Author name: editor

ಪ್ರಾದೇಶಿಕ ವಾರ್ತೆಗಳು

ಹೇ ಪ್ರಭು – ವೆಂಕಟ್ ಭಾರದ್ವಾಜ್ ನಿರ್ದೇಶನದ ಚಿತ್ರ

ಹೈನಾ ಚಿತ್ರದ ಮೂಲಕ ಬಾಂಗ್ಲಾದೇಶದಿಂದ ನಡೆಯುವ ಗಡಿ ಮೀರಿ ಅಕ್ರಮ ಪ್ರವೇಶದಂತಹ ಗಂಭೀರ ವಿಷಯವನ್ನ ಎತ್ತಿಹಿಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇದೀಗ ಹೇ ಪ್ರಭು ಚಿತ್ರದ ಮೂಲಕ ಮತ್ತೊಂದು ಸಮಾಜಮುಖಿ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ವಿಷಯವನ್ನ ಓಲೈಸಿದ್ದಾರೆ.ಈ ಬಾರಿ ಅವರು ಸ್ಪರ್ಶಿಸಿರುವ ವಿಷಯ – ಫಾರ್ಮ ಲಾಬಿ ಮತ್ತು ವೈದ್ಯರ ಜೀವನ. ಹೇ ಪ್ರಭು ಎಂಬ ಚಿತ್ರವು ನಮ್ಮ ಗ್ರಾಮಗಳು ಮತ್ತು ಗ್ರಾಮಸ್ಥರು ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲವನ್ನ ಮತ್ತು ಅವರ ಮಹತ್ವವನ್ನ ತೀವ್ರವಾಗಿ ಒತ್ತಿಹೇಳುತ್ತದೆ. ಹೇ ಪ್ರಭು ಚಿತ್ರ ವೀಕ್ಷಕರನ್ನು ನಗೆಯ ಕಡಲಲ್ಲಿ ಮುಳುಗಿಸುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ . ಪ್ರಚಲಿತ ಸೋಶಿಯಲ್ ಮೀಡಿಯಾ ಎಂಬ ಮಾಯೆಯ ಅಲೆಯಲ್ಲಿ ಮೇಲೆದ್ದು ಹೆಸರು ಮಾಡಿರುವ ವ್ಯಕ್ತಿಗಳ ಪರಿಚಯ ಸಿನಿಮಾದಲ್ಲಿ ತೋರಿಸಲಾಗಿದೆ. “from scratch to success ” ಎಂಬಂತೆ ಕೆಲವು ನಿಜ ಘಟನೆ ಸಾರಾಂಶವನ್ನು ಇಲ್ಲಿ ಹೆಪ್ರಭು ಹೇಳುತ್ತಾನೆಇಂದು ಸಾಮಾಜಿಕ ಜಾಲತಾಣಗಳಲ್ಲಿ “ಹೇ ಪ್ರಭು” ಎಂಬ ಶಬ್ದವೇ ಟ್ರೆಂಡ್ ಆಗಿದೆ. ಹಿಂದೆ ನಾವು “ಹೇ ರಾಮಾ… ದೇವ್ರೆ ಕಾಪಾಡು” ಎಂಬುದನ್ನ ಕೂಗುತ್ತಿದ್ದೆವು. ಆದರೆ ಇಂದು “ಹೇ ಪ್ರಭು” ಎಂಬ ಶಬ್ದವು ಜಾಗತಿಕವಾಗಿ ಹರಡಿರುವ, ಹೃದಯಸ್ಪರ್ಶಿ ಪದ – ಇದು ನಂಬಿಕೆಯೂ ಹೌದು, ಒಬ್ಬೊಬ್ಬ ವ್ಯಕ್ತಿಯ ಸಂಕಟದ ಕೂಗೂ ಹೌದು.ಚಿತ್ರವು ಶೀಘ್ರದಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ, ಪ್ರಚಾರ ಕಾರ್ಯಗಳು ಜೋರಿನಲ್ಲಿ ನಡೆಯುತ್ತಿವೆ. ಬೆಂಗಳೂರುನಲ್ಲಿ ಮಹತ್ವದ ವಿಶ್ವ ಪ್ರಿಮಿಯರ್ ಕಾರ್ಯಕ್ರಮವನ್ನ ಆಯೋಜಿಸಲಾಗುತ್ತಿದೆ, ಇದೇ ವೇಳೆ ಪ್ರಮುಖ ಸಚಿವರು, ವೈದ್ಯರು ಮತ್ತು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.ಅಮೃತ ಫಿಲ್ಮ್ ಸೆಂಟರ್ ಮತ್ತು 24 ರೀಲ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕಥೆ, ಚಿತ್ರಕಥೆ, ನಿರ್ದೇಶನ: ವೆಂಕಟ್ ಭಾರದ್ವಾಜ್ಛಾಯಾಗ್ರಹಣ: ಪ್ರಮೋದ ಭಾರತೀಯಸಂಗೀತ: ಡ್ಯಾನಿ ಅಂಡರ್ಸನ್ಸಂಕಲನ : ಶಮೀಕ್ ಭಾರದ್ವಾಜ್ನಟರು: ಜಯ್, ಸಮ್ಹಿತಾ ವಿನ್ಯಾ, ಯಮುನಾ ಶ್ರೀನಿಧಿ, ಗಜಾನನ ಹೆಗಡೆ, ಡಾ. ಸೂರ್ಯ, ಡಾ. ಸುಧಾಕರ್ ಶೆಟ್ಟಿ ಡಾ ಆದರ್ಶ್ ಗೌಡ , ಲಕ್ಷ್ಮಣ ಶಿವಶಂಕರ್, ಅಕೀಲ ತಂಡೂರು, ಹರಿಧನಂಜಯ, ದಿಲೀಪ್ ರಾಜ್, ನಿರಂಜನ್ ಮತ್ತು ಇತರರು.ಹೇ ಪ್ರಭು – ಇದು ನಗೆಯ ಕುಂಭ ಮೇಳ

ಪ್ರಾದೇಶಿಕ ವಾರ್ತೆಗಳು

MCC Bank’s Outreach Initiatives-Distribution of Note Books, School Bag and Umbrellas

As part of its unwavering commitment to social responsibility and community development, MCC Bank has undertaken a series of impactful initiatives in the month of June 2025, reaching various schools, orphanages, and institutions across Mangalore, Udupi, and surrounding regions. These activities were spearheaded by the Bank’s Chairman Sahakara Ratna Mr Anil Lobo and the Board of Directors. The Bank has supported the students of St Antony Primary School, Padukone, Stella Maris High School, Gangolli, St Mary’s School, Kundapura, St Joseph Primary and High School, Kundapura, Nirmala High School, Brahmavara, Cosmopolitan Higher Primary School, Brahmavara, Kulur High School, Mangalore, St Anjela Home, Bejai, De Mercede Orphanage, Paneer, St Ignatius Loyola School, Paladka, St Rita Higher Primary School, Jeppu, Ladyhill Higher Primary School, Urwa and Mai De Deus Higher Primary School, Puttur, by way of distributing note books, Umbrellas and school bags to economically backward students of the school. The Bank also distributed Umbrellas to the inmates of St Antony Ashram, Jeppu. The heads of above institutions were overwhelmed by the noble gesture of the bank and thanked the Chairman and Directors of the Bank for their generosity and concern towards the poor children studying in the Institutions and the inmates of the Ashram.Through these heartening initiatives, MCC Bank has demonstrated its core values of compassion, inclusion, and service. The distribution of umbrellas, school bags, and notebooks, costing more than Rs.10 lakhs, across multiple institutions not only provided essential support to underprivileged students but also inspired a culture of gratitude and perseverance. MCC Bank remains committed to empowering the youth and strengthening the community through such meaningful outreach.While speaking on the occasion, the Chairman of the Bank Sahakara Ratna Mr Anil Lobo called upon the students to remember the Bank’s support. He also called upon the students to be empathetic towards the poor when they grow up and achieve social status. He also emphasized equality in education and encouraged self-belief. He expressed his happiness in engaging with the enthusiastic students and lauded the Institutions for providing a nurturing educational environment. He acknowledged their support to the Bank and reaffirmed MCC Bank’s commitment to support education for the underprivileged.Directors Dr Gerald Pinto, Mr Elroy Kiran Crasto, Mr Sushanth Saldanha, Mrs Sharmila Menezes, Mrs Irene Rebello, Mr Roshan Dsouza, Mr Herold J. Monteiro, Mr J.P. Rodrigues, Andrew Dsouza and Branch Manager of Kundapur, Brahmavara, Ashoknagar, Kankanady, Morgansgate, Puttur and Ullal branches have participated in the above programmes.

ಪ್ರಾದೇಶಿಕ ವಾರ್ತೆಗಳು

ಎಮ್.ಸಿ.ಸಿ. ಬ್ಯಾಂಕಿನಿಂದ ನೋಟ್ ಪುಸ್ತಕ, ಕೊಡೆ ಮತ್ತು ಸ್ಕೂಲ್ ಬ್ಯಾಗ್ ವಿತರಣೆ

ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ 2025 ಜೂನ್ ತಿಂಗಳಲ್ಲಿ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸಲು ಬ್ಯಾಂಕಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ. ಪಡುಕೋಣೆಯ ಸೈಂಟ್ ಆಂಟನಿ ಪ್ರಾಥಮಿಕ ಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ, ಕುಂದಾಪುರದ ಸೈಂಟ್ ಮೇರಿ ಶಾಲೆ, ಕುಂದಾಪುರದ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆ ಮತ್ತು÷ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರಿನ ಕೂಳೂರು ಪ್ರೌಢಶಾಲೆ, ಬಿಜೈಯ ಸೈಂಟ್ ಅಂಜೆಲಾ ಹೋಂ, ಡಿ ಮರ್ಸಿಡ್ ಅನಾಥಾಶ್ರಮ, ಪಾನೀರ್, ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯೊಲಾ ಶಾಲೆ, ಜೆಪ್ಪುವಿನ ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಉರ್ವಾದದ ಲೇಡಿಹಿಲ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪುತ್ತೂರಿನ ಮಾಯ್ ದೆ ದೆವೂಸ್ ಹಿರಿಯ ಪ್ರಾಥಮಿಕ ಶಾಲೆಯ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ವಿತರಣೆ ಮಾಡಲಾಯಿತು. ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಬ್ಯಾಂಕಿನ ಈ ಉದಾತ್ತ ಕಾರ್ಯಕ್ಕೆ ಮೇಲ್ಕಂಡ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಮತ್ತು ಆಶ್ರಮದ ನಿವಾಸಿಗಳ ಬಗ್ಗೆ ಔದಾರ್ಯ ಮತ್ತು ಕಾಳಜಿಯನ್ನು ತೋರಿಸಿದ್ದಕ್ಕಾಗಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ಹೃದಯಸ್ಪರ್ಶಿ ಕೊಡುಗೆಗಳ ಮೂಲಕ, ಎಮ್.ಸಿ.ಸಿ. ಬ್ಯಾಂಕ್ ತನ್ನ ಸಹಾನುಭೂತಿ ಮತ್ತು ಸೇವೆಯ ಮೂಲ ಮೌಲ್ಯಗಳನ್ನು ಪ್ರದರ್ಶಿಸಿದೆ. ಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕೊಡೆಗಳು, ಶಾಲಾ ಬ್ಯಾಗ್, ಮತ್ತು ನೋಟ್‌ಬುಕ್‌ಗಳ ವಿತರಣೆಯು ಅನೇಕ ವಿದ್ಯಾಸಂಸ್ಥೆಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲವನ್ನು ನೀಡುವುದಲ್ಲದೆ, ಕೃತಜ್ಞತೆ ಮತ್ತು ಪರಿಶ್ರಮದ ಸಂಸ್ಕೃತಿಯನ್ನು ಪ್ರೇರೇಪಿಸಿತು. ಎಮ್.ಸಿ.ಸಿ. ಬ್ಯಾಂಕ್ ಇಂತಹ ಅರ್ಥಪೂರ್ಣ ಸಂಪರ್ಕದ ಮೂಲಕ ಯುವಕರನ್ನು ಸಬಲೀಕರಣಗೊಳಿಸಲು ಮತ್ತು ಸಮುದಾಯವನ್ನು ಬಲಪಡಿಸಲು ಬದ್ಧವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ, ವಿದ್ಯಾರ್ಥಿಗಳು ಬ್ಯಾಂಕಿನ ಬೆಂಬಲವನ್ನು ನೆನಪಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಬೆಳೆದು ಸಾಮಾಜಿಕ ಸ್ಥಾನಮಾನವನ್ನು ಸಾಧಿಸಿದಾಗ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ಸಹಾನುಭೂತಿ ಹೊಂದಬೇಕೆAದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣದಲ್ಲಿ ಸಮಾನತೆಯನ್ನು ಅವರು ಒತ್ತಿ ಹೇಳಿದರು ಮತ್ತು ಆತ್ಮ ವಿಶ್ವಾಸವನ್ನು ಪ್ರೋತ್ಸಾಹಿಸಿದರು. ಉತ್ಸಾಹಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಲು ಅವಕಾಶ ಸಿಕ್ಕಿದ್ದಕಾಗಿ ಅವರು ಸಂತೋಷ ವ್ಯಕ್ತಪಡಿಸಿ ಪೋಷಣೆಯ ಶೈಕ್ಷಣಿಕ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಸಂಸ್ಥೆಗಳನ್ನು ಶ್ಲಾಘಿಸಿದರು. ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲಿಸುವ ಎಂಸಿಸಿ ಬ್ಯಾಂಕಿನ ಧ್ಯೇಯವನ್ನು ಪುನರುಚ್ಚರಿಸಿದರು.ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ, ಶ್ರೀ ಎಲ್‌ರೊಯ್ ಕಿರಣ್ ಕ್ರಾಸ್ಟೊ, ಶ್ರೀ ಸುಶಾಂತ್ ಸಲ್ಡಾನಾ, ಶ್ರೀಮತಿ ಶರ್ಮಿಳಾ ಮಿನೇಜಸ್, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ರೋಶನ್ ಡಿಸೋಜಾ, ಶ್ರೀ ಹೆರಾಲ್ಡ್ ಜೆ. ಮಾಂತೆರೊ, ಶ್ರೀ ಜೆ.ಪಿ. ರೋಡ್ರಿಗಸ್, ಶ್ರೀ ಅಂಡ್ರೂ÷್ಯ ಡಿಸೋಜ ಮತ್ತು ಕುಂದಾಪುರ, ಬ್ರಹ್ಮಾವರ, ಅಶೋಕನಗರ, ಕಂಕನಾಡಿ, ಮಾರ್ಗನ್ಸ್ಗೇಟ್, ಪುತ್ತೂರು ಮತ್ತು ಉಳ್ಳಾಲ ಶಾಖೆಗಳ ಶಾಖಾ ವ್ಯವಸ್ಥಾಪಕ ಕೂಡ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರಿಗೆ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ವತಿಯಿಂದ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರದ ಪಾಲ್ದನೆ ಸಂತ ತೆರೆಸಾ ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ನಿವೃತ್ತಿ ಹೊಂದಿ ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಚರ್ಚಿನ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ (ತಿಸ್ರೀ ಓಡ್ಡ್) ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.ಮಂಗಳೂರು ಮತ್ತು ಅಖಿಲ ಕರ್ನಾಟಕ ಸೆಕ್ಯುಲರ್ ಫ್ರಾನ್ಸಿಸ್ಕನ್ ಆರ್ಡರ್ ಇದರ ಪ್ರಾಂತೀಯ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಪ್ರಕಾಶ್ ಲೋಬೊ ಅವರು ನಿವೃತ್ತಿ ಹೊಂದಿದ ಫಾ. ಆಲ್ಬನ್ ಡಿ ಸೋಜಾ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪಾಲ್ದನೆ ಘಟಕದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸ್ವೀಬರ್ಟ್ ಡಿ ಸೋಜಾ ಸ್ವಾಗತಿಸಿದರು. ಅಥಿತಿಗಳಾಗಿ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಫಾ. ಆಲ್ಬನ್ ಡಿ ಸೋಜಾ ಅವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಜೂ.27ರಂದು ಬೆಸೆಂಟ್ ಪ.ಪೂ.ಕಾಲೇಜಿನಲ್ಲಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಮಂಗಳೂರು: ಅಮೃತ ಪ್ರಕಾಶ ಹಾಗೂ ಬೆಸೆಂಟ್ ಪ.ಪೂ.ಕಾಲೇಜಿನ ವತಿಯಿಂದ ಜೂ.27ರಂದು ಮಧ್ಯಾಹ್ನ 2.30ಕ್ಕೆಬೆಸೆಂಟ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ನಡೆಯಲಿದೆ.ಕಾಲೇಜಿನ ಪ್ರಾಂಶುಪಾಲ ಡಾ.ನಾಯಕ್ ರೂಪಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್ , ಯೋಗಗುರು ಜಗದೀಶ್ ಶೆಟ್ಟಿ ಬಿಜೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕಿ ಮಾಲತಿ ಶೆಟ್ಟಿ ಮಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜೂ.26ರಂದು ರೆಡ್‌ಕ್ರಾಸ್‌ನಿಂದಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರಾಮಕೃಷ್ಣ ಕಾಲೇಜು ಸಹಯೋಗದಲ್ಲಿ ಜೂ.26ರಂದು ಮಧ್ಯಾಹ್ನ 3ಕ್ಕೆ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣೆ ವಿರೋಧಿ ದಿನಾಚರಣೆ ಬಂಟ್ಸ್ ಹಾಸ್ಟೆಲ್‌ನ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಫಾ.ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರೊ.ಡಾ.ಅರುಣ ಯಡಿಯಾಳ್, ಲೋಕಾಯುಕ್ತ ಡಿಎಸ್‌ಪಿ ಡಾ.ಗಾನ.ಪಿ.ಕುಮಾರ್ , ರಾಮಕೃಷ್ಣ ಕಾಲೇಜಿನ ಸಂಚಾಲಕ ಡಾ.ಸಂಜೀವ ರೈ, ಪ್ರಾಂಶುಪಾಲೆ ಡಾ.ಅನಸೂಯ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ: ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜೂ.25: ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್‌ರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ರಷ್ಯಾದ ಪತ್ರಕರ್ತೆಯಾಗಿದ್ದ ಅನ್ನಾ ಪೊಲಿಟ್ಕೋವಸ್ಕಾಯರ ನಿರ್ಭೀತ ವರದಿಗಾರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸುಧೀರ್ ರೆಡ್ಡಿ, ಭಾರತದಲ್ಲಿಯೂ ಅಂತಹ ಪತ್ರಕರ್ತರಿದ್ದಾರೆ. ತಾವು ಮಾಡುವ ಕೆಲಸದಲ್ಲಿ ನೈಜ ಉz್ದೆÃಶವಿದ್ದಾಗ ಧೈರ್ಯ ತಾನಾಗಿಯೇ ಬರುತ್ತದೆ. ಯಾವುದಕ್ಕೂ ಭಯ ಪಡುವ ಅಗತ್ಯ ಇರುವುದಿಲ್ಲ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು. ಬಹಳ ವರ್ಷಗಳ ಹಿಂದೆ ರುವಾಂಡದಲ್ಲಿ ನರಮೇಧ ನಡೆದಿತ್ತು. ಬಳಿಕ ಅಲ್ಲಿ ಸಮುದಾಯಗಳು ಪರಸ್ಪರ ಪ್ರತ್ಯೇಕಗೊಂಡಿದ್ದವು. ಒಬ್ಬರಿಗೊಬ್ಬರು ಮಾತುಕತೆಯೇ ಇರಲಿಲ್ಲ. ಆದರೆ ಅಲ್ಲಿನ ರೇಡಿಯೋ, ಮಾಧ್ಯಮ ಸುದ್ದಿಗಳು ಅಲ್ಲಿ ನಡೆಯುತ್ತಿದ್ದ ಒಳ್ಳೆಯತನವನ್ನು ಎತ್ತಿ ತೋರಿಸಿದವು. ನಿಧಾನಗತಿಯಲ್ಲಿ ಸಮುದಾಯಗಳ ನಡುವಿನ ಅನುಮಾನ ದೂರವಾಗಿ ಅಲ್ಲಿ ದುಷ್ಕರ್ಮಿಗಳನ್ನು ಬೇರ್ಪಡಿಸುವ ಕಾರ್ಯ ಆಗಿದೆ. ಅದೇ ಪ್ರಯತ್ನ ಇಲ್ಲಿಯೂ ಮಾಡಬಹುದು. ಆ ಧೈರ್ಯ, ಬದ್ಧತೆ ನಮಗೆ ಬೇಕಾಗಿದೆ.ಇಂತಹ ಪ್ರದೇಶದಲ್ಲಿ ನಾವು ಸಾಮಾನ್ಯವಾಗಿ ವರದಿಗಾರಿಕೆ ಮಾಡಬೇಕಾದರೆ ಏನು ಬೇಕು ಎಂಬುದನ್ನು ನಾವು ಅರಿಯಬೇಕು. ವರದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ. ಬಾಯಿಗೆ ಬಂದದ್ದನ್ನು ಹೇಳಿ ಬಿಟ್ಟು ಅದರಿಂದ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಮುಖ್ಯವಾಗಿರುತ್ತದೆ. ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವ ಉz್ದÉÃಶದಿಂದ ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಲಾಗದು. ಸತ್ಯದ ಬಗ್ಗೆ ಬರೆಯುವಾಗ ಸಮಸ್ಯೆ ಖಂಡಿತಾ ಬರುತ್ತದೆ. ಆದರೆ ಸತ್ಯ ಬರೆಯುವಾಗ ಯಾವುದೇ ರೀತಿಯ ಯಾವುದೇ ಭಯ ಬೇಡ. ಜತೆಗೆ ಸಹಾನುಭೂತಿ ಬರವಣಿಗೆಯಲ್ಲಿ ಇದ್ದಾಗ ಯಾರಿಗೂ ಸಮಸ್ಯೆ ಬರುವುದಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸಮಧಾನ ಹೇಳಬೇಕೆಂಬುದರ ಅರಿವಿದ್ದಾಗ ಯಾವುದೇ ಸಮಸ್ಯೆ ಎದುರಾಗದು. ಸಮಾಜವೂ ನಿಧಾನಕ್ಕೆ ಗುಣಮುಖವಾಗುತ್ತದೆ. ಬೆಳಕು ಬಂದಾಗ ಕತ್ತಲು ಮಾಯವಾಗುವಂತೆ, ಆ ಬೆಳಕು ಪತ್ರಿಕೋದ್ಯಮವಾಗಬೇಕು. ಆ ಶಕ್ತಿಯನ್ನು ಪತ್ರಕರ್ತರು ತುಂಬಿಲ್ಲವಾದರೆ, ಸಮಾಜದಲ್ಲಿನ ಕತ್ತಲು ಹೋಗದು. ಇದರಿಂದ ಶೇ. 98 ಜನ ಶೇ. 2ರಷ್ಟು ಜನರಿಂದ ತೊಂದರೆಗೆ ಒಳಗಾಗುವುದು ಮುಂದುವರಿಯುತ್ತಲೇ ಸಾಗುತ್ತದೆ ಎಂದು ಎಚ್ಚರಿಕೆಯ ನುಡಿಗನ್ನಾಡಿದರು.ಜಾಗೃತ ವರದಿಗಾರಿಕೆ, ಹೃದಯವಂತಿಕೆಯ ಪತ್ರಿಕೋದ್ಯಮ ನಮ್ಮ ಅಗತ್ಯ. ಅದ್ಯಾವ ತೊಂದರೆ, ಸಮಸ್ಯೆ ಆದರೂ ಮುಂದಿನ ದಿನಗಳಲ್ಲಾದರೂ ಶಾಶ್ವತ ಶಾಂತಿ ನೆಲೆಯಾಗಲೇಬೇಕು. ಆವಾಗ ತಿರುಗಿ ನೋಡಿದಾಗ ಶಾಂತಿಗೆ ಕಾರಣರಾದ ಪತ್ರಕರ್ತರು ಕಾಣಸಿಗಬೇಕು. ಆ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರಶಸ್ತಿ ವಿಜೇತರ ಬಗ್ಗೆ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.`ಮAಗಳೂರಿನ ಸಾಮುದಾಯಿಕ ರಚನೆ ಅತ್ಯಂತ ಸೂಕ್ಷö್ಮವಾಗಿರುವುದು ಇಲ್ಲಿ ಬಂದ ಮೇಲೆ ಅರ್ಥವಾಗಿದೆ. ಇಲ್ಲ ಒಬ್ಬರನ್ನು ಇನ್ನೊಬ್ಬರನ್ನು ಅನುಮಾನದಿಂದ ನೋಡುತ್ತಾರೆ. ಸತ್ಯಕ್ಕಿಂತ ಸುಳ್ಳು ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. ನಿಜ ನೂರು ಜನಕ್ಕೆ ಹೋದರೆ ಸುಳ್ಳು ಸಾವಿರ ಜನಕ್ಕೆ ತಲುಪುತ್ತದೆ. ನಿಜ ಒಂದು ಗಂಟೆಯಲ್ಲಿ ಪ್ರಯಾಣಿಸಿದರೆ, ಸುಳ್ಳು ಅರ್ಧ ಸೆಕೆಂಡ್‌ನಲ್ಲಿ ರವಾನೆಯಾಗುತ್ತದೆ. ನಾವು ಮಾತನಾಡುತ್ತಿರುವಂತೆಯೇ ಅದರ ವಿರುದ್ದವಾಗಿ ಸುಳ್ಳು ಸಿದ್ಧವಾಗಿರುತ್ತದೆ. ಯಾವುದು ನಿಜ, ಸುಳ್ಳು ಎಂದು ಜನಕ್ಕೆ ಅರ್ಥವಾಗುವಂತಿರುವುದಿಲ್ಲ. ಇಲ್ಲಿನ ಶೇ. 98 ಜನರಿಗೆ ಶೇ. 2ರಷ್ಟು ಮಂದಿಯಿAದ ಆಗುತ್ತಿರುವ ಸಮಸ್ಯೆ ಒಂದು ರೀತಿಯ ರೋಗವಾಗಿದೆ. ಇದನ್ನು ಪತ್ರಿಕೋದ್ಯಮದ ಮೂಲಕವೂ ಗುಣಪಡಿಸಬಹುದು. ಆ ನಿಟ್ಟಿನಲ್ಲಿ ಮಂಗಳೂರು ಪತ್ರಕರ್ತರು ನಡೆಸುತ್ತಿರುವ ಬ್ರಾಂಡ್ ಮಂಗಳೂರು ಕೂಡಾ ಈ ಚಿಕಿತ್ಸೆಯ ಒಂದು ಪ್ರಕ್ರಿಯೆ.’*ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಕಮಿಷನರ್, ಮಂಗಳೂರು.

ಪ್ರಾದೇಶಿಕ ವಾರ್ತೆಗಳು

ಗಿಡಗಳ ಸಂರಕ್ಷಣೆಗೆ ಸಾಮೂಹಿಕ ಜಾಗೃತಿ ಅಗತ್ಯ-ರಾಜೇಶ್ ಬಿ

ಮಂಗಳೂರು,ಜೂ.24;ಗಿಡಗಳ ಸಂರಕ್ಷಣೆಯ ಬಗ್ಗೆ ಸಾಮೂಹಿಕ ಜಾಗೃತಿ ಅಗತ್ಯ ವಿದೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಅರಣ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಸುರತ್ಕಲ್ ಕೋಡಿಕೆರೆ (ಎಸ್ ಟಿ ಪಿ )ಯಲ್ಲಿ ವನಮಹೋತ್ಸವ ಹಾಗೂ 50 ಗಿಡಗಳನ್ನು ನೆಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಜಾಗತಿಕ ತಾಪಮಾನ ಏರಿಕೆ,ಹವಾಮಾನದ ವೈಪರೀತ್ಯಗಳು ಸೇರಿದಂತೆ ಪರಿಸರದಲ್ಲಿನ ಸವಾಲುಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಸಾಮಾಜಿಕ ವಾಗಿ ಜಾಗೃತಿ ಮೂಡಿಸಬೇಕಾಗಿದೆ. ಮಂಗಳೂರು ನಗರದಲ್ಲಿ 25ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಮತ್ತು ಈ ಗಿಡಗಳನ್ನು ನೆಟ್ಟು ಸಂರಕ್ಷಣೆಯ ನಿಗಾವಹಿಸುವ ಬಗ್ಗೆ ಮಾಹಿತಿ ಸಂಗ್ರಹಿಸ ಲಾಗುತ್ತಿದೆ.ಈಗಾಗಲೇ ಸುಮಾರು 9000 ಗಿಡಗಳನ್ನು ಅರಣ್ಯ ಇಲಾಖೆ ಯವತಿಯಿಂದ ನೆಡಲಾಗಿದೆ.ಈ ನಿಟ್ಟಿನಲ್ಲಿ ಸಾಮೂಹಿಕ ಸಹಭಾಗಿತ್ವ ದ ಅಗತ್ಯವಿದೆ ಎಂದು ರಾಜೇಶ್ ತಿಳಿಸಿದ್ದಾರೆ.ಸಮಾರಂಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ,ಸುರತ್ಕಲ್ ಅರಣ್ಯವಲಯದ ಉಪ ಅರಣ್ಯಾಧಿಕಾರಿ ಶ್ರವಣ್ ಕುಮಾರ್, ಸುರತ್ಕಲ್ ಬೀಟ್ ಅರಣ್ಯ ಅಧಿಕಾರಿ ಗಂಗಾಧರ್, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ 0ದ್ರ ಕುಂದೇಶ್ವರ,ಉಪಾಧ್ಯಕ್ಷ ಭಾಸ್ಕರ ರೈಕಟ್ಟಾ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ,ಕೋಡಿಕೆರೆ ಎಸ್ ಟಿ ಪಿ ಗುತ್ತಿಗೆದಾರ ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಜಂಕ್ಷನ್ ಬಳಿ ಕಣ್ಣೂರು ಎಕ್ಸಪ್ರೆಸ್ ರೈಲು ಮೇಲೇರಗಿದ ದೈತ್ಯ ಮರ. ತಪ್ಪಿದ ಭಾರೀ ಅನಾಹುತ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಂಗಾಧರ್ ಗಾಂಧಿ ಸಹಿತ ನೂರಾರು ಪ್ರಯಾಣಿಕರು ಪಾರು

Breaking news ಬೆಂಗಳೂರು ಮಂಗಳೂರು ನಡುವೆ ಸಂಚರಿಸುತ್ತಿದ್ದ ಕಣ್ಣೂರು ಎಕ್ಸ್ಪ್ರೆಸ್ ರೈಲಿನ ಮೇಲೆ ಮಂಗಳೂರು ಜಂಕ್ಷನ್ ತಲುಪುವ ಸಂದರ್ಭದಲ್ಲಿ ಇಂದು ಮುಂಜಾನೆ ಪಡೀಲ್ ಸಮೀಪದಲ್ಲಿ ಮರವೊಂದು ರೈಲಿಗೆ ಒರಗಿದ ಪರಿಣಾಮ ಲೋಕೋ ಪೈಲೆಟ್ ದಿಡೀರ್ ರೈಲು ನಿಲ್ಲಿಸಿದ ಘಟನೆ ವರದಿಯಾಗಿದೆ. ತಕ್ಷಣ ಎಚ್ಚುತ್ತು ಕೊಂಡ ರೈಲುವೇ ಅಧಿಕಾರಿಗಳು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾದರು.ಈ ರೈಲಿನಲ್ಲಿ ಸಾಮಾಜಿಕ ಚಿಂತಕ NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಸಂಚಾರಿಸುತ್ತಿದ್ದರು ಎನ್ನಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಇಂದು ಸಂಜೆ 4ರಿಂದ 9.00ರ ತನಕ ಮಂಗಳೂರು ಟೌನ್‍ಹಾಲ್‍ನಲ್ಲಿ13ನೇ ಸೌಹಾರ್ದ ಸಂಗಮ

ಮಂಗಳೂರು: MPMLA’s ನ್ಯೂಸ್ ಮತ್ತು MPMLASNEWSTV 24×7 news portal ಇದರ ವತಿಯಿಂದ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ 4.00ರಿಂದ 9.00ರ ತನಕ ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್) ಮಂಗಳೂರಿನಲ್ಲಿ ನಡೆಯಲಿದೆ. ಸೌಹಾರ್ದ ಸಂಗಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ, ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಲಿದ್ದು, ಮಾಜಿ ಮೇಯರ್ ದಿವಾಕರ ಕದ್ರಿಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸೌಹಾರ್ದ ಸಂದೇಶ ನೀಡಲಿದ್ದಾರೆ. ಸೌಹಾರ್ದ ಸಂಗಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಂಸದ ನಳಿನ್‍ಕುಮಾರ್ ಕಟೀಲ್ ಮತ್ತು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ‘ಜನಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕ ಸಹಕಾರ ರತ್ನ ಡಾ. ಅಗರಿ ನವೀನ್ ಭಂಡಾರಿಯವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ, ಇಂಡಿಯನ್ ಸೋಷಿಯಲ್ ಮತ್ತು ಕಲ್ಚರಲ್ ಸೆಂಟರ್ ಅಬುದಾಬಿಯ ಅಧ್ಯಕ್ಷ ಮಿತ್ರಂಪಾಡಿ ಜಯರಾಮ್ ರೈಯವರಿಗೆ ‘ಕರುನಾಡ ರತ್ನ’ ಪ್ರಶಸ್ತಿ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರಿಗೆ ‘ಸಮಾಜ ರತ್ನ’ ಪ್ರಶಸ್ತಿ, ರೋಹನ್ ಕಾರ್ಪೊರೇಶನ್ ಆಡಳಿತ ನಿರ್ದೇಶಕ ಡಾ. ರೋಹನ್ ಮೊಂತೆರೋ ಅವರಿಗೆ ‘ಉದ್ಯಮ ರತ್ನ’ ಪ್ರಶಸ್ತಿ, ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಶ್ರೀರಾಮ್ ಭಟ್ ಎಂ. ಅವರಿಗೆ ‘ವೈದ್ಯ ರತ್ನ’ ಪ್ರಶಸ್ತಿ, ಕೆ.ಎಂ.ಸಿ. ಮಂಗಳೂರಿನ ಅಸೋಸಿಯೇಟ್ ಪ್ರೊಫೆಸರ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಡಾ. ಅನುರಾಗ್ ಜೆ. ಶೆಟ್ಟಿ ಅವರಿಗೆ ‘ಬೆಸ್ಟ್ ಡಾಕ್ಟರ್ಸ್ ಅವಾರ್ಡ್’, ಬಂಟ್ವಾಳ ಅನಂತಾಡಿಯ ಜನಪ್ರಿಯ ಗಿಡಮೂಲಿಕಾ ಆಯುರ್ವೇದ ನಾಟಿ ವೈದ್ಯ ಗಂಗಾಧರ ಕರಿಯ ಪಂಡಿತ್ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಎ. ಕೋಟ್ಯಾನ್, ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಕೆಎಸ್‍ಆರ್‍ಟಿಸಿ ಡಿ.ಸಿ. ರಾಜೇಶ್ ಶೆಟ್ಟಿ, ಕರ್ನಾಟಕ ಸ್ಟೇಟ್ ಎಲೈಡ್ & ಹೆಲ್ತ್‍ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಅಲಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಡಿ., ನ್ಯಾಯವಾದಿಗಳಾದ ಕೆ. ದಯಾನಂದ ರೈ, ಅರುಣ್ ಶೆಟ್ಟಿ, ಉದ್ಯಮಿ ಅಜಿತ್ ಚೌಟ, ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಎಂಸಿಎಫ್ ಲಿಮಿಟೆಡ್ ಎಚ್.ಆರ್.ನ ಡೆಪ್ಯೂಟಿ ಮೆನೇಜರ್ ದೀಕ್ಷಿತ್ ಶೆಟ್ಟಿ, ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಕರ್ನಾಟಕ ಜನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್ ಕೊಡಿಯಾಲ್‍ಬೈಲ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನದ ಅಧ್ಯಕ್ಷ ರಾಮಕೃಷ್ಣ ಆರ್., ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಚಲನಚಿತ್ರ ನಿರ್ದೇಶಕ-ಪತ್ರಿಕೋದ್ಯಮಿ ಪ್ರಕಾಶ್ ಪಾಂಡೇಶ್ವರ, ರಾಜ್ಯ ಪತ್ರಕರ್ತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ, ಸಹಕಾರಿ ನೌಕರರ ಸಹಕಾರ ಸಂಘ (ರಿ)ದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಸೂಟರ್‍ಪೇಟೆ, ನಮ್ಮ ಕುಡ್ಲ ಟಿ.ವಿ. ಚಾನೆಲ್‍ನ ಆಡಳಿತ ನಿರ್ದೇಶಕ ಲೀಲಾಕ್ಷ ಬಿ. ಕರ್ಕೆರ, ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ. ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ್ ಸಲ್ಡಾನ, ನರರೋಗ ತಜ್ಞ ಡಾ. ಬಿ. ಶಿವಾನಂದ ಪೈ, ಡಿ. ದೇವರಾಜು ಅರಸು ರಾಜ್ಯ ಪ್ರಶಸ್ತಿ ಪುರಸ್ಕøತ ಸಮಾಜ ವಿಜ್ಞಾನಿ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಮೊದಲಾದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡ ಮತ್ತು ತುಳು ಚಿತ್ರ ಹಿನ್ನಲೆ ಗಾಯಕ ಶ್ರೀ ರವೀಂದ್ರ ಪ್ರಭು ಮತ್ತು ಬಳಗದವರಿಂದ ‘ರಾಗ್ ರಂಗ್’ ‘ಸೌಹಾರ್ದ ಸಂಜೆ ಸುಗಮ ಸಂಗೀತ ರಸಮಂಜರಿ’ ಇದೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದ.ಕ. ಮಂಗಳೂರು ಇದರ ಪ್ರಾಯೋಜಕತ್ವ ಇದೆ. ಕಾರ್ಯಕ್ರಮದಲ್ಲಿ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ‘ಯುವಜಾಗೃತಿ’ ಎನ್ನುವ ಹಾಡು ನಾಟಕಗಳ ಸಮ್ಮಿಶ್ರಣ ವಿನೂತನ ಶೈಲಿಯ ಜಾಗೃತಿ ಕಾರ್ಯಕ್ರಮವು ರಂಗಚಲನ ಮಂಗಳೂರು ಇವರಿಂದ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಸೌಹಾರ್ದ ಸಂಗಮ’ವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ವಿನಂತಿಸಿದ್ದಾರೆ.ವಂದನೆಗಳೊಂದಿಗೆ,ಇತೀ ತಮ್ಮ ವಿಶ್ವಾಸಿ ಅಶೋಕ್ ಶೆಟ್ಟಿ ಬಿ.ಎನ್. ಕಾರ್ಯಕ್ರಮದ ವೀಡಿಯೋ ಆಮಂತ್ರಣವನ್ನು ಈ ಕೆಳಗಿನ ಲಿಂಕ್ ಮೂಲಕ‌ ನೋಡಬಹುದು https://drive.google.com/file/d/1eT-L-LaJELwURG4lFHFXW2Zb2-u7R_hL/view?usp=sharing

Scroll to Top