Author name: editor

ಪ್ರಾದೇಶಿಕ ವಾರ್ತೆಗಳು

ಜೂನ್ 2 ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಜು.2 ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್.ಯು.ಎಚ್. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ದೈಜಿವರ್ಲ್ಡ್ ಸಂಪಾದಕ ವಾಲ್ಟರ್ ನಂದಳಿಕೆ ಅವರು “ಮಾಧ್ಯಮದ ಸವಾಲುಗಳು” ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.ವಾರ್ತಾ ಇಲಾಖೆಯಹಿರಿಯ ಸಹಾಯಕ ನಿರ್ದೇಶಕಖಾದರ್ ಷಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಮಕೃಷ್ಣ .ಆ‌ರ್ ಉಪಸ್ಥಿತರಿರುವರು ಎಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ವೈದ್ಯರತ್ನಗಂಗಾಧರ ಕರಿಯ ಪಂಡಿತ್ ಅವರಿಗೆ ‘ಸೇವಾ ರತ್ನ ಪ್ರಶಸ್ತಿ’ ಪ್ರದಾನ

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‌ಹಾಲ್)ನಲ್ಲಿ ನಡೆಯಿತು.ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‌ರವರು ಹೇಳಿದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭ್ರಾತೃತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.ನರೇಶ್‌ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.ಈ ಸೌಹಾರ್ದ ಸಂಗಮದಲ್ಲಿ ಬಂಟ್ವಾಳ ಅನಂತಾಡಿಯ ವೈದ್ಯರತ್ನ ನಾಟಿ ವೈದ್ಯ ಗಂಗಾಧರ ಕರಿಯ ಪಂಡಿತ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಗಂಗಾಧರ ಕರಿಯ ಪಂಡಿತ:ಭಾರತೀಯ ವೈದ್ಯ ಪದ್ಧತಿಯ ಮೂಲವೆಂದೇ ಪರಿಗಣಿತವಾದ ಸಾಂಪ್ರದಾಯಿಕ ಅಥವಾ ಜನಪದೀಯ ಮೂಲಿಕಾ ಚಿಕಿತ್ಸಾ ವಿಧಾನವಾದ ನಾಟಿವೈದ್ಯ ಪದ್ಧತಿಯ ಮೇರು ಚಿಕಿತ್ಸಕ ಕೀರ್ತಿ ಶೇಷ ಅನಂತಾಡಿ ಶ್ರೀ ಕುಂಡ ಪಂಡಿತರ ಹಿರಿಯ ಮಗ ಕೀರ್ತಿಶೇಷ ಶ್ರೀ ಕರಿಯ ಪಂಡಿತರು ಮತ್ತು ಶ್ರೀಮತಿ ಮಾನಕ್ಕ ದಂಪತಿಗಳ ತೃತೀಯ ಪುತ್ರರಾಗಿ ಸನ್ಮಾನ್ಯ ಶ್ರೀ ನಾಟಿ ವೈದ್ಯ ವೈದ್ಯ ರತ್ನ ಗಂಗಾಧರ ಕರಿಯ ಪಂಡಿತ ಅವರು ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ದಾಸಕೋಡಿ (ಗೋಳಿಕಟ್ಟೆ)ಯಲ್ಲಿ ದಿನಾಂಕ 1.6.1971ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕ್ರಮವಾಗಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಅನಂತಾಡಿಯಲ್ಲಿ ಮತ್ತು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ, ಪದವಿಪೂರ್ವ ವಿದ್ಯಾಲಯ ಕೊಂಬೆಟ್ಟು ಪುತ್ತೂರಿನಲ್ಲಿ ಪೂರೈಸಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಯೆಯ್ಯಾಡಿ ಮಂಗಳೂರಿನಲ್ಲಿ 2 ವರ್ಷಗಳ ಎಲೆಕ್ಟ್ರೀಶಿಯನ್ ಡಿಪ್ಲೊಮಾ ಮತ್ತು ಕ.ರಾ.ರ.ಸಾರಿಗೆ ಸಂಸ್ಥೆಯಲ್ಲಿ 2 ವರ್ಷಗಳ ಮೆಕಾನಿಕ್ ತರಬೇತಿಯನ್ನು ಪಡೆದಿರುವರು. ನಾಟಿವಿದ್ಯೆಯನ್ನು ಕೀರ್ತಿಶೇಷ ಕುಂಡ ಪಂಡಿತರು ಹಾಗೂ ತಂದೆ ಕೀರ್ತಿಶೇಷ ಕರಿಯ ಪಂಡಿತರ ಆಶೀರ್ವಾದ ಪಡೆದು ದೈವಾನುಗ್ರಹದ ಜೊತೆಗೆ ತಮ್ಮ ತಂದೆಯವರಿಂದ ಕರಗತ ಮಾಡಿಕೊಂಡು, ಉಡುಪಿ ಪೇಜಾವರ ಮಠದ ಹಿಂದಿನ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥರ ಆಶೀವಾರ್ದದೊಂದಿಗೆ ನಾಟಿವೈದ್ಯಕೀಯ ಲೋಕದಲ್ಲಿ ಯಶಸ್ವಿ ನಾಟಿ ವೈದ್ಯರಾಗಿ ಜನಮನ್ನಣೆ ಗಳಿಸಿದರು.2002-05ರ ತನಕ ಉಳ್ಳಾಲದಲ್ಲಿ, 2006-14ರ ತನಕ ಬೆಂಗಳೂರಿನಲ್ಲಿ, 2014ರಿಂದ ತಮ್ಮ ಸ್ವಗೃಹದಲ್ಲಿ ನಾಟಿವೈದ್ಯಾಲಯ ತೆರೆದು ಪಕ್ಷವಾತ, ವಾತಕ್ಕೆ ಸಂಬಂಧಿಸಿದ ಕಾಯಲೆಗಳು, ಮಹಿಳೆಯರು ಮತ್ತು ಮಕ್ಕಳ ಕಾಯಿಲೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಿ, ತಮ್ಮ ಸೇವಾವೃತ್ತಿಯಲ್ಲಿ ಅಸಂಖ್ಯಾತ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಡುಪಿ ಪೇಜಾವರ ಅಧೋಕ್ಷಜ ವಂಶದ ಸ್ವರ್ಗೀಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರಿಗೆ ಚಿಕಿತ್ಸೆ ನೀಡಿ ಶ್ರೀಪಾದರಿಂದ ಆಶೀರ್ವಾದ ಪ್ರಸಾದ ಪಡೆದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.ಅನಂತಾಡಿಯ ಕೊರಗ ಬಡಕುಟುಂಬವೊಂದರ ಮನೆ ನಿರ್ಮಾಣಕ್ಕೆ ಗರಿಷ್ಠ ಸಹಕಾರ ನೀಡಿ ಸಮಾಜದಲ್ಲಿ ನಿಸ್ವಾರ್ಥ ಸೇವಕನಾಗಿ ಧಾರ್ಮಿಕ, ಸಾಮಾಜಿಕ ಸೇವಾಕರ್ತರಾಗಿ, ಕೃಷಿಕರಾಗಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ, ಕ್ರೀಡಾ ಪೋಷಕರಾಗಿ ಸಮಾಜಕ್ಕೆ ನೀಡಿದ ಬಹುಮುಖ ಸೇವೆ ಮತ್ತು ಸಾಧನೆಯನ್ನು ಗುರುತಿಸಿ 2018ರಲ್ಲಿ ಶಾಸ್ತ್ರಿ ವೈಂಡಿಂಗ್ ರವರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ, 2019ರಲ್ಲಿ ಯಕ್ಷ ಮಂಜುಳ ಕದ್ರಿ ಇವರ ದಶಮಾನೋತ್ಸವ ಸಂಭ್ರಮದಲ್ಲಿ ಸನ್ಮಾನ.ದಿನಾಂಕ 02-02-2020ರಂದು ಕಾಸರಗೋಡು ಕರ್ನಾಟಕ ಸ್ವಜಾತಿ ಬಾಂಧವರ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 21-01-2022ರಂದು ಪಡುಬಿದ್ರೆ ಎರ್ಮಾಳ್ ನಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 26-02-2022ರಲ್ಲಿ ‘ಒಪ್ಪಿಕೋ ಪಚ್ಚೆವನಸಿರಿ ಅಭಿಯಾನ’ ನಿರಂತರ ಕಾರ್ಯಕ್ರಮದಲ್ಲಿ ಪೇಜಾವರ ಅದೋಕ್ಷಜ ಮಠ ಉಡುಪಿ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಂದ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 06-11-2022ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮಾಣಿ ಇದರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 28-01-2023ರಂದು ನೇರಳಕಟ್ಟೆ ಗಣೇಶನಗರದಲ್ಲಿ ನೇತಾಜಿ ಸುಭಾಸ್‌ಚಂದ್ರ ಬೋಸ್‌ರ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 18-07-2024ರಂದು ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ) ಮೂಡಬಿದಿರೆ ಮತ್ತು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಅಂಗಸಂಸ್ಥೆ (NTC-AOM) ಇದರ ಸಹಯೋಗದ ಶ್ರೀ ರಮಾರಾಣಿ ಜೈನ ಸಂಶೋಧನಾ ಸಂಸ್ಥಾನದಲ್ಲಿ ಜರುಗಿದ ‘ಒಪ್ಪಿಕೋ ಪಚ್ಚೆವನಸಿರಿ’ ಜಾಗೃತಿ ಅಭಿಯಾನ ಜೈನ ಮಹಿಳೆ ಸಿರಿದೇವಿ (ವನಸಿರಿ) ಹೆಸರಿನಲ್ಲಿ ಕೊಡಮಾಡಲ್ಪಟ್ಟ “ಪ್ರಾಚ್ಯ ಪಚ್ಚೆ ವನಸಿರಿ ವೈದ್ಯರತ್ನ’ ಪ್ರಶಸ್ತಿ,ದಿನಾಂಕ 22-09-2024ರಂದು ನವಭಾರತ್ ಯುವಕ ಸಂಘ ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ‘ನವ ನಕ್ಷತ್ರ’ 2024 ಸನ್ಮಾನ ಮತ್ತು ಸನ್ಮಾನ ಪತ್ರ,ದಿನಾಂಕ 12-10-2024ರಂದು ಶ್ರೀದೇವಿ ಸೇವಾ ಟ್ರಸ್ಟ್ (ರಿ) ದೇವಿನಗರ ಅನಂತಾಡಿ ಇದರ ಆಶ್ರಯದಲ್ಲಿ ನಡೆದ ದಸರಾ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸನ್ಮಾನ ಪತ್ರ,ಸರಳ ಸಜ್ಜನಿಕೆಯ ಸಂವೇದನಾಶೀಲ ವ್ಯಕ್ತಿತ್ವದ ಶ್ರೀ ಗಂಗಾಧರ ಪಂಡಿತರು ಪತ್ನಿ ಶ್ರೀಮತಿ ಸುನೀತಾ ಮಕ್ಕಳಾದ ಶ್ರವಣ್ ಮತ್ತು ಕುಮಾರಿ ವರ್ಷಾರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.ಸರಳ ಸಜ್ಜನಿಕೆಯ ಸಂವೇದನಾಶೀಲ ವ್ಯಕ್ತಿತ್ವದ ಜನಪ್ರಿಯ ನಾಟಿ ವೈದ್ಯರಾದ ಶ್ರೀ ಗಂಗಾಧರ ಪಂಡಿತರವರು ಸಲ್ಲಿಸಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ Mp mla*s ನ್ಯೂಸ್ ತನ್ನ 13ನೇ ಸೌಹಾರ್ದ ಸಂಗಮದಲ್ಲಿ ವೈದ್ಯರತ್ನ ಶ್ರೀ ಗಂಗಾಧರ ಕರಿಯ ಪಂಡಿತರವರಿಗೆ ‘ಸೇವಾ ರತ್ನ’ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

ಟ್ರೈಲರ್ ನಲ್ಲೇ ನಿರೀಕ್ಷೆ ಹುಟ್ಟಿಸಿರುವ “ಜಂಗಲ್ ಮಂಗಲ್” ಸಿನಿಮಾ ಜುಲೈ 4ಕ್ಕೆ ತೆರೆಗೆ! ಕಾಡಿನೊಂದಿಗೆ ಅವಿನಾಭಾವ ಸಂಬಂಧದ ಚಿತ್ರಣ

ಮಂಗಳೂರು: ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಮನುಷ್ಯ ಮತ್ತು ಕಾಡಿನ ನಡುವಿನ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ನಿಜವಾದ ಘಟನೆಯನ್ನು ಆಧರಿಸಿ ನಿರ್ಮಿಸಿರುವ ‘ಜಂಗಲ್ ಮಂಗಲ್’ ಇದೇ ಜುಲೈ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ರಕ್ಷಿತ್ ಕುಮಾರ್ ತಿಳಿಸಿದರು. ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದರು. ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸಣ್ಣ ಹಳ್ಳಿ‌ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆದಿದೆ. ಹೆಚ್ಚಾಗಿ ಕರಾವಳಿಯ ಕಲಾವಿದರನ್ನು ಸೇರಿಸಿ ನಿರ್ಮಿಸಲಾಗಿದೆ ಎಂದರು.ಚಿತ್ರದ ನಾಯಕ ನಟ ಯಶ್ ಶೆಟ್ಟಿ ಮಾತಾಡಿ, ಈ ಚಿತ್ರದಲ್ಲಿ ನನ್ನದು ಸಪೋರ್ಟಿವ್ ನಟನೆಯಾಗಿದ್ದು, ನಿಜವಾಗಿಯೂ ಇದರಲ್ಲಿ ಕಥೆ ಹಾಗೂ ನಿರ್ದೇಶಕರೇ ಹೀರೋ. ಚಿತ್ರದ ಕಥೆಯನ್ನು ಸಿಂಪಲ್ ಸುನಿ ಅವರು ಮೆಚ್ಚಿ ಅವರ ಅವರ ಬ್ಯಾನರ್ ನಲ್ಲಿ ಅವಕಾಶ ಕೊಟ್ಟರು ಎಂದರು. ಪೋಷಕ ನಟ ಚಂದ್ರಹಾಸ್ ಉಳ್ಳಾಲ್ ಮಾತನಾಡಿ, ಕರಾವಳಿಯ ಸಿದ್ಧಸೂತ್ರ ಬಿಟ್ಟು ಹೊಸ ಚಿತ್ರ ಬರ್ತಾ ಇದ್ದು ಅದರಲ್ಲಿ ಜಂಗಲ್ ಮಂಗಲ್ ಕೂಡಾ ಒಂದು. ಕಾಡು ತನ್ನ ನಿಗೂಢತೆ ಎಂದೂ ಬಿಟ್ಟು ಬಿಡುವುದಿಲ್ಲ. ಆದರೆ ಕಾಡು ಪ್ರೀತಿಯನ್ನು ಅಪ್ಪುತ್ತದೆ ಎಂದು ತೋರಿಸುವ ಕಾಡಿನ ನಿಗೂಢತೆ ಈ ಚಿತ್ರದಲ್ಲಿ ಇದೆ ಎಂದರು.ಹಾಸ್ಯ ನಟ ಪುಷ್ಪರಾಜ್ ಬೊಳ್ಳಾರ್ ಮಾತನಾಡಿ, ಶೂಟಿಂಗ್ ಸಮಯ ನಿರ್ದೇಶಕ ರಕ್ಷಿತ್ ಭಯಪಟ್ಟಿದ್ದರು. ಆದರೆ ಟ್ರೈಲರ್ ಬಂದ ಮೇಲೆ ಲವಲವಿಕೆಯಿಂದ ಇದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲರೂ ಗೆಲ್ಲಿಸಿ ಎಂದರು. ನಾಯಕಿ ಹರ್ಷಿತಾ ಮಾತನಾಡಿ, ಶೂಟಿಂಗ್ ನಿಮಿತ್ತ ಬೆಂಗಳೂರಿನಿಂದ ಬಂದೆ, ಇದೀಗ ನಾನು ಮಂಗಳೂರಿನವಳೇ ಆಗಿದ್ದೇನೆ. ಹಸಿರಿನ ಕಾನನದಲ್ಲಿ ಚಿತ್ರೀಕರಿಸಿದ ನೈಜತೆಗೆ ತೀರಾ ಹತ್ತಿರವಾದ ಸಿನಿಮಾ ಇದು ಎಂದರು.ಸಿನಿಮಾ ಕುರಿತು:ಸುನಿ ಸಿನಿಮಾಸ್ (ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ಚಿತ್ರ ತಯಾರಾಗಿದೆ. ರಕ್ಷಿತ್ ಕುಮಾರ್ ಸಿನಿಮಾವನ್ನು ನಿರ್ದೇಶಿಸಿದ್ದು ತಾರಾಗಣದಲ್ಲಿ ಯಶ್ ಶೆಟ್ಟಿ, ಉಗ್ರಂ ಮಂಜು, ಹರ್ಷಿತಾ ರಾಮಚಂದ್ರ, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ ಚಂದ್ರಹಾಸ್ ಉಳ್ಳಾಲ್ ಅಭಿನಯಿಸಿದ್ದಾರೆ.ಛಾಯಾಗ್ರಹಣ: ವಿಷ್ಣುಪ್ರಸಾದ್, ಸಂಗೀತ: ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಸಂಕಲನ: ಮನು ಶೇಡ್ಗಾರ್, ಕಲಾ ನಿರ್ದೇಶನ: ವರದರಾಜ್ ಕಾಮತ್.ಪೂರ್ತಿಯಾಗಿ ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ಮಡಪ್ಪಾಡಿ ಎಂಬಲ್ಲಿ ಸತತ‌ 30 ದಿನಗಳ ಚಿತ್ರೀಕರಣ‌ ನಡೆದಿದೆ.ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ ಚಂದ್ರಹಾಸ್ ಉಳ್ಳಾಲ್ ಇತ್ಯಾದಿ ಕರಾವಳಿಯ ಹಲವು ಪ್ರತಿಭಾನ್ವಿತ ನಟರ ಜೊತೆಗೆ ಚಿತ್ರೀಕರಣ ನಡೆದ ಮಡಪ್ಪಾಡಿಯ ಒಂದಷ್ಟು ಗ್ರಾಮಸ್ಥರು ಕೂಡ ನಟಿಸಿರುವುದು ವಿಶೇಷ.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ: ಲಾರಿ ಮತ್ತು ದ್ವಿಚಕ್ರ ವಾಹನ ಅಪಘಾತ – ಸವಾರ ಸ್ಥಳದಲ್ಲೇ ಸಾವು.

ಬಂಟ್ವಾಳ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಿ.ಸಿರೋಡಿನ ಅಜ್ಜಿಬೆಟ್ಟು ಕ್ರಾಸ್‌ನಲ್ಲಿ ಜೂ. 30ರಂದು ನಡೆದಿದೆ.ಸ್ಕೂಟ‌ರ್ ಸವಾರ ಚಿದಾನಂದ ಅವರು ಬಿ.ಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್‌ನಲ್ಲಿ ಕ್ರಾಸ್ ಮಾಡುವ ವೇಳೆ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಚಿದಾನಂದ ಅವರು ಬಂಟ್ವಾಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಯಾಗಿದ್ದಾರೆ. ಇವರಿಗೆ ಒಂದು ಹೆಣ್ಣು ಮತ್ತು ಗಂಡು ಮಗುವಿದೆ. ಪತ್ನಿ ಶಂಭೂರು ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಿ ಸಿ ರೋಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮನೆಮಂದಿ ಜೊತೆ ಕೂತು ನೋಡಲೇ ಬೇಕಾದ್ ಸೂಪರ್ ಹಿಟ್ ಚಿತ್ರ “X & Y”.

ಮಂಗಳೂರು -“ಎಕ್ಸ್ ಆಂಡ್ ವೈ” ಟೈಟಲ್ ಇಂಗ್ಲೀಷ್ ಆಗಿದ್ರೂ ಪಕ್ಕಾ ಕನ್ನಡ ಸಿನಿಮಾ. ಮನೆಮಂದಿ ಒಟ್ಟಿಗೆ ಕೂತು ನೋಡಬಹುದಾದ ಸೀದಾ ಸಾದಾ ಸಿನಿಮಾ. ಈ ಬಾರಿ ಸತ್ಯಪ್ರಕಾಶ್ ಡಿಫರೆಂಟ್ ಆಗಿರೋ ಕತೆಯನ್ನು ಹಿಡ್ಕೊಂಡು ಬಂದು ಅದನ್ನು ತಾನೇ ಮುಖ್ಯಪಾತ್ರದಲ್ಲಿ ನಟಿಸೋ ಮೂಲಕ ಸ್ವಾರಸ್ಯಕರವಾಗಿ ಸಿನಿಮಾ ಪ್ರೇಮಿಗಳಿಗೆ ನೀಡಿದ್ದಾರೆ. ಹೀಗಾಗಿ ಚಿತ್ರ ಕಷ್ಟವಾಗದೆ ಇಷ್ಟವಾಗುತ್ತೆ. ಸಿನಿಮಾದ ಹೈಲೈಟ್ ನಟ ಅಥರ್ವ ಪ್ರಕಾಶ್ ಸಿಂಪಲ್ ನಟನೆ. ಎಲ್ಲೂ ನಟಿಸುತ್ತಿದ್ದಾನೆ ಅಂತ ಗೊತ್ತಾಗದಷ್ಟು ಸಹಜವಾಗಿ ಅಥರ್ವ ಅಭಿನಯಿಸಿದ್ದು ನಟಿಯರಾಗಿ ಬೃಂದಾ ಆಚಾರ್ಯ, ಅಯನ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ನಮ್ಮಬದುಕು ಭಾವನೆ ಗಳ ಕುರಿತ ಸೊಗಸಾದ ವಿಶ್ಲೇಷಣೆಯಿದೆ. ವೃದ್ಧಾಪ್ಯದಲ್ಲಿ ಅನಾಥಶ್ರಮ ಸೇರುವ ಹೆತ್ತವರು, ಮಕ್ಕಳ ದಾರ್ಷ್ಟ್ಯತನ ಎಲ್ಲವೂ ಸಿನಿಮಾದಲ್ಲಿದ್ದು ಮನರಂಜನೆ ಜೊತೆಗೆ ಒಳ್ಳೆಯ ಸಂದೇಶ ಕೂಡ ಸಿನಿಮಾದಲ್ಲಿದೆ. ಇನ್ನು ಸುಂದರ್, ದೊಡ್ಡಣ್ಣ, ವೀಣಾ ಸುಂದರ್ ರಂತಹ ಹಿರಿಯರು ಕೂಡ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಸಿನಿಮಾ ಮಿಸ್ ಮಾಡ್ದೆ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ.©️ಶಶಿ ಬೆಳ್ಳಾಯರು

ಪ್ರಾದೇಶಿಕ ವಾರ್ತೆಗಳು

ಕನ್ನಡಕ್ಕೊಬ್ಬ ಪ್ರತಿಭಾನ್ವಿತ ನಾಯಕ ನಟ ಅಥರ್ವ ಪ್ರಕಾಶ್‌

ಅಥರ್ವ ಪ್ರಕಾಶ್‌… ಈ ಹೆಸರು ಈಗಾಗಲೇ ತುಳು- ಕನ್ನಡ ಚಿತ್ರರಂಗದಲ್ಲಿ ಪರಿಚಿತವಾಗಿದೆ. ತುಳುವಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಸ್ಯಾಂಡಲ್‌ವುಡ್‌ನ‌ಲ್ಲೂ ತನ್ನ ಆಕರ್ಷಕ ರೂಪ ಹಾಗೂ ಅದ್ಭುತ ನಟನೆಯಿಂದ ಚಿತ್ರೋದ್ಯಮಿಗಳು ಹಾಗೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರು ಕನ್ನಡಕ್ಕೊಬ್ಬ ಪ್ರತಿಭಾನ್ವಿತ ನಟರಾಗಿದ್ದು, ಇವರ ನಟನೆಯ ಎಕ್ಸ್ ಆ್ಯಂಡ್ ವೈ ಜೂನ್ 26 ರಂದು ಬಿಡುಗಡೆಗೊಂಡಿದೆ.ಅತ್ಯಂತ ಪ್ರತಿಭಾನ್ವಿತ ಹಾಗೂ ಹೊಸತನದ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ, ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳಿಗೆ ಭಾಜನರಾಗಿರುವ ನಿರ್ದೇಶಕ ಸತ್ಯಪ್ರಕಾಶ್‌ ಅವರು ಅಥರ್ವ ಪ್ರಕಾಶ್‌ನಲ್ಲಿರುವ ನಟನನ್ನು ಹೆಚ್ಚು ಹೊಳಪಾಗಿಸಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಬಳಿಕ ಅಥರ್ವ ಪ್ರಕಾಶ್‌ ಏರುತ್ತಿರುವ ಎತ್ತರ, ಸಾಗುತ್ತಿರುವ ದಾರಿ ವಿಶೇಷವಾದುದು. ಈಗಾಗಲೇ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್‌ ಆಫ್ ದಿ ಮ್ಯಾಚ್‌ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಸತ್ಯ ಪ್ರಕಾಶ್ ಪ್ರಸಿದ್ದಿ ಪಡೆದಿದ್ದಾರೆ. ಸತ್ಯ ಪ್ರಕಾಶ್ ರ ಮ್ಯಾನ್ ಆಫ್ ದಿ ಮ್ಯಾಚ್ ನಲ್ಲಿ ಅಥರ್ವ ಪ್ರಕಾಶ್‌ ಅವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಸತ್ಯ ಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಎಕ್ಸ್‌ ಆ್ಯಂಡ್‌ ವೈ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಥರ್ವ ಪ್ರಕಾಶ್‌ ಈಗ ಬೇಡಿಕೆಯ ನಟನಾಗಿ ರೂಪುಗೊಳ್ಳುತ್ತಿದ್ದಾರೆ.ಅಥರ್ವ ನಟನೆಯ ಎಕ್ಸ್‌ ಆ್ಯಂಡ್‌ ವೈ ಯಶಸ್ವಿ ಪ್ರದರ್ಶನ ಗೊಳ್ಳುತ್ತಿದೆ.ಅದಾಗಿ ಸರಿಸುಮಾರು ಮತ್ತೊಂದು ತಿಂಗಳಲ್ಲಿ ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ತಯಾರಾದ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್‌ವೆಜ್‌ ಆಗೋಸ್ಟ್ 1 ರಂದು ಬಿಡುಗಡೆಯಾಗಲಿದೆ. ಹೆಚ್ಚುಕಡಿಮೆ ಒಂದು ತಿಂಗಳಲ್ಲಿ ಇವರ ಎರಡು ಸಿನಿಮಾಗಳು ತೆರೆ ಬಿಡುಗಡೆಯಾಗುವ ಮೂಲಕ ಕರ್ನಾಟಕದಲ್ಲಿ ಇವರು ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ. ಆಕರ್ಷಕ ರೂಪ, ಅದಕ್ಕೆ ತಕ್ಕಂಥ ದೇಹ, ಎಲ್ಲರಲ್ಲೂ ಗೌರವಿಸುವ ಗುಣ, ಶಿಸ್ತು, ಸಮಯಪಾಲನೆ ಮುಂತಾದವುಗಳಿಂದ ನಿರ್ದೇಶಕರ ಅಚ್ಚುಮೆಚ್ಚಿನ ನಟನಾಗಿ ರೂಪುಗೊಂಡಿರುವ ಅಥರ್ವ ಪ್ರಕಾಶ್‌ಗೆ ಕನ್ನಡ ಹೊರತಾದ ಬೇರೆ ಭಾಷೆಗಳಿಂದಲೂ ಬೇಡಿಕೆ ಬರುತ್ತಿದೆ ಎಂಬುದು ಹೆಮ್ಮೆಯ ಸಂಗತಿ.ಭೂಮಿಯಲ್ಲಿ ಜನ್ಮ ತಾಳದೇ ಇರುವಂಥ ಆತ್ಮದ ಕಥೆಯನ್ನು ಹೇಳುವ ಎಕ್ಸ್‌ ಆ್ಯಂಡ್‌ ವೈ ಈ ಕಾರಣದಿಂದಲೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನಾನ್‌ವೆಜ್‌ ಕೂಡ ಹೊಸ ತಲೆಮಾರಿನ ಯುವಜನತೆಯನ್ನು ಸೆಳೆಯುವ ನಿರೀಕ್ಷೆ ಇದೆ. ಯುವ ಮನಸ್ಸುಗಳ ತಲ್ಲಣಗಳನ್ನು ಹಾಸ್ಯಪ್ರಧಾನವಾಗಿ ಹಾಗೂ ಮನಸ್ಪರ್ಶಿಯಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಡುವ ನಾನ್‌ವೆಜ್‌ ಒಂದು ಭಿನ್ನ ಸಿನಿಮಾ. ಈ ಎರಡೂ ಸಿನಿಮಾಗಳು ಅಥರ್ವನಿಗೆ ಹೊಸ ಅವಕಾಶಗಳ ಹೆಬ್ಟಾಗಿಲನ್ನೇ ತೆರೆದಿಡಲಿದೆ ಎಂದು ಹೇಳಲಾಗುತ್ತಿದೆ.ಕನ್ನಡ ಚಿತ್ರರಂಗ ಹೊಸ ನಾಯಕ ನಟರಿಗಾಗಿ ಎದುರುನೋಡುವ ಕಾಲವಿದು. ಅಂಥ ಹೊತ್ತಿನಲ್ಲಿ ಮಿಂಚುತ್ತಿರುವ ಅಥರ್ವ ಪ್ರಕಾಶ್‌ ಈಗ ಎಲ್ಲರ ಭರವಸೆಯಾಗಿ ಕಂಡುಬರುತ್ತಿದ್ದಾರೆ. ಎಕ್ಸ್‌ ಆ್ಯಂಡ್‌ ವೈ ಮತ್ತು ನಾನ್‌ವೆಜ್‌ ಸಿನಿಮಾಗಳ ಮೂಲಕ ಅಥರ್ವ ಪ್ರಕಾಶ್‌ನ ನಿಜವಾದ ಪ್ರತಿಭೆಯನ್ನು ಕಾಣಬಹುದಾಗಿದೆ.

ಕರಾವಳಿ ಸುದ್ದಿ

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ 2025-27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ , ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್,ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರುಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವೇಂದ್ರ ಕೆ ಶೆಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಮದ್ಯ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿಶ್ರೀಕಾಂತ್ ಶೆಟ್ಟಿ ಕಾಟಿಪಳ್ಳ, ಸುಜೀರ್ ಶೆಟ್ಟಿ ಸೂರಿಂಜೆ, ಗಿರೀಶ್ ಎಂ ಶೆಟ್ಟಿ ಪೆರ್ಮುದೆ, ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಸುಕೇಶ್ ಶೆಟ್ಟಿ ಚೇಳಾರ್, ರಾಮಚಂದ್ರ ಶೆಟ್ಟಿ ಕುಳಾಯಿ, ದಾಮೋದರ ಶೆಟ್ಟಿ ತೋಕೂರು, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಜ್ಯೋತಿ ಜೆ ಶೆಟ್ಟಿ ಸುರತ್ಕಲ್ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಉಲ್ಲಾಸ್ ಶೆಟ್ಟಿ ಪೆರ್ಮುದೆ, ದಿವಾಕರ ಸಾಮಾನಿ ಚೇಳಾರ್ ಗುತ್ತು ಕರ್ತವ್ಯ ನಿರ್ವಹಿಸಿದ್ದರು.ಸಂಘದ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಮಾಜ ರತ್ನ ಡಾ.ಸುಧಾಕರ್ ಶೆಟ್ಟಿಯವರಿಗೆ ಸಮಾಜ ಭೂಷಣ್ ಪ್ರಶಸ್ತಿ

ಪುಣೆಯ ಕನ್ಟಾನ್ಮೆಂಟ್ ಪುಸ್ತಕ್ ಪೇಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ,ಮೂಡುಬಿದಿರೆ ಮೂಲದ ಡಾ.ಸುಧಾಕರ ಶೆಟ್ಟಿ ಅವರಿಗೆ ‘ ಸಮಾಜ ಭೂಷಣ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಣೆಯ ಮುನ್ಸಿಪಲ್ ಕಾರ್ಪೊರೇಶನ್ ನ ಮಹಾತ್ಮ ಪುಲೆ ಆಡಿಟೋರಿಯಂ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ ಮಾಜಿ ಸಚಿವ ಬಾಲಾಸಾಹೇಬ್ ಶಿವಾರ್ಕರ್,ಹೈಕೋರ್ಟ್ ಹಿರಿಯ ನ್ಯಾಯವಾದಿ ಗಿರೀಶ್ ಡಾಂಗೆ,ಕನ್ಟಾನ್ಮೆಂಟ್ ನ ಮಾಜಿ ಉಪಾಧ್ಯಕ್ಷರಾದ ಅರ್ಜುನ್ ಕುರ್ಪೆ,ಬಾಪು ಗಾನ್ಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸ್ವತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪಥ ಕೃತಿ ಬಿಡುಗಡೆ.

ಬಂಟ್ವಾಳ: ಸ್ವಾತಂತ್ರ್ಯಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ “ಬಾಳಪಥ”ಡಾ| ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಂಚಿಕೆ ಬಿಡುಗಡೆ ಹಾಗೂ ಅಮೂಲ್ಯ ಸ್ವಸಹಾಯ ಸಂಘದ ಸದಸ್ಯರ ಸಮ್ಮಿಲನ ಸಮಾರಂಭವು ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದಲ್ಲಿ ನಡೆಯಿತು.ಬೆಂಗಳೂರಿನ ಸಾಮಾಜಿಕ ಧುರೀಣ ಮೋಹನದೇವ ಆಳ್ವ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ,ದಿ. ಅಮ್ಮೆಂಬಳ ಬಾಳಪ್ಪರು ಬಾಲ್ಯದಿಂದಿಂದಲೇ ಸತ್ಯ,ನಿಷ್ಠರಾಗಿದ್ದರಲ್ಲದೆ ಎಲ್ಲಾವರ್ಗದ ಜನರನ್ನು ಪ್ರೀತಿಸಿ ಜನಸ್ನೇಹಿಯಾಗಿದ್ದರು.ಬಾಳಪ್ಪರು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘವು ಹಲವರ ಬದುಕಿಗೆ ಬೆಳಕಾಗಿದ್ದು,ಸಂಘವು ರಾಜ್ಯವ್ಯಾಪಿಯಾಗಿ ಬೆಳೆಯಲಿ ಎಂದು ಹಾರೈಸಿದರು.ತುಳು ನಮ್ಮ ಮಾತೃಭಾಷೆಯಾದರೆ,ಕನ್ನಡ ಭಾಷೆ ರಾಜ್ಯಕ್ಕೆ ಸಾರ್ವಭೌಮವಾಗಿದ್ದು,ದೇಶದ ಎಲ್ಲಾ ಭಾಷೆಯನ್ನು ಗೌರವಿಸಬೇಕು ಎಂದರು.ಡಾ। ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಬಿ.ರಮಾನಾಥ ರೈ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಅವರು ಬಾಳಪ್ಪರ ಹೋರಾಟದ ದಿನಗಳನ್ನು ಸ್ಮರಿಸಿದರು.ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ,ಸಂಚಿಕೆಯ ಪ್ರಧಾನ ಸಂಪಾದಕ ಡಾ. ದುಗ್ಗಪ್ಪ ಕಜೆಕಾ‌ರ್,ನಿವೃತ್ತ ಯೋಧ ಚಂದಪ್ಪ ಮೂಲ್ಯ,ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಚ ಸುರೇಶ್ ಕುಲಾಲ್ ,ಉಪಾಧ್ಯಕ್ಷ ಜನಾರ್ದನ ಬೊಂಡಾಲ,ಹಿರಿಯ ನಿರ್ದೇಶಕ‌ ಬೋಜ ಕುಲಾಲ್ ಉಪಸ್ಥಿತರಿದ್ದರು.ಭೋಜ ಮೂಲ್ಯ ಪ್ರಸ್ತಾವನೆಗೈದರು. ಕಿರಣ್ ಕಿಟ್ಲೂರು ಸ್ವಾಗತಿಸಿ, ಮೋಹನ್ ಕುಮಾರ್ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಮಗೆ ಹಿರಿಯರು ಎಲ್ಲಾ ಅನುಕೂಲತೆಗಳನ್ನು ಕೊಟ್ಟಿದ್ದಾರೆ. ಆದರೆ, ಕೊರತೆಯಿರುವುದು ಸೌಹಾರ್ದತೆಯಲ್ಲಿ. ಸೌಹಾರ್ದ ಸಂಗಮ ಜಿಲ್ಲೆಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅತ್ಯಗತ್ಯವಾಗಿದೆ- ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು: ಎಂಪಿ ಎಂಎಲ್ ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್)ನಲ್ಲಿ ನಡೆಯಿತು. ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ,ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ, ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.ಈ ಸೌಹಾರ್ದ ಸಂಗಮದಲ್ಲಿ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ಸೌಹಾರ್ದ ರತ್ನ ಪ್ರಶಸ್ತಿ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರಿಗೆ ‘ಸಮಾಜ ರತ್ನ’ ಪ್ರಶಸ್ತಿ, ಡಾ. ರೋಹನ್ ಮೊಂತೆರೋ ಅವರಿಗೆ ‘ಉದ್ಯಮ ರತ್ನ ಪ್ರಶಸ್ತಿ,ಡಾ.ಶ್ರೀರಾಮ್ ಭಟ್ ಅವರಿಗೆ ವೈದ್ಯರತ್ನ ಪ್ರಶಸ್ತಿ, ಡಾ. ಅನುರಾಗ್ ಜೆ. ಶೆಟ್ಟಿಯವರಿಗೆ ಬೆಸ್ಟ್ ಡಾಕ್ಟರ್ಸ್ ಅವಾರ್ಡ್, ಬಂಟ್ವಾಳ ಅನಂತಾಡಿಯ ವೈದ್ಯರತ್ನ ನಾಟಿ ವೈದ್ಯ ಗಂಗಾಧರ ಕರಿಯ ಪಂಡಿತ್ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

Scroll to Top