Author name: editor

ಪ್ರಾದೇಶಿಕ ವಾರ್ತೆಗಳು

ರಂಗ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ -ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್

ಮಂಗಳೂರು: ರಂಗಭೂಮಿಯ ಬಗ್ಗೆ ಈಗ ಸಮಾಜದಲ್ಲಿ ಗೌರವದ ಭಾವನೆ ಇದೆ. ಮಕ್ಕಳು ಸೇರಿದಂತೆ ಯುವ ಜನಾಂಗ ನಾಟಕದಲ್ಲಿ ಅಭಿನಯಿಸಲು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಂಗಾಸಕ್ತರನ್ನು ಕಲಾವಿದರಾಗಿ ಬೆಳೆಸುವ ನಿಟ್ಟಿನಲ್ಲಿ ರಂಗ ತರಬೇತಿ ಕೇಂದ್ರವೊಂದನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ನಟ, ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಮುಂದಿನ ವರ್ಷ ರಂಗ ತರಬೇತಿ ಕೇಂದ್ರ ಕಾರ್ಯಾರಂಭಿಸಲಿದೆ ’ಎಂದರು.ಬಾಲ್ಯದಲ್ಲಿ ಬಡತನವಿತ್ತು. ಶಾಲಾ ದಿನಗಳಲ್ಲೇ ನಾಟಕ ಮತ್ತು ಹಾಡುಗಾರಿಕೆಯಲ್ಲಿ ಆಸಕ್ತಿ ವಹಿಸಿದೆ. ಜತೆಗೆ ಹಾಸ್ಯ ಪ್ರವೃತ್ತಿ ಇತ್ತು.ಶಾಲಾ ಗುರುಗಳು ಪ್ರೋತ್ಸಾಹ ನೀಡಿದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದದ್ದು ಬದುಕಿಗೆ ಹೊಸ ತಿರುವು ನೀಡಿತು. ನನ್ನೊಳಗಿನ ಕಲಾವಿದ ಬೆಳಕಿಗೆ ಬರಲು ಅವಕಾಶ ದೊರೆಯಿತು. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ತಮಗೆ ಅಭಿರುಚಿ ಇರುವ ಕಲೆಯಲ್ಲಿ ಪರಿಣತಿ ಪಡೆಯಬೇಕು ಎಂದು ಅವರು ಹೇಳಿದರು.ಬಿ.ವಿ.ಕಿರೋಡಿಯನ್ ಅವರು ನನ್ನ ರಂಗಭೂಮಿಯ ಗುರುಗಳು. ಅವರಿಂದ ಅಭಿನಯದ ತರಬೇತಿ ಪಡೆದೆ. ಬದುಕಿನಲ್ಲಿ ಸಾಕಷ್ಟು ನೋವು ಕಂಡಿದ್ದೇನೆ. ಹಾಗಾಗಿ ಛಲ ಮೂಡಿತು. ನನ್ನದೇ ಆದ ಚಾ ಪರ್ಕ ತಂಡದ ಮೂಲಕ ಶುದ್ಧ ಹಾಸ್ಯದ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಕಂಡೆ. ತುಳುನಾಡಿನ ಜನರ ಅಭಿಮಾನ ಹಾಗೂ ಆಶೀರ್ವಾದದಿಂದ ಬೆಳೆದೆ. .ಈಗ ಪ್ರದರ್ಶನವಾಗುತ್ತಿರುವ ‘ಎನ್ನನೇ ಕಥೆ ’60ನೇ ನಾಟಕ ಎಂದು ಅವರು ಹೇಳಿದರು.ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಶ್ಮಿತಾ.ಎಸ್.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು , ಪ್ರೆಸ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಆನಂದ ಶೆಟ್ಟಿ, ಮಹಾರಾಷ್ಟ್ರ -ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ಸಂತೋಷ್ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು.ರಂಗ ಏರದ ದ್ರೋಣ:ಶಾಲೆಯಲ್ಲಿ ಹಿಂದಿ ನಾಟಕವೊಂದರಲ್ಲಿ ದ್ರೋಣನ ಪಾತ್ರ ದೊರೆಯಿತು. ಸಾಯಂಕಾಲ 4 ಗಂಟೆಗೆ ಗಡ್ಡ ಕಟ್ಟಿ, ಬಣ್ಣ ಹಚ್ಚಿ ರೆಡಿಯಾಗಿದ್ದೆ. ರಾತ್ರಿ 9 ಗಂಟೆಯಾದರೂ ನಾಟಕ ಆರಂಭವಾಗಲಿಲ್ಲ. ಸಮಯದ ಅಭಾವದಿಂದ ಹಿಂದಿ ನಾಟಕ ರದ್ದು ಎಂದು ಮೈಕ್‌ನಲ್ಲಿ ಘೋಷಿಸಿದರು. ಮೊದಲ ಬಾರಿಗೆ ಬಣ್ಣ ಹಚ್ಚಿದರೂ, ರಂಗ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಗಡ್ಡ ಬಿಚ್ಚಿದಾಗ ಕಣ್ಣಲ್ಲಿ ನೀರು ಬಂದಿತ್ತು ಎಂದು ಕಾಪಿಕಾಡ್ ಮೊದಲ ಅನುಭವವನ್ನು ಹಂಚಿಕೊಂಡರು.

ಪ್ರಾದೇಶಿಕ ವಾರ್ತೆಗಳು

ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಬೆಳ್ತಂಗಡಿ ಶಾಖೆ ಶೀಘ್ರದಲ್ಲಿ ಆರಂಭ

ಮAಗಳೂರು: ಮಂಗಳೂರಿನ ಬೆಂದೂರ್‌ವೆಲ್ ಇಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾ ದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.ಪ್ರಸ್ತುತ ಸೊಸೈಟಿಯ ಶಾಖೆಯು ಮಂಗಳೂರು, ಸುರತ್ಕಲ್, ಉಡುಪಿ ಹಾಗೂ ಬಂಟ್ವಾಳದಲ್ಲಿದ್ದು, ನೂತನ ಶಾಖೆಯನ್ನು ಬೆಳ್ತಂಗಡಿಯ ನೊರೊನ ಕಾಂಪ್ಲೆಕ್ಸ್ ಚರ್ಚ್ ರೋಡ್ ಹತ್ತಿರ ಬೆಳ್ತಂಗಡಿ ಇಲ್ಲಿ ತೆರೆಯಲು ಸಜ್ಜಾಗಿದೆ. 30 ವರ್ಷಗಳ ವಿಶ್ವಾಸಾರ್ಹ ಸೇವೆ ಮಾಡುತ್ತಾ ಬಂದಿರುವ ಸೊಸೈಟಿಯು ಸತತ ಲಾಭ ಗಳಿಕೆಯೊಂದಿಗೆ, ಸದಸ್ಯರಿಗೆ ಸತತ 20% ಡಿವಿಡೆಂಡ್ ನೀಡುತ್ತಾ ಬರುತ್ತಿದೆ. ಸರ್ಕಾರದ ಅಡಿಟ್ ವರ್ಗೀಕರಣದಲ್ಲಿ ಸತತ ‘ಎ’ ವರ್ಗ ಪಡೆಯುವುದರೊಂದಿಗೆ ಉತ್ತಮ ಅಭಿವೃದ್ಧಿಗೆ ಎಸ್ ಡಿ ಸಿ ಸಿ ಬ್ಯಾಂಕ್ ಸಾಧನ ಪ್ರಶಸ್ತಿಯನ್ನು ಸತತ ಪಡೆಯುತ್ತಾ ಬರುತ್ತಿದೆ.ಎಲ್ಲಾ ಶಾಖೆಗಳು ಕಂಪ್ಯೂಟರಿಕೃತ ಲೆಕ್ಕಪತ್ರವ್ಯವಸ್ಥೆ ಎಲ್ಲಾ ಭದ್ರತಾ ವ್ಯವಸೆಗಳೊಂದಿಗೆ ಗ್ರಾಹಕರಿಗೆ ಉತ್ತಮ ಬ್ಯಾಂಕಿAಗ್ ಸೇವೆ ನೀಡುತ್ತಾ ಬರುತ್ತಿದೆ. ಬೆಳ್ತಂಗಡಿ ಶಾಖೆಯು ಆರಂಭದ ಕೊಡುಗೆಯಾಗಿ ಸಾಮಾನ್ಯ ಠೇವಣಿ 1 ವರ್ಷಕ್ಕೆ 8.50%, 2 ವರ್ಷಕ್ಕೆ 9%, 3 ವರ್ಷಕ್ಕೆ 9.50% ಹಾಗೂ ಹಿರಿಯ ನಾಗರಿಕರಿಗೆ 1 ವರ್ಷಕ್ಕೆ 9%, 2 ವರ್ಷಕ್ಕೆ 9.50%, 3 ವರ್ಷಕ್ಕೆ 10% ನೀಡುತ್ತಿದ್ದು ಗ್ರಾಹಕ ಬಂಧುಗಳು ಕೆಲವೇ ದಿನಗಳ ಅವಧಿ ನೀಡುವ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಲು ಸೊಸೈಟಿಯ ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಅ 31: ಕಲ್ಲಚ್ಚು ಪ್ರಶಸ್ತಿ ಪ್ರದಾನ

ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ” ಕಲ್ಲಚ್ಚು ಪ್ರಕಾಶನದ” 16 ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಅಗಸ್ಟ್ 31 ಭಾನುವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಡಾ. ಎಸ್ ಎಮ್ ಶಿವಪ್ರಕಾಶ್, ಜಬೀವುಲ್ಲಾ ಎಂ ಅಸದ್, ಗೋಕಾವಿ ಗೆಳೆಯರ ಬಳಗ, ರೆಮೊನಾ ಎವೆಟ್ ಪೆರೇರಾ ಮತ್ತು ಡಾ ಪ್ರಕಾಶ ಕೇಶವ ನಾಡಿಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆ ಆಗಿದ್ದು ಕಸಾಪದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಾಹಿತಿ ಸಂತೋಷಕುಮಾರ ಮೆಹಂದಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಲಿರುವರು . ಕವಿ ರಘು ಇಡ್ಕಿದು ಅವರ ಅಭಿನಂದನಾ ಮಾತು ಹಾಗೂ ಎನ್ ಸುಬ್ರಾಯ ಭಟ್ ಅವರ ನಿರೂಪಣೆ ಇರುವ ಈ ಸಮಾರಂಭಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಮುಖ್ಯಸ್ಥ ಮಹೇಶ ಆರ್ ನಾಯಕ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು.ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಸಿಯಸ್ ಕುವೆಲ್ಲೊ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕೊಂಕಣಿ ಮಾತೃ ಭಾಷೆಯವರು ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲಿಯೇ ಮಾತನಾಡುವ ಮೂಲಕ ಈ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗ ಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅವರು ಮಾತನಾಡಿ ಕೊಂಕಣಿ ಮಾನ್ಯತೆ ಲಭಿಸಿದ ಕುರಿತಂತೆ ಮಾಹಿತಿ ನೀಡಿ ನಮ್ಮ ಮಾತೃ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸಲು ಎಲ್ಲರೂ ಮುಂದಾಗ ಬೇಕು ಎಂದು ಸಲಹೆ ಮಾಡಿದರು.ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಸ್ವಾಗತಿಸಿದರು.ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಗಾಯನ ಮತ್ತು ಕವಿತಾ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಕುರಿತಂತೆ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಚರ್ಚಿನ ಸದಸ್ಯ ಚಾರ್ಲ್ಸ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಚರ್ಚ್ ನ ಸರ್ವ ಆಯೋಗಗಳ ಸಂಚಾಲಕ ಜೋಸ್ಲಿನ್ ಲೋಬೊ, ಎರಡು ಕಾನ್ವೆಂಟ್ ಗಳ ಸುಪೀರಿಯರ್ ಗಳಾದ ಸಿ. ಮೊಂತಿ ಮತ್ತು ಸಿ. ವಿಭಾ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ ಉಪಸ್ಥಿತರಿದ್ದರು.ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ವಂದಿಸಿದರು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬೆಳ್ತಂಗಡಿ ತಾಲೂಕಿನ ಬಜಿರೆ,ನಿಟ್ಟಿಡೆ ಮತ್ತುಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ ತಾಲೂಕಿನ ಬಜಿರೆ,ನಿಟ್ಟಿಡೆ ಮತ್ತುಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು20/8/2025 ರಂದು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಇಲ್ಲಿ ಜರಗಿತು.ವೇಣೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಉದ್ಘಾಟಿಸಿದರು ಶ್ರೀ ಎಲ್ ಜೆ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆರತಿ ,ನೋಡಲ್ ಅಧಿಕಾರಿಶ್ರೀಮತಿ ಪುಷ್ಪ,ಶಿಕ್ಷಕ ಸಂಘದ ಕೋಶಾಧಿಕಾರಿ ಶ್ರೀ ರಾಜೇಶ್ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶ್ರೀಮತಿ ಮರ್ಸೆಲಿನ್ ಸ್ವಾಗತಿಸಿದರು ಸುಪ್ರೀತಾ ವಂದಿಸಿದರುಶಿಕ್ಷಕಿ ಮೀನಾ ಮೋನಿಸ್ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಡಾ.ಎಂ.ಮೋಹನ ಆಳ್ವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಅವಾರ್ಡ್. ‘ಸಾಮರಸ್ಯದ ಮನೋಭಾವನೆಯಿಂದ ಬದುಕಿಗೆ ಶಕ್ತಿ’-ಡಾ.ಎಂ.ಮೋಹನ ಆಳ್ವ

ಮಂಗಳೂರು: ಎಲ್ಲ ಜಾತಿ, ಮತ, ಧರ್ಮದವರನ್ನು ಗೌರವಿಸುವ ಸಾಮರಸ್ಯದ ಮನೋಭಾವನೆ ಬೆಳೆಸಿಕೊಂಡಿರುವುದೇ ಇಂದು ಬದುಕಿಗೆ ಶಕ್ತಿ ತುಂಬಿದೆ. ಉತ್ತಮ ಸಂಸ್ಕಾರದ ಜತೆಗೆ ಸಾಮರ್ಥ್ಯ ಅರಿತು ದುಡಿದ ಪರಿಣಾಮ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್ಮನ್ ಡಾ.ಎಂ.ಮೋಹನ ಆಳ್ವ ಹೇಳಿದರು.ನಗರದ ಎ.ಜೆ.ಗ್ರಾೃಂಡ್ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಅವರು ಮಾತನಾಡಿದರು.ಬಾಲ್ಯದಿಂದಲೇ ಕಲೆ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ. ಸಾಂಸ್ಕೃತಿಕ ಕ್ಷೇತ್ರ ಬದುಕಿಗೆ ಒಳ್ಳೆಯ ಮೌಲ್ಯಗಳನ್ನು ನೀಡಿದರೆ,ಕ್ರೀಡೆಯ ಮೇಲಿನ ಆಸಕ್ತಿ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಯಿತು ಎಂದು ಡಾ.ಆಳ್ವ ಹೇಳಿದರು.ಮುಖ್ಯ ಅತಿಥಿಯಾಗಿದ್ದ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ ‘ ಡಾ.ಎಂ.ಮೋಹನ ಆಳ್ವ ಅವರಸಾಧನೆ ಬಂಟ ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದೆ’ ಎಂದರು.ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರಿಗೆ ದಿ.ಡಾ.ಡಿ.ಕೆ.ಚೌಟ ದತ್ತಿನಿಧಿ ಪ್ರಶಸ್ತಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಇಂದಿರಾ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 24ನೇ ರ‌್ಯಾಂಕ್ ಪಡೆದ ಸಿಎ ನಿಶ್ಚಲ್ ರೈ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಸಿಎ ರಕ್ಷಾ. ಆರ್.ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷ ಕೆ.ಎಸ್.ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಚಿ ಸಿಎ ಸುದೇಶ್ ಕುಮಾರ್ ರೈ , ಮೀನಾಕ್ಷಿ ಆಳ್ವ ಉಪಸ್ಥಿತರಿದ್ದರು. ಪಳ್ಳಿ ಕಿಶನ್ ಹೆಗ್ಡೆ , ಕೆ.ಎಂ.ಶೆಟ್ಟಿ ಮತ್ತು ಜ್ಯೋತಿ ಪ್ರಸಾದ್ ಹೆಗ್ಡೆ ಸನ್ಮಾನಿತರನ್ನು ಪರಿಚಯಿಸಿದರು. ಜೈರಾಜ್.ಬಿ.ರೈ ವಂದಿಸಿದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸಂತ ಮದರ್ ಥೆರೇಸಾ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ಣ ಪ್ರಮಾಣದ ಸಭೆಯು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರ ಅಧ್ಯಕ್ಷತೆಯಲ್ಲಿ ಇಂದು ನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.70ಕ್ಕೂ ಮಿಕ್ಕಿದ ಸದಸ್ಯರು ಸ್ವಯಂಸ್ಪೂರ್ತಿಯಿಂದ ಭಾಗವಹಿಸಿರುವುದು ಕಾರ್ಯಕ್ರಮದ ಹುಮ್ಮಸ್ಸನ್ನು ಹೆಚ್ಚಿಸಿದೆ. ಕಾರ್ಯಕ್ರಮದ ವರ್ಣರಂಜಿತ ಕರಪತ್ರವನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಆಲ್ವಾರೀಸ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.ಸೆಪ್ಟೆಂಬರ್ 11ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಹಲವರು ಸಭೆಯಲ್ಲಿ ಮಾತನಾಡುವ ಮೂಲಕ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕೆಥೋಲಿಕ್ ಸಭಾದ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜಪೆ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಲಕ್ಷ್ಮಣ್, ಯೆನಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್,ಸಂತ ಅಲೋಶಿಯಸ್ ಕಾಲೇಜ್ ನ ಪ್ರಾಧ್ಯಾಪಕರಾದ ಫ್ಲೋರಾ ಕ್ಯಾಸ್ಟಲಿನೋ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್,ಮಹಿಳಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಮುಖರಾದ ಸ್ಟಾನಿ ಲೋಬೋ, ಡಾ ಕ್ರಷ್ಣಪ್ಪ ಕೊಂಚಾಡಿ, ಶೆಟ್ಟಿ, ಡಾ.ವಸಂತ ಕುಮಾರ್, ಕೆ ಕರಿಯ,ಎರಿಕ್ ಲೋಬೋ, ಫ್ಲೇವಿಕ್ರಾಸ್ತಾ ಅತ್ತಾವರ,ಮರ್ಲಿನ್ ರೇಗೋ,ಬಿ ಎನ್ ದೇವಾಡಿಗ, ಮಿಥುನ್ ರಾಜ್ ಕುತ್ತಾರ್, ಅಶೋಕನ್ ಬೋಳಾರ, ಸಂತೋಷ್ ಡಿಸೋಜ ಪಂಜಿಮೊಗರು, ಸಮರ್ಥ್ ಭಟ್, ಗ್ರೆಟ್ಟಾ ಟೀಚರ್,ಎಸ್ ಎಲ್ ಪಿಂಟೋ,ಆಲ್ವಿನ್ ಡಿಸೋಜ, ಅಸುಂತ ಡಿಸೋಜ, ವಿದ್ಯಾ ಶೆಣೈ, ಜೆ ಇಬ್ರಾಹಿಂ ಜೆಪ್ಪು,ಹೆಝಲ್ ಟೀಚರ್,ಕ್ವೀನಿ‌ ಪರ್ಸಿ ಆನಂದ್, ಪುರುಷೋತ್ತಮ ಪೂಜಾರಿ, ಫ್ಲೋರಿನ್ ಡಿಸೋಜ, ಅರುಣ್ ಡಿಸೋಜ ಶಕ್ತಿನಗರ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು,ಟೋನಿ ಪಿಂಟೊ, ಚರಣ್ ಶೆಟ್ಟಿ, ನವೀನ್ ಕೊಂಚಾಡಿ, ಫೆಲಿಕ್ಸ್ ಡಿಸೋಜ, ರಾಕೇಶ್ ಕುಂದರ್,ಓಸ್ವಾಲ್ಡ್ ಪುರ್ತಾಡೋ,ಜೇಮ್ಸ್ ಪ್ರವೀಣ್, ಕಮಲಾಕ್ಷ ಜಲ್ಲಿಗುಡ್ಡ,ರವೀಂದ್ರ ವಾಮಂಜೂರು, ಕ್ರಿಸ್ಟನ್ ಮೆನೇಜಸ್,ಶೇಖರ್ ವಾಮಂಜೂರು,ನಿತಿನ್ ಬಂಗೇರ ಯೆಯ್ಯಾಡಿ,ತಯ್ಯುಬ್ ಬೆಂಗರೆ,ರೆಹಮಾನ್ ಖಾನ್ ಕುಂಜತ್ತಬೈಲ್,ಜ್ಯೋತಿ, ಮಹಮ್ಮದ್ ಆಯೂಬ್ ಷಾ, ನೀತಾ ಡಿಸೋಜ, ಶೈಲಜಾ ರಾಜೇಶ್,ಕ್ರಷ್ಣ ಇನ್ನಾ ಮುಂತಾದವರು ಹಾಜರಿದ್ದರು*

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿರೋಡು, ಮೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.ಮಂಗಳೂರಿನ ಹಿರಿಯ ನ್ಯಾಯವಾದಿ, ಸರಕಾರಿ ಅಭಿಯೋಜಕರಾದ ಉದಯಾನಂದ ಎ.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಂದು ಕಾಲದಲ್ಲಿ ಅವಿಭಕ್ತ ಕುಟುಂಬವನ್ನು ಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ ಎಂದರು.ಹಿರಿಯರು,ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದ ಅವರು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.ಅತಿಥಿಯಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷರಾದ ಭಾಸ್ಕರ ಪೆರುವಾಯಿ ಮಾತನಾಡಿ,ಭವಿಷ್ಯದಲ್ಲಿ ಸಂಘದ ಕಟ್ಟಡ ನಿರ್ಮಾಣ ಅಥವಾ ಯಾವುದೇ ಜನಪಯೋಗಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ವಸ್ತ್ರೋದ್ಯಮಿ ರಮಾನಂದ ನಾರಾಯಣ ಬಂಗೇರ ನಾಸಿಕ್ ,ಉದ್ಯಮಿ ಮನೋಜ್ ಬಾಸಬೈಲು,ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಮೇಶ ಸಂಚಯಗಿರಿ,ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಅಧ್ಯಕ್ಷಸುಮಿತ್ ಸಾಲಿಯಾನ್ ವೇದಿಕೆಯಲ್ಲಿದ್ದರು‌.ಸಂಘದ ಅಧ್ಯಕ್ಷರಾದ ಸೋಮಯ್ಯ ಹನ್ನೆರಡೆಯವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಟಿ. ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು.72 ವರ್ಷ ತುಂಬಿದ ಸಂಘದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ.ಸಿ.ರೋಡು, ಜನಾರ್ಧನ ಸಾಲಿಯಾನ್ ವೀರಕಂಭ, ಧರ್ಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್ ಸೋರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಧೋಳ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ ಅಂಗರ ಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮ ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಆಮ್ಟಾಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಸದಸ್ಯರಾದ ದಿನಕರ ಉದ್ಯಾವರ, ರೋಕಿಂಣಿ, ಓಬಯ್ಯ ಮೂಲ್ಯ ಜತೆ. ಕಾರ್ಯದರ್ಶಿ ಶ್ರೀನಿವಾಸ ಅವರು ಸನ್ಮಾನ ಪತ್ರ ವಾಚಿಸಿದರು.ಇದೇ ವೇಳೆಆಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮಮೂಲ್ಯ ಮರ್ದೊಳಿ ಅಗಲಿದ ಸದಸ್ಯರ ಮಾಹಿತಿ ನೀಡಿದರು.ಈ ಸಂದರ್ಭ 2025-27ನೇ ಸಾಲಿಗೆ ಕಾರಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ದೇವದಾಸ್ ಮಾಸ್ಟರ್ ಕೊಡಾಣ್ ನಡೆಸಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಖಚಾಂಚಿ ಸೋಮಪ್ಪ ಬಂಗೇರ ಲೆಕ್ಕ ಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು . ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಾದ ವಿಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಆ.26ರಂದು ದೇವ್‌ದಾಸ್ ಕಾಪಿಕಾಡ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಆ.26ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಶ್ಮಿತಾ.ಎಸ್.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top