ಫಾ. ಅಶ್ವಿನ್ ಕ್ರಾಸ್ತಾ, ಫಾ. ಜಾನ್ ವಾಸ್, ಡಾ. ಆಂಟನಿ ಸಿಲ್ವಾನ್, ಡಾ. ಉದಯ್ ಕುಮಾರ್, ಡಾ. ಕಿರಣ್ ಶೆಟ್ಟಿ, ಎಂ.ಪಿ. ನೊರೊನಾ, ನವೀನ್ ಡಿ ಸೋಜಾ, ಡಾ. ಕೆಲ್ವಿನ್ ಪಾಯಸ್ ಮುಂತಾದವರು ಉಪಸ್ಥಿತರಿದ್ದರು. ಕು. ಜೆನಿಟಾ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ

ಕೂಳೂರು ಚರ್ಚ್: ಕ್ಯಾಥೋಲಿಕ್ ಸಭಾ ಮತ್ತು ಐ .ಸಿ.ವೈ.ಎಂ. ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ

ಮಂಗಳೂರು: ಕೂಳೂರು ಸಂತ ಅಂತೋನಿ ಚರ್ಚಿನ ಕ್ಯಾಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಘಟಕದ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ರವಿವಾರ ಜೂನ್ 22 ರಂದು ಕೂಳೂರು ಮೇಲ್ ಕೊಪ್ಪಲ ಶ್ರೀಮತಿ ಮೇಝಿ ಟೀಚರ್ ಅವರ ಗದ್ದೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂದನೀಯ ಫಾ. ವಿಕ್ಟರ್ ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿದ್ದ ಎಪಿಸ್ಕೋಪಲ್ ಸಿಟಿ ವಲಯದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಐಡಾ ಪುರ್ಟಾಡೊ, ಐ.ಸಿ.ವೈ.ಎಂ. ಕೇಂದ್ರೀಯ ಸಮಿತಿ ಅಧ್ಯಕ್ಷ ವಿನ್ ಸ್ಟನ್ ಜೋಯಲ್ ಸಿಕ್ವೇರಾ ಮತ್ತು ತೀರ್ಪುಗಾರ ಪ್ರವೀಣ್ ಲೋಬೊ ಬಿಜೈ ಅವರು ಸಂಯುಕ್ತವಾಗಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗದ್ದೆಯಲ್ಲಿ ನಡೆದ ಸ್ಪರ್ಧಾ ಕೂಟದಲ್ಲಿ ಮೊದಲ ಬಹುಮಾನವನ್ನು ಸೈಂಟ್ ಅನ್ನಾ ವಾರ್ಡ್, ದ್ವಿತೀಯ ಬಹುಮವನ್ನು ಸಂತ ಅಂತೋನಿ 3 ನೇ ವಾರ್ಡ್ ಹಾಗೂ ತೃತೀಯ ಬಹುಮಾನವನ್ನು ಸಂತ ಜೋಸೆಫ್ ವಾರ್ಡ್ ಪಡೆದು ಕೊಂಡಿತು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ಸ್ವಾಗತಿಸಿ ಐ.ಸಿ.ವೈ. ಎಂ. ಅಧ್ಯಕ್ಷ ಆರ್ವಿನ್ ಮೊಂತೆರೊ ವಂದಿಸಿದರು. ರೀಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರಿಗೆ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ವತಿಯಿಂದ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರದ ಪಾಲ್ದನೆ ಸಂತ ತೆರೆಸಾ ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ನಿವೃತ್ತಿ ಹೊಂದಿ ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಚರ್ಚಿನ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ (ತಿಸ್ರೀ ಓಡ್ಡ್) ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.ಮಂಗಳೂರು ಮತ್ತು ಅಖಿಲ ಕರ್ನಾಟಕ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ಇದರ ಪ್ರಾಂತೀಯ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಪ್ರಕಾಶ್ ಲೋಬೊ ಅವರು ನಿವೃತ್ತಿ ಹೊಂದಿದ ಫಾ. ಆಲ್ಬನ್ ಡಿ ಸೋಜಾ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪಾಲ್ದನೆ ಘಟಕದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸ್ವೀಬರ್ಟ್ ಡಿ ಸೋಜಾ ಸ್ವಾಗತಿಸಿದರು. ಅಥಿತಿಗಳಾಗಿ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಫಾ. ಆಲ್ಬನ್ ಡಿ ಸೋಜಾ ಅವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಕೂಳೂರು ಚರ್ಚ್: ಕ್ಯಾಥೋಲಿಕ್ ಸಭಾ ಮತ್ತು ಐ .ಸಿ.ವೈ.ಎಂ. ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ

ಮಂಗಳೂರು: ಕೂಳೂರು ಸಂತ ಅಂತೋನಿ ಚರ್ಚಿನ ಕ್ಯಾಥೋಲಿಕ್ ಸಭಾ ಮತ್ತು ಐ.ಸಿ.ವೈ.ಎಂ. ಘಟಕದ ವತಿಯಿಂದ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ರವಿವಾರ ಜೂನ್ 22 ರಂದು ಕೂಳೂರು ಮೇಲ್ ಕೊಪ್ಪಲ ಶ್ರೀಮತಿ ಮೇಝಿ ಟೀಚರ್ ಅವರ ಗದ್ದೆಯಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ವಂದನೀಯ ಫಾ. ವಿಕ್ಟರ್ ವಿಜಯ್ ಲೋಬೊ, ಮುಖ್ಯ ಅತಿಥಿಗಳಾಗಿದ್ದ ಎಪಿಸ್ಕೋಪಲ್ ಸಿಟಿ ವಲಯದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಐಡಾ ಪುರ್ಟಾಡೊ, ಐ.ಸಿ.ವೈ.ಎಂ. ಕೇಂದ್ರೀಯ ಸಮಿತಿ ಅಧ್ಯಕ್ಷ ವಿನ್ ಸ್ಟನ್ ಜೋಯಲ್ ಸಿಕ್ವೇರಾ ಮತ್ತು ತೀರ್ಪುಗಾರ ಪ್ರವೀಣ್ ಲೋಬೊ ಬಿಜೈ ಅವರು ಸಂಯುಕ್ತವಾಗಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗದ್ದೆಯಲ್ಲಿ ನಡೆದ ಸ್ಪರ್ಧಾ ಕೂಟದಲ್ಲಿ ಮೊದಲ ಬಹುಮಾನವನ್ನು ಸೈಂಟ್ ಅನ್ನಾ ವಾರ್ಡ್, ದ್ವಿತೀಯ ಬಹುಮವನ್ನು ಸಂತ ಅಂತೋನಿ 3 ನೇ ವಾರ್ಡ್ ಹಾಗೂ ತೃತೀಯ ಬಹುಮಾನವನ್ನು ಸಂತ ಜೋಸೆಫ್ ವಾರ್ಡ್ ಪಡೆದು ಕೊಂಡಿತು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು.ಕ್ಯಾಥೊಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ಸ್ವಾಗತಿಸಿ ಐ.ಸಿ.ವೈ. ಎಂ. ಅಧ್ಯಕ್ಷ ಆರ್ವಿನ್ ಮೊಂತೆರೊ ವಂದಿಸಿದರು. ರೀಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Scroll to Top