Author name: editor

ಪ್ರಾದೇಶಿಕ ವಾರ್ತೆಗಳು

ತುಳುವ ಮಹಾಸಭಾದಿಂದ ‘ಬೀರದ ಬೊಲ್ಪು’  ಕಾವ್ಯ ಯಾನ *ಮಂದಾರ ಕಾವ್ಯದಲ್ಲಿ ತುಳು ಸಂಸ್ಕೃತಿ ಅನಾವರಣ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮೂಡುಬಿದಿರೆ: ‘ಮಂದಾರ ಕೇಶವ ಭಟ್ಟರು ತುಳು ಸಂಸ್ಕೃತಿ ಮತ್ತು ಪರಂಪರೆಯ ಸೊಗಡನ್ನು ತಮ್ಮ ಕಾವ್ಯದಲ್ಲಿ ಎಳೆ ಎಳೆಯಾಗಿ ಚಿತ್ರಿಸಿದ್ದಾರೆ. ಕಾವ್ಯಯಾನದಂತಹ  ಜನಪ್ರಿಯ ಮಾಧ್ಯಮದ ಮೂಲಕ ಅದು ಸಾರ್ವಜನಿಕವಾಗಿ ಅನಾವರಣಗೊಳ್ಳುತ್ತಿದೆ.  ಕಾವ್ಯವು ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.     ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ  ಮೂಡುಬಿದಿರೆ ಜೈನಮಠದಲ್ಲಿ ಭಾನುವಾರ ಜರಗಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಬೀರದ ಬೊಲ್ಪು’  ಕಾವ್ಯಯಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. *ಕಾವ್ಯಯಾನ: ಸುಗಿಪು – ದುನಿಪು*         ಶ್ರೀಕೃಷ್ಣನ ಬಾಲಲೀಲೆಯ ಕುರಿತಾದ ‘ಬೀರದ ಬೊಲ್ಪು’ ತುಳು ಕಾವ್ಯದ  ಸುಗಿಪು – ದುನಿಪು (ವಾಚನ – ಪ್ರವಚನ) ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದರು. ಯಕ್ಷಗಾನ ಭಾಗವತರಾದ ಪ್ರಶಾಂತ ರೈ ಪುತ್ತೂರು ಹಾಗೂ ರಚನಾ ಚಿತ್ಕಲ್ ಕಾವ್ಯ ಗಾಯನ ನಡೆಸಿಕೊಟ್ಟರು. ಯಕ್ಷದೇವ ಮಿತ್ರ ಮಂಡಳಿಯ ಎಂ. ದೇವಾನಂದ ಭಟ್ ಬೆಳುವಾಯಿ ಮದ್ದಳೆಯಲ್ಲಿ ಸಹಕರಿಸಿದರು.      ಶ್ರೀ ಮದ್ಭಾಗವತ ಮಹಾಕಾವ್ಯದಲ್ಲಿ ಬರುವ ಕೃಷ್ಣನ ಕಥೆಗೆ ಭಿನ್ನವಾಗಿ, ತುಳುನಾಡಿನ ಆಚಾರ, ವಿಚಾರ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿರುವಂತೆ ರಚಿಸಲ್ಪಟ್ಟ ಮಂದಾರರ ಕಾವ್ಯದ ವೈಶಿಷ್ಟ್ಯವನ್ನು ಭಾಸ್ಕರ ರೈ ಕುಕ್ಕುವಳ್ಳಿಯವರು ತಮ್ಮ ವ್ಯಾಖ್ಯಾನದಲ್ಲಿ ತೌಲನಿಕವಾಗಿ ವಿಶ್ಲೇಷಿಸಿದರು. ದೇವೆರೆ ಚಿತ್ತ, ತರಲೆದ ಬಿರ್ದಾಲಿ, ಬರ್ಸದ ಬೊಳ್ಕಿರಿ, ಮಾಯಣದ ಬೊಂಬೆ, ಲೂಟಿದ ಕೂಟ, ಗುಡ್ಡೆದ ಪರ್ಬ ಕಾವ್ಯ ಭಾಗಗಳಲ್ಲಿ ಬರುವ ತುಳುನಾಡಿನ ಪ್ರಕೃತಿ ವರ್ಣನೆ, ಆಟ – ಕೂಟಗಳು, ತಿಂಡಿ – ತಿನಿಸು, ದೈವಾರಾಧನೆ, ನಂಬಿಕೆ – ನಡಾವಳಿಗಳನ್ನು ಕೃಷ್ಣನ ಕಥೆಗೆ ಪೂರಕವಾಗಿ ಬಳಸಿಕೊಂಡ ಕವಿ ಚಮತ್ಕಾರವನ್ನು ಸೋದಾಹರಣವಾಗಿ ಬಣ್ಣಿಸಿದರು.*ಕಲಾವಿದರ ಸಮ್ಮಾನ:*      ಕಾವ್ಯ ಯಾನದಲ್ಲಿ ಭಾಗವಹಿಸಿದ ಕಲಾವಿದರನ್ನು ಮತ್ತು ವಿದ್ವಾಂಸರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶಾಲು – ಫಲ ಮಂತ್ರಾಕ್ಷತೆ ನೀಡಿ ಶ್ರೀ ಮಠದ ವತಿಯಿಂದ ಸನ್ಮಾನಿಸಿದರು. ಮಂದಾರ ಕೇಶವ ಭಟ್ಟರ ಪುತ್ರಿ ಶಾರದಾಮಣಿ, ತುಳುವ ಮಹಾಸಭೆಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಸಪ್ರೆ, ತುಳುಕೂಟ ಬೆದ್ರದ ಜಯಂತಿ ಎಸ್. ಬಂಗೇರ, ಚಂದ್ರಹಾಸ ದೇವಾಡಿಗ, ಸುದೇಶ್ ಕುಮಾರ್ ಪಟ್ಟಶೆಟ್ಟಿ ಉಪಸ್ಥಿತರಿದ್ದರು.      ತುಳುವ ಮಹಾಸಭಾದ ಸಂಚಾಲಕ ಮತ್ತು ತುಳು ವರ್ಲ್ಡ್ ಮುಖ್ಯಸ್ಥ ಡಾ.ರಾಜೇಶ್ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಂದಾರ ಪ್ರತಿಷ್ಠಾನದ ಪರವಾಗಿ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ವಂದಿಸಿದರು.

ಕರಾವಳಿ ಸುದ್ದಿ

ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ. *ತಿರುವನಂತಪುರದಲ್ಲಿ ಬಹುಭಾಷಾ ಕವಿ ಸಂಗಮ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಭಾರತ್ ಭವನ ತಿರುವನಂತಪುರ ಕೇರಳ ಸರಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಿರುವನಂತಪುರದ ಸಿ.ವಿ.ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ಒಂದು ದಿನದ ‘ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ’ ಇತ್ತೀಚೆಗೆ ಜರಗಿತು. ಕೇರಳ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ. ಆರ್. ಅನಿಲ್ ಉತ್ಸವವನ್ನು ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸರಕಾರದ ಶಿಕ್ಷಣ ಸಚಿವ ಶಿವನ್ ಕುಟ್ಟಿ, ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಪ್ರದೀಪ ಕುಮಾರ್ ಕಲ್ಕೂರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕನ್ನಡ ಸಂಸ್ಕೃತಿ ಉತ್ಸವದ ಅಂಗವಾಗಿ ಅಖಿಲ ಭಾರತ ವ್ಯಾಪ್ತಿಯ ಬಹುಭಾಷಾ ಕವಿಸಂಗಮವನ್ನು ಏರ್ಪಡಿಸಲಾಗಿತ್ತು. ಕಾಸರಗೋಡಿನ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾಗಿ ಭಾಗವಹಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ( ತುಳು), ಗಿರೀಶ್ ಪುಲಿಯೂರು (ಮಲಯಾಳಂ), ಎಡ್ವರ್ಡ್ ಲೋಬೋ ತೊಕ್ಕೊಟ್ಟು (ಕನ್ನಡ), ಎನ್‌.ಡಿ. ರಾಜಕುಮಾರ್ ತಿರುವನಂತಪುರಂ (ತಮಿಳು), ಡಾ.ಶೋಭನ್ ಕುಮಾರ್ ಕೊಂಪಳ್ಳಿ (ತೆಲುಗು ), ಡಾ.ಹೆಚ್.ಪೂರ್ಣಿಮ ತಿರುವನಂತಪುರಂ (ಸಂಸ್ಕೃತ), ಡಾ. ಕವಿತಾ ಮಂಗಳೂರು (ಹಿಂದಿ), ಸರಿತಾ ಮೋಹನ್ ಭಾಮ ತಿರುವನಂತಪುರಂ (ಇಂಗ್ಲಿಷ್), ವಿಲ್ಸನ್ ಕಟೀಲು (ಕೊಂಕಣಿ), ರಶೀದ್ ನಂದಾವರ (ಬ್ಯಾರಿ), ಮುಹಮ್ಮದ್ ಅಝೀಮ್ ಮಣಿಮುಂಡ (ಉರ್ದು), ಸಂಧ್ಯಾ ಗೀತ ಬಾಯಾರು (ಕರಾಡ), ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಪುರುಷೋತ್ತಮ ಭಟ್ ಕೆ. (ಹವ್ಯಕ) ಹೀಗೆ ವಿವಿಧ ಭಾಷೆಗಳಲ್ಲಿ ಸ್ವರಚಿತ ಕವಿತೆಗಳನ್ನು ಓದಿದರು.ಪತ್ರಕರ್ತ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು. ನ್ಯಾಯವಾದಿ ಎಂ.ಎಸ್. ಥೋಮಸ್ ಡಿ’ಸೋಜ ನಿರೂಪಿಸಿದರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಕಾರ್ಯಕ್ರಮ ಸಯೋಜಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಇಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಹುಟ್ಟುಹಬ್ಬ

ಮಂಗಳೂರು-ಅಗಸ್ಟ್ 31. ಇಂದು ದಕ್ಷಿಣ ಕನ್ನಡ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಹುಟ್ಟುಹಬ್ಬ.ಮೊದಲ ಅವಧಿಯಲ್ಲಿಯೇ ಅತ್ಯುತ್ತಮ ಎಂಪಿಯಾಗಿ ಎಲ್ಲರ ಮನಗೆದ್ದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರ ಹುಟ್ಟುಹಬ್ಬಕ್ಕೆ mpmla news ಶುಭ ಹಾರೈಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ. ವಿನೂತನ ಶೈಲಿಯ ಚಿಕಿತ್ಸೆಯಿಂದ ವೃದ್ಧ ಹೃದ್ರೋಗಿಗೆ ಜೀವದಾನ

ಮಂಗಳೂರು, ಆಗಸ್ಟ್ 28: ನಗರದ 70 ವರ್ಷ ವಯಸ್ಸಿನ, ಸಾವು ಬದುಕಿನ ಹೋರಾಟದಲ್ಲಿದ್ದ ಹೃದ್ರೋಗಿಯೊಬ್ಬರಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ವೈದ್ಯರ ತಂಡವು ಅಪರೂಪದ ಮತ್ತು ವಿನೂತನ ಶೈಲಿಯ ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ವರದಿಯಾಗಿದೆ.ವೃದ್ಧ ರೋಗಿಯು ಮಧುಮೇಹ ಕಾಯಿಲೆ, ತೀವ್ರ ಹೃದಯ ಸಮಸ್ಯೆ, ತೀಕ್ಷ್ಣ ಎದೆ ನೋವು, ಗಂಭೀರ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಫಾ.ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ.ಎಚ್. ಪ್ರಭಾಕರ್ ಅವರನ್ನು ಸಲಹೆಗಾಗಿ ಭೇಟಿ ಮಾಡಿದ್ದರು. ತಮ್ಮ ತೀವ್ರ ಆರೋಗ್ಯ ಸಮಸ್ಯೆಗಳನ್ನು ವೈದ್ಯರಿಗೆ ವಿವರಿಸಿದರು. ವೈದ್ಯರು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಹೃದಯದ ಮುಖ್ಯ ರಕ್ತ‌ನಾಳದಲ್ಲಿ ಬಿರುಕು ಬಿದ್ದು ರಕ್ತ ಸೋರಿಕೆಯಾಗಿ ದೇಹದ ಇತರ ಅಂಗಾಂಗಗಳಿಗೆ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತಿತ್ತು. ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ರೋಗಿಗೆ ತೆರೆದ ಹೃದಯ ಶಸ್ತ್ರಚಿತ್ಸೆ ನರವೇರಿಸಿದರೆ ಜೀವಕ್ಕೆ ಮಾರಣಾಂತಿಕವಾಗುವ ಅಪಾಯ ಇತ್ತು.ಡಾ.ಪ್ರಭಾಕರ್ ಅವರು ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯಕೀಯ ತಂಡವನ್ನು ರಚಿಸಿ, ಗಂಭೀರ ಹೃದ್ರೋಗ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿದರು. ತುರ್ತು 3 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ “ಅಯೋರ್ಟಿಕ್ ಸ್ಟಂಟ್ ಗ್ರಾಫ್ಟ್” ಚಿಕಿತ್ಸೆಯನ್ನು ನೆರವೇರಿಸಿ ರಕ್ತನಾಳದ ಸೋರುವಿಕೆಯನ್ನು ತಡೆಗಟ್ಟಿ, ದೇಹದ ಇತರ ಅಂಗಾಂಗಗಳಿಗೆ ನಿಯಮಿತ ರಕ್ತ ಪರಿಚಲನೆಗೆ ಅನುವು ಮಾಡಿಕೊಟ್ಟರು.ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅದರ ಮೂಲಕ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.ಈ ಅಪಾಯಕಾರಿ ಮತ್ತು ಕ್ಲಿಷ್ಟಕರ ಚಿಕಿತ್ಸೆಯನ್ನು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಲಾಗಿದೆ ಎಂದು ಡಾ.ಎಚ್. ಪ್ರಭಾಕರ್ ಮಾಹಿತಿ ನೀಡಿದ್ದಾರೆ.ಈ ಅಪರೂಪದ ಚಿಕಿತ್ಸೆಗೆ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟೋಲ್ ಪಿಂಟೊ, ಡಾ. ಚೇತನ್ ಆನಂದ್ ಮತ್ತು ಡಾ. ಅಶೋಕ್ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತ್ತಿದ್ದಾರೆ.ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫೌಸ್ಟಿನ್ ಲ್ಯೂಕಸ್ ಲೋಬೊ ಅವರು, ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ನೆರವೇರಿಸಲಾಗಿದೆ ಎಂದು ನುಡಿದು, ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಹೊಸ ಪ್ರವೃತ್ತಿ ಮತ್ತು ತಂತ್ರಜ್ಞಾನಗಳೊಂದಿಗೆ ಹೆಜ್ಜೆ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್‌ ಧರ್ಮಗುರು ಫಾ. ವಿನ್ಸೆಂಟ್‌ ಮೊಂತೇರೊ ನಿಧನ. ವೈಸಿಎಸ್‌, ವೈಎಸ್ಎಂ ಮಾಜಿ ರಾಷ್ಟ್ರೀಯ ನಿರ್ದೇಶಕರಾಗಿದ್ದ ಫಾ. ವಿನ್ಸೆಂಟ್‌

ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು, ಯಂಗ್ ಕ್ರಿಶ್ಚಿಯನ್ ಸ್ಟೂಡೆಂಟ್ಸ್‌ (ವೈಸಿಎಸ್‌) ಮತ್ತು ಯಂಗ್ ಸ್ಟೂಡೆಂಟ್ಸ್‌ ಮೂವ್‌ಮೆಂಟ್‌ (ವೈಎಸ್ಎಂ) ಸಂಘಟನೆಗಳ ಮಾಜಿ ರಾಷ್ಟ್ರೀಯ ನಿರ್ದೇಶಕ ಹಾಗೂ ವೈಸಿಎಸ್‌ ಸಂಘಟನೆಯ ಏಶಿಯಾ ವಿಭಾಗದ ಚಾಪ್ಲೈನ್ ಆಗಿ ಸೇವೆ ಸಲ್ಲಿಸಿದ್ದ ವಂದನೀಯ ಫಾ. ವಿನ್ಸೆಂಟ್‌ ಮೊಂತೇರೊ (71) ಅವರು ಮಂಗಳೂರಿನ ಜಪ್ಪು ಸೈಂಟ್ ಜೋಸೆಫ್‌ ವಾಜ್ ಹೋಂ ನಲ್ಲಿ ಆಗಸ್ಟ್ 29 ರಂದು ನಿಧನ ಹೊಂದಿದರು.ಮೂಲತ: ಮಂಗಳೂರಿನ ಆಂಜೆಲೋರ್ ಚರ್ಚ್ ವ್ಯಾಪ್ತಿಯ ನಿವಾಸಿಯಾಗಿದ್ದ ಅವರು 1981 ರಲ್ಲಿ ಧರ್ಮಗುರು ದೀಕ್ಷೆ ಸ್ವೀಕರಿಸಿದ್ದರು. ಬಳಿಕ ನಾಲ್ಕು ದಶಕಗಳ ಧರ್ಮಗುರುಗಳಾಗಿ ಸಮರ್ಪಣೆ ಮತ್ತು ಬದ್ಧತೆಯೊಂದಿಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ಸಮೀಪದ ಕಿರೆಮ್‌ ಚರ್ಚ್‌ ನಲ್ಲಿ ಸಹಾಯಕ ಗುರುಗಳಾಗಿ ಮತ್ತು ಬಳಿಕ ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಸೇವೆಯ ಜತೆಗೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಸಂಘಟನೆಗಳಾದ ಐಸಿಯವೈಎಂ, ವೈಸಿಎಸ್ ಮತ್ತು ವೈಎಸ್‌ಎಂ ನಿರ್ದೇಶಕರಾಗಿ ಹಾಗೂ ಬಳಿಕ ಪ್ರಾದೇಶಿಕ ನಿರ್ದೇಶಕ ಮತ್ತು 1989–1995 ಅವಧಿಯಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಯುವಜನ ಸೇವೆಯಲ್ಲಿನ ಬದ್ಧತೆಯನ್ನು ಗುರಿತಿಸಿ 2004 ರಲ್ಲಿ ವೈಸಿಎಸ್‌ನ ಏಷ್ಯಾ ವಿಭಾಗದ ಚಾಪ್ಲೈನ್ ಆಗಿಯೂ ಅವರನ್ನು ನೇಮಕ ಮಾಡಲಾಗಿತ್ತು.ಧರ್ಮಗುರುಗಳಾಗಿ ಅವರು ಉಡುಪಿ ಜಿಲ್ಲೆಯ ಪಾಂಗಾಳ, ಕಿನ್ನಿಗೋಳಿ ಹಾಗೂ ಅಂತಿಮವಾಗಿ ಮಂಗಳೂರಿನ ಬೆಂದೂರ್ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತ ಜೀವನವನ್ನು ಜಪ್ಪು ಸಂತ ಜುಜೆ ವಾಜ್ ಹೋಂನಲ್ಲಿ ಕಳೆಯುತ್ತಿದ್ದರು. ಯುವಕರಿಗೆ ಮತ್ತು ಧರ್ಮಗುರುಗಳಿಗೆ ಮಾರ್ಗದರ್ಶನ ನೀಡಿದ ದಾರ್ಶನಿಕ ನಾಯಕ ಎಂಬುದಾಗಿ ಅವರನ್ನು ಸ್ಮರಿಸಲಾಗುತ್ತಿದೆ.ಅವರ ಅಂತ್ಯಕ್ರಿಯೆಯ ಬಲಿಪೂಜೆ ಮತ್ತು ಅಂತ್ಯ ವಿಧಿಗಳು ಆಗಸ್ಟ್ 31 ರಂದು ಭಾನುವಾರ ಸಂಜೆ 4 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ವಂದನೀಯ ಫಾ. ವಿನ್ಸೆಂಟ್‌ ಮೊಂತೇರೊ ಅವರ ನಿಧನಕ್ಕೆ ಕ್ಯಾಥೊಲಿಕ್ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸಂತೋಷ್‌ ಡಿ’ಸೋಜಾ ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಾಳೆ ಶಾಲೆಗೆ ರಜೆ

ಮಂಗಳೂರು- ವಿಪರೀತ ಮಳೆ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಅಗಸ್ಟ್ 29ರ ಶುಕ್ರವಾರ ಶಾಲೆ, ಪಿಯು ಕಾಲೇಜ್ ,ಅಂಗನವಾಡಿಗೆ ರಜೆ ಘೋಷಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಕೊಂಕಣಿ ಮಾನ್ಯತಾ ದಿನಾಚರಣೆ

ಶ್ರಮಿಕ ಸಂತ ಜೋಸೆಫ್ ರ‍್ಚ್, ವಾಮಂಜೂರ್‌ನಲ್ಲಿ ಭಾನುವಾರ ಕೊಂಕಣಿ ಮಾನ್ಯತಾ ದಿನವನ್ನು ರ‍್ಷೋಲ್ಲಾಸದಿಂದ ಆಚರಿಸಲಾಯಿತು.ಈ ಕರ‍್ಯಕ್ರಮವನ್ನು ರ‍್ಚ್ನ್ ಐ.ಸಿ.ವೈ.ಎಮ್ ಸದಸ್ಯರು ಮಾಂಡ್ ಸೊಭಾಣ್ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದರು. ಕರ‍್ಯಕ್ರಮವು ಐ.ಸಿ.ವೈ.ಎಮ್ (ಭಾರತೀಯ್ ಕಥೊಲಿಕ ಯುವ ಸಂಚಾಲನ) ಸದಸ್ಯರು ಹಡಿದ ಪ್ರರ‍್ಥನಾ ಗೀತೆಯಿಂದ ಪ್ರಾರಂಭವಾಯಿತು. ನಂತರ ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಸಾಂಪ್ರದಾಯಿಕ ಘುಮಟನ್ನು ಬಾರಿಸುವ ಮೂಲಕ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿದರು.ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯನ್ನು ಕೊಂಕಣಿ ಭಾಷೆ ಬಳಸಲು ಉತ್ತೇಜಿಸುವಂತೆ ಕರೆ ನೀಡಿದರು. ಜೊತೆಗೆ ಕರ‍್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರ‍್ಚ್ ರ‍್ಮಗುರು ವಂ. ಜೇಮ್ಸ್ ಡಿಸೋಜಾ ಅವರು, “ಕೊಂಕಣಿ ನಮ್ಮ ಹೆಮ್ಮೆ, ನಮ್ಮ ಅಸ್ತಿತ್ವದ ಮೂಲ. ಕೊಂಕಣಿ ಬೆಳೆಯಲಿ, ಬದುಕಲಿ ಮತ್ತು ಉಳಿಯಲಿ ಎನ್ನುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಕರೆ ನೀಡಿದರು.ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಕೊಂಕಣಿ ಭಾಷೆಗೆ ದೊರೆತ ಮಾನ್ಯತೆ, ಅದರ ಸಂಸ್ಕöÈತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು. “ನಮ್ಮ ಮಾತೃಭಾಷೆ ಮತ್ತು ಸಂಸ್ಕöÈತಿಯನ್ನು ಕಾಪಾಡಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದೆ” ಎಂದು ಹೇಳಿದರು.ಮಾನ್ಯತಾ ದಿನಾಚರಣೆಯ ಅಂಗವಾಗಿ ವೈವಿಧ್ಯಮಯ ಸಾಂಸ್ಕöÈತಿಕ ಕರ‍್ಯಕ್ರಮಗಳು ನಡೆಯಿತು. ಕೊಂಕಣಿ ಹಾಡುಗಳು, ಸಾಂಪ್ರದಾಯಿಕ ಘುಮಟ ಗಾಯನ, ಎರಡು ಸಾಂಪ್ರದಾಯಿಕ ಕೊಂಕಣಿ ನೃತ್ಯಗಳು ಹಾಗೂ ಕೊಂಕಣಿ ಒಗಟುಗಳು ಪ್ರೇಕ್ಷಕರ ಮನಗೆದ್ದವು.ಕರ‍್ಯಕ್ರಮದಲ್ಲಿ ರ‍್ಚಿನ ಸಹಾಯಕ ರ‍್ಮಗುರು ವಂ. ಜೀವನ್ ಶೈಲೇಶ್ ಲೋಬೊ, ಐ.ಸಿ.ವೈ.ಎಮ್ ಸಚೇತಕಿ ಸಿ. ಐಡಾ ಡಿಸೋಜಾ, ರ‍್ಚ್ ಪಾಲನಾ ಸಮಿತಿ ಕರ‍್ಯರ‍್ಶಿ ಲೊವೆಲ್ ಮೊಂತೆರೊ, ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಐ.ಸಿ.ವೈ.ಎಮ್ ಘಟಕಾಧ್ಯಕ್ಷ ಮೆಲ್ರೋಯ್ ಡಿಸೋಜಾ ಉಪಸ್ಥಿತರಿದ್ದರು.ಐ.ಸಿ.ವೈ.ಎಮ್ ಉಪಾಧ್ಯಕ್ಷೆ ಮಹಿಮ ಡಿಸೋಜಾ ಸ್ವಾಗತಿಸಿ, ಕರ‍್ಯರ‍್ಶಿ ಜಾಸ್ಮಿನ್ ಡಿಸೋಜಾ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

Snehalaya Charitable Trust Completes 16 Years of Service to mankind

Snehalaya Charitable Trust is proud to have completed 16 years of yeomen service to the least, the last and the lost on August 26, 2025, coinciding with the Birth Anniversary of St. Mother Teresa of Kolkotta. The day began with a Thanks giving Holy Mass, presided over by: Rev. Dr. Fr. Praveen Martis SJ, [Vice Chancellor, St. Aloysius Deemed to be University, Mangalore] and concelebrated by Rev. Fr. Peter Reginald D’Souza, [Parish Priest, St Lawrence Church, Bola] Rev. Fr. Ligory Crasta, OCD, [Administrator, Ryshivana; Christian Institute of Spirituality, Retreat Centre, Ranipura] Rev. Fr. Cyril D’Souza, [Chaplain, Snehalaya], Rev. Fr. Dominic Sequeira SDB, [Parish Priest., Holy Cross Church, Pavoor] .The thanks giving Mass was offered in gratitude to all donors who have supported Snehalaya throughout these 16 years of service.Soon after the Eucharistic celebration, two books written by Mr. Geo D. Silva Agrar were released: Namely, “The Chosen One” (in English) – contains the Life History & Mission of Joseph Crasta in bringing up Snehalaya, the initial difficulties and struggles. And the second book in Konkani , titled “Pati Yaa Mukar Meta Thuji”, on positive thinking and an inspiration to the Youth in particular. Rev. Dr. Fr. Praveen Martis SJ, Vice Chancellor, St. Aloysius Deemed to be University, Mangalore unwrapped the cover and released the books.During the program, Mr. Purushotham, Maintenance Supervisor, was awarded the Best Staff of the Year 2024-2025, recognizing his exceptional dedication and contributions.Founder, Joseph Crasta, expressed his heartfelt gratitude for the unwavering support he received from the benefactors and well-wishers over the past 16 years. Mrs Olivia Crasta proposed vote of thanks to the guests and the gathering. A huge gathering consisting of donors, well-wishers and friends witnessed the celebration. The celebration concluded with a fellowship meal.

ಪ್ರಾದೇಶಿಕ ವಾರ್ತೆಗಳು

ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮಂಗಳೂರು – ಮಾನವ ಸೇವೆಯ ಹದಿನಾರು ವೈಭವಯುತ ವರ್ಷಗಳ ಸಂಭ್ರಮಾಚರಣೆ

2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ಜನ್ಮದಿನದ ಸುದಿನದಂದೇ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಇವರ ಮಾನವಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು.ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ವಂ. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ವಂ. ಫಾ. ಲೀಗೊರಿ ಕ್ರಾಸ್ಟಾ ಓಸಿಡಿ (ನಿರ್ವಹಣಾಧಿಕಾರಿ, ರಿಷಿವನ–ಆಧ್ಯಾತ್ಮಿಕ ಕೇಂದ್ರ, ರಾಣಿಪುರ), ವಂ. ಫಾ. ಸಿರಿಲ್ ಡಿ’ಸೋಜ (ಸ್ನೇಹಾಲಯದ ಚಾಪ್ಲೇನ್), ಹಾಗೂ ವಂ. ಫಾ. ಡೊಮಿನಿಕ್ ಸೆಕ್ವೇರಾ ಎಸ್ಡಿಬಿ (ಹೋಲಿ ಕ್ರಾಸ್ ಚರ್ಚ್, ಪಾವೂರು) ದಿವ್ಯ ಬಲಿ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಈ ಧನ್ಯಾತಾ ಬಲಿಪೂಜೆಯನ್ನು ಕಳೆದ ಹದಿನಾರು ವರ್ಷಗಳಲ್ಲಿ ಸ್ನೇಹಾಲಯಕ್ಕೆ ಸಹಕಾರ, ದಾನ, ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲಾ, ಶುಭಚಿಂತಕರು ಹಾಗೂ ಹಿತೈಷಿಗಳಿಗಾಗಿ ಅರ್ಪಿಸಲಾಯಿತು.ಸಾಹಿತ್ಯ ಕೃತಿಗಳ ಬಿಡುಗಡೆ:ಬಲಿಪೂಜೆಯ ನಂತರ, ಶ್ರೀ ಜಿಯೋ ಡಿ. ಸಿಲ್ವಾ ಅಗ್ರಾರ್ ಅವರ ಎರಡು ಸೃಜನಶೀಲ ಕೃತಿಗಳ ಸ್ಮರಣೀಯ ಅನಾವರಣ ನೆರವೇರಿತು.ಮೊದಲ ಕೃತಿ: “The Chosen One” – ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟ ಈ ಕೃತಿಯಲ್ಲಿ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಅವರ ಅಮೋಘ ಜೀವನಗಾಥೆ, ಸಾಧನೆಗಳು, ಹಾಗೂ ಸಂಸ್ಥೆಯ ನಿರ್ಮಾಣಕ್ಕಾಗಿ ನಡೆಸಿದ ದುರ್ಗಮವಾದ ಹೋರಾಟವನ್ನು ಸಾಹಿತ್ಯಮಯ ಶೈಲಿಯಲ್ಲಿ ಚಿತ್ರಿಸಲಾಗಿದೆ. “ದಿ ಚೊಸನ್ ಒನ್” ಅಂದರೆ “ಆರಿಸಲ್ಪಟ್ಟವನು” ಎನ್ನುವ ಶೀರ್ಷಿಕೆಯಲ್ಲಿ ಲೋಕಾರ್ಪಣೆಗೊಂಡ ಈ ಪುಸ್ತಕಕ್ಕೆ ಶ್ರಿಯುತ ಜೆ. ವಿ. ಡಿ ಮೆಲ್ಲೊ ಇವರು ಸೊಗಸಾದ ಪ್ರಸ್ತಾವನೆಯನ್ನು ಬರೆದಿರುತ್ತಾರೆ.ಎರಡನೇ ಕೃತಿ: ಕೊಂಕಣಿ ಭಾಷೆಯ “ಪಾಟಿಂ ಯಾ ಮುಕಾರ್ ಮೇಟಾಂ ತುಜಿಂ” – ಸಕಾರಾತ್ಮಕ ಚಿಂತನೆಗಳನ್ನು ಯುವಪೀಳಿಗೆಗೆ ಪ್ರೇರಕವಾಗುವಂತೆ ಲೇಖನರೂಪದಲ್ಲಿ ಸಂಕಲಿಸಿದ ಪುಸ್ತಕವಾಗಿದೆ.. ಈ ಅದ್ವಿತೀಯ ಕೃತಿಗಳು ರೂಪಗೊಂಡಿರುವ ಶ್ರಮದ ಹಿಂದೆ ಪ್ರಭಾವಿ ಲೇಖಕರಾದ ಶ್ರೀ ಜಿಯೋ ಡಿ’ ಸಿಲ್ವ ಅವರ ಅದ್ಭುತ ಸಾಹಿತ್ಯ ಮತ್ತು ಕೌಶಲ್ಯವನ್ನು ಕಾಣಬಹುದಾಗಿದೆ. ಈ ಕೃತಿಗಳನ್ನು ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಗೌರವಪೂರ್ವಕವಾಗಿ ಅನಾವರಣಗೊಳಿಸಿ ಬಿಡುಗಡೆ ಮಾಡಿದರು.ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ – ಸೇವೆಯ ಮೆಚ್ಚುಗೆ:ಈ ಸಂದರ್ಭದಲ್ಲಿ, 2024–2025ರಲ್ಲಿ ಸ್ನೇಹಾಲಯದಲ್ಲಿ ನೀಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ, ಶ್ರೀ ಪುರುಷೋತ್ತಮ (ಸ್ನೇಹಾಲಯದ ನಿರ್ವಹಣಾ ಮೇಲ್ವಿಚಾರಕ) ಅವರಿಗೆ “ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ” ಯನ್ನು ಪ್ರದಾನಿಸಿ ಅವರನ್ನು ಗೌರವಿಸಲಾಯಿತು.ಕೃತಜ್ಞತೆಯ ವಂದನಾ ನುಡಿಗಳುಸ್ನೇಹಾಲಯದ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ಟಾ ತಮ್ಮ ಭಾವಪೂರ್ಣ ಭಾಷಣದ ಸಂದರ್ಭದಲ್ಲಿ, ಸಂಸ್ಥೆಯ ದೀರ್ಘಯಾತ್ರೆಯಲ್ಲಿ ಅಡಿಗಲ್ಲಿನಂತೆ ಬೆಂಬಲಿಸಿದ ಎಲ್ಲಾ ಧಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಅವರೊಂದಿಗೆ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಅವರು ಅತಿಥಿಗಳಿಗೂ ಸಭಿಕರಿಗೂ ಹೃತ್ಪೂರ್ವಕ ಧನ್ಯವಾದ ವ್ಯಕ್ತಪಡಿಸಿದರು.ಸಹಭೋಜನ ಸಮಾರೋಪಅನೇಕ ದಾನಿಗಳು, ಹಿತೈಷಿಗಳು ಮತ್ತು ಶುಭಚಿಂತಕರ ಸಾನ್ನಿಧ್ಯದಲ್ಲಿ ಸಮಾರಂಭವು ಸೌಹಾರ್ದಪೂರ್ಣ ಸಹಭೋಜನದೊಂದಿಗೆ ಸಮಾರೋಪಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಕೊಂಕಣಿ ಮಾನ್ಯತಾ ದಿನಾಚರಣೆ

ಶ್ರಮಿಕ ಸಂತ ಜೋಸೆಫ್ ರ‍್ಚ್, ವಾಮಂಜೂರ್‌ನಲ್ಲಿ ಭಾನುವಾರ ಕೊಂಕಣಿ ಮಾನ್ಯತಾ ದಿನವನ್ನು ರ‍್ಷೋಲ್ಲಾಸದಿಂದ ಆಚರಿಸಲಾಯಿತು.ಈ ಕರ‍್ಯಕ್ರಮವನ್ನು ರ‍್ಚ್ನ್ ಐ.ಸಿ.ವೈ.ಎಮ್ ಸದಸ್ಯರು ಮಾಂಡ್ ಸೊಭಾಣ್ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದರು. ಕರ‍್ಯಕ್ರಮವು ಐ.ಸಿ.ವೈ.ಎಮ್ (ಭಾರತೀಯ್ ಕಥೊಲಿಕ ಯುವ ಸಂಚಾಲನ) ಸದಸ್ಯರು ಹಡಿದ ಪ್ರರ‍್ಥನಾ ಗೀತೆಯಿಂದ ಪ್ರಾರಂಭವಾಯಿತು. ನಂತರ ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಸಾಂಪ್ರದಾಯಿಕ ಘುಮಟನ್ನು ಬಾರಿಸುವ ಮೂಲಕ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿದರು.ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯನ್ನು ಕೊಂಕಣಿ ಭಾಷೆ ಬಳಸಲು ಉತ್ತೇಜಿಸುವಂತೆ ಕರೆ ನೀಡಿದರು. ಜೊತೆಗೆ ಕರ‍್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರ‍್ಚ್ ರ‍್ಮಗುರು ವಂ. ಜೇಮ್ಸ್ ಡಿಸೋಜಾ ಅವರು, “ಕೊಂಕಣಿ ನಮ್ಮ ಹೆಮ್ಮೆ, ನಮ್ಮ ಅಸ್ತಿತ್ವದ ಮೂಲ. ಕೊಂಕಣಿ ಬೆಳೆಯಲಿ, ಬದುಕಲಿ ಮತ್ತು ಉಳಿಯಲಿ ಎನ್ನುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಕರೆ ನೀಡಿದರು.ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಕೊಂಕಣಿ ಭಾಷೆಗೆ ದೊರೆತ ಮಾನ್ಯತೆ, ಅದರ ಸಂಸ್ಕöÈತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು. “ನಮ್ಮ ಮಾತೃಭಾಷೆ ಮತ್ತು ಸಂಸ್ಕöÈತಿಯನ್ನು ಕಾಪಾಡಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದೆ” ಎಂದು ಹೇಳಿದರು.ಮಾನ್ಯತಾ ದಿನಾಚರಣೆಯ ಅಂಗವಾಗಿ ವೈವಿಧ್ಯಮಯ ಸಾಂಸ್ಕöÈತಿಕ ಕರ‍್ಯಕ್ರಮಗಳು ನಡೆಯಿತು. ಕೊಂಕಣಿ ಹಾಡುಗಳು, ಸಾಂಪ್ರದಾಯಿಕ ಘುಮಟ ಗಾಯನ, ಎರಡು ಸಾಂಪ್ರದಾಯಿಕ ಕೊಂಕಣಿ ನೃತ್ಯಗಳು ಹಾಗೂ ಕೊಂಕಣಿ ಒಗಟುಗಳು ಪ್ರೇಕ್ಷಕರ ಮನಗೆದ್ದವು.ಕರ‍್ಯಕ್ರಮದಲ್ಲಿ ರ‍್ಚಿನ ಸಹಾಯಕ ರ‍್ಮಗುರು ವಂ. ಜೀವನ್ ಶೈಲೇಶ್ ಲೋಬೊ, ಐ.ಸಿ.ವೈ.ಎಮ್ ಸಚೇತಕಿ ಸಿ. ಐಡಾ ಡಿಸೋಜಾ, ರ‍್ಚ್ ಪಾಲನಾ ಸಮಿತಿ ಕರ‍್ಯರ‍್ಶಿ ಲೊವೆಲ್ ಮೊಂತೆರೊ, ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಐ.ಸಿ.ವೈ.ಎಮ್ ಘಟಕಾಧ್ಯಕ್ಷ ಮೆಲ್ರೋಯ್ ಡಿಸೋಜಾ ಉಪಸ್ಥಿತರಿದ್ದರು.ಐ.ಸಿ.ವೈ.ಎಮ್ ಉಪಾಧ್ಯಕ್ಷೆ ಮಹಿಮ ಡಿಸೋಜಾ ಸ್ವಾಗತಿಸಿ, ಕರ‍್ಯರ‍್ಶಿ ಜಾಸ್ಮಿನ್ ಡಿಸೋಜಾ ವಂದಿಸಿದರು.

Scroll to Top