Author name: editor

ಪ್ರಾದೇಶಿಕ ವಾರ್ತೆಗಳು

ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆ

ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆ.ಮಂಗಳೂರು : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 71 ನೆಯ ಜನ್ಮದಿನವನ್ನು ನಗರದ ಸಂಘನಿಕೇತನದಲ್ಲಿ ಭಾನುವಾರ ಶ್ರದ್ಧಾ ಭಕ್ತಿಗಳಿಂದ ಹಾಗೂ ಸಾಮಾಜಿಕ ಸೇವಾ ಯೋಜನೆಗಳ ವಿತರಣೆಯೊಂದಿಗೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಮಾತಾ ಅಮೃತಾನಂದಮಯಿ ಮಠದ ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವುಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಶ್ರೀಗುರು ಪಾದುಕಾಪೂಜೆ ಮಾಡುವ ಮೂಲಕ ಚಾಲನೆ ಪಡೆಯಿತು.ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ಮಾತೃತ್ವದ ಮಹತ್ವದ ಅಂಶಗಳನ್ನು ಉಲ್ಲೇಖಿಸಿದರು. ಅಮ್ಮನ ಗರ್ಭದಲ್ಲಿ ಮಗು ಇರುವಾಗ ಮಗುವಿಗೆ ಬೇಕಾದ ಪೋಷಕಾಂಶಗಳು ಆ ತಾಯಿಯಿದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿ ಇದ್ದೇವೆ. ಮಗು ತಾಯಿಯ ಪ್ರೇಮವನ್ನು ಅನುಭವಿಸುತ್ತದೆ. ಗರ್ಭದಿಂದ ಹೊರಬಂದ ಮೇಲೆ ತಾಯಿ ಮಗುವಿನ ಮುಖಾಮುಖಿ ಆಗುತ್ತದೆ. ಅಮ್ಮನ ಕರುಣೆ, ಭಕ್ತಿಭಾವ ನಮ್ಮಲ್ಲಿ ಸದಾ ಇರಲಿ ಎಂದರು.ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ್ ಆಳ್ವ ಮಾತನಾಡಿ ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಂದು ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥ ಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆಯಾಗಿದ್ದು ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿಯನ್ನು ಬೆಳಗಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ .ಅಮ್ಮನವರ ಮಾನವೀಯ ಸೇವೆಗಳನ್ನು ಹಾಗೂ ಕರಾವಳಿ ಕರ್ನಾಟಕದಲ್ಲಿನ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ144 ಕೋಟಿ ಜನಸಂಖ್ಯೆಯ ಭಾರತವು ಅಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೆ ಇಂದು ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವವ್ಯಾಪಿಯಾಗಿದೆ. ಹಾಗಾಗಿ ಇಂದು ಸಾಧುಸಂತರ ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ.ಅಮ್ಮನವರು ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಮನುಷ್ಯರ ಮದ್ಯೆ ಇರುವ ಕಂದಕಗಳನ್ನು ದೂರಮಾಡುವ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಅಮ್ಮನವರ ಜೀವನವನ್ನು ಆಧರಿಸಿದ ಕಥಾಮೃತ ಕಾರ್ಯಕ್ರಮವನ್ನು ಗಣೇಶ್ ಎರ್ಮಾಳ್ ಪ್ರಸ್ತುತ ಪಡಿಸಿದರು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನವರಾದ ದಿಶಾ ಅಮೃತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನದ ವಿತರಣೆ ನಡೆಯಿತು.ಮೂರೂ ಜಿಲ್ಲೆಗಳ ವಿವಿಧ ಸೇವಾ ಸಮಿತಿಗಳಿಗೆ 2024-26 ಅವಧಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತುಡಾ.ಜೀವರಾಜ್ ಸೊರಕೆಯವರು ಅಮ್ಮನೊಂದಿಗಿನ ಅನುಭವಾಮೃತಗಳನ್ನು ತಿಳಿಸಿದರು.ಮಂಗಳೂರಿನ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ ಪೆರ್ಲ ಅವರು ಸ್ವಾಗತಿಸಿದರು. ಉಡುಪಿ ಸೇವಾ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಕೊಡವೂರು ವಂದಿಸಿದರು. ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು.ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ ಜಿಲ್ಲೆ ಹಾಗೂ ಮುಂಬಯಿನ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಎಲ್ಲರಿಗೂ ಅಮೃತ ಭೋಜನ,ಪ್ರಸಾದ ವಿತರಣೆ ಮಾಡಲಾಯಿತು.ಚಿತ್ರ -ವರದಿ: ಸತೀಶ್ ಕಾಪಿಕಾಡ್.

ಪ್ರಾದೇಶಿಕ ವಾರ್ತೆಗಳು

ವನಿತಾ ಪಾರ್ಕ್‌ನಲ್ಲಿ ತುಳು ಕವಿಗೋಷ್ಠಿ. ‘ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ’-ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ

ಮಂಗಳೂರು: ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿಯಾಗಿದೆ ಎಂದು ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ ಹೇಳಿದರು.ತುಳುವೆರೆ ಕಲ ಇದರ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಭಾನುವಾರ ನಗರದ ಲಾಲ್ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾಪಾರ್ಕ್‌ನಲ್ಲಿ ನಡೆದ ‘ಪಚ್ಚೆ ಸಿರಿ‘ ತುಳು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ತುಳು ಭಾಷೆಗೆ ಸಂಬಂಧಿಸಿದ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ತುಳುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿ ‘ ತುಳು ಲಿಪಿಯೇ ಭಾಷೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ತುಳು ಲಿಪಿ ಕಲಿಕೆ ಜತೆಗೆ ತುಳುವಿನ ಮೂಲ ಶಬ್ದಗಳನ್ನೇ ಬಳಸುವ ಮೂಲಕ ಭಾಷೆಯ ಸೊಗಡು ಉಳಿಸಲು ಪ್ರಯತ್ನಿಸಬೇಕು ಎಂದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್,ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ,ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಬಿ. ಎನ್.ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

‘ರಕ್ತದಾನ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ’ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಆಶಯ

ಮಂಗಳೂರು : ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ರಕ್ತದಾನ ಅತ್ಯಂತ ಪವಿತ್ರಕಾರ್ಯವಾಗಿದೆ. ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶವಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ಶ್ರೀ ರಾಘವೇಂದ್ರ ಮಿತ್ರ ಮಂಡಳಿ ನೆಲ್ಲಿಕಾಯಿ ಮಠ ಮತ್ತು ಬಜಿಲಕೇರಿ ಫ್ರೆಂಡ್ಸ್ ಬಜಿಲಕೇರಿ ಮಂಗಳೂರುವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಹಾಗೂ ಫಾದರ್ ಮುಲ್ಲರ್ ಕಾಲೇಜು ಹಾಗೂ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಗರದ ಸೆಂಟ್ರಲ್ ವಾರ್ಡ್‌ನ ಬಸ್ತಿ ಗಾರ್ಡನ್ ಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.ಶಿಬಿರಕ್ಕೆ ಆಗಮಿಸಿದ ಡಿ.ವೇದವ್ಯಾಸ್ ಕಾಮತ್ ಅವರು ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನದ ಮೂಲಕ ಜನತೆಗೆ ನೆರವಾಗುತ್ತಿರುವ ಶ್ರೀ ರಾಘವೇಂದ್ರ ಮಿತ್ರ ಮಂಡಳಿ ಮತ್ತು ಬಜಿಲಕೇರಿ ಫ್ರೆಂಡ್ಸ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುನೈನಾ ಭಟ್ , ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಫಾದರ್ ಮುಲ್ಲರ್ ಆಸ್ಪತ್ರೆ ಆರೋಗ್ಯ ಶಿಬಿರದ ಸಂಯೋಜಕರಾದ ರೈನಾ, ಕೆಲ್ವಿನ್ ಪೀಟರ್ ಪಾಸ್, ರೆಡ್ ಕ್ರಾಸ್ ರಕ್ತನಿಧಿ ಸಂಯೋಜಕ ಪ್ರವೀಣ್ ಕುಮಾರ್, ಬಸ್ತಿ ಗಾರ್ಡನ್ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ರಾವ್, ಶ್ರೀರಾಘವೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಕಾಂತ ನಾಯಕ್, ಬಜಿಲಕೇರಿ ಫ್ರೆಂಡ್ಸ ಅಧ್ಯಕ್ಷ ಹರೀಶ್.ಎಚ್. ಉಪಸ್ಥಿತರಿದ್ದರು. ಅರ್ಪಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಫೋಟೋ : ಕ್ಯಾಂಪ್

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್ 2ರಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ “ಗಲಾಟೆ ಸಂಸಾರ” ಧಾರಾವಾಹಿಯ ಶೀರ್ಷಿಕೆ ಹಾಡು ಬಿಡುಗಡೆ

ಮೂಲ್ಕಿ : ಶ್ರೀಗುರುನಮನಸಂತೃಪ್ತಿ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ ಬಹು ನಿರೀಕ್ಷಿತ “ಗಲಾಟೆ ಸಂಸಾರ” ಕನ್ನಡ ಧಾರಾವಾಹಿಯ ಶೀರ್ಷಿಕೆ ಹಾಡನ್ನು ಅಕ್ಟೋಬರ್ 2ರಂದು ಸಂಜೆ 4ಕ್ಕೆ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅನಾವರಣಗೊಳ್ಳಲಿದೆ.ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಈ ಧಾರಾವಾಹಿ ನಿರ್ಮಾಣವಾಗಿದ್ದು ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿರುವ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ವಿಶೇಷ ಸಹಕಾರದಲ್ಲಿ “ಗಲಾಟೆ ಸಂಸಾರ”ದ ಶೀರ್ಷಿಕೆ ಹಾಡು ಬಿಡುಗಡೆಗೊಳ್ಳಲಿದೆ.ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ ಬೆರ್ನಾಡ್ ಅವರು ಶೀರ್ಷಿಕೆ ಹಾಡನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಗುರುರಾಜ್ ಎಸ್. ಪೂಜಾರಿ ಅವರು ಈ ಸಂದರ್ಭದಲ್ಲಿ ಎರಡು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಅರುಣ್‌ಕುಮಾರ್, ಮಂಗಳೂರಿನ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಲ್ಯಾನ್ಸಿ ಕುವೆಲ್ಲೋ, ಪಡುಪಣಂಬೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮೋಹನ್‌ದಾಸ್, ಮಂಗಳೂರಿನ ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಅವರು ಭಾಗವಹಿಸಲಿದ್ದಾರೆ ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಶ್ರೀಗುರುನಮನಸಂತೃಪ್ತಿ ಸಂಸ್ಥೆಯ ಪಾಲುದಾರ ನರೇಂದ್ರ ಕೆರೆಕಾಡು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.“ಗಲಾಟೆ ಸಂಸಾರ” ಕನ್ನಡ ಧಾರಾವಾಹಿ :ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕಗುರುಗಳು, ಜ್ಯೋತಿಷ್ಯರು ಆಗಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಆಶೀರ್ವಾದದಿಂದ ನಿರ್ಮಾಣವಾಗಿರುವ “ಗಲಾಟೆ ಸಂಸಾರ” ಧಾರಾವಾಹಿಯನ್ನು ಮೂಲ್ಕಿಯ ನಮನ ಕಮ್ಯುನಿಕೇಶನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರಧಾನ ಪ್ರಾಯೋಜಕರಾಗಿ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಕೈ ಜೋಡಿಸಿದೆ. ಕಥೆ-ಸಂಭಾಷಣೆಯನ್ನು ನರೇಂದ್ರ ಕೆರೆಕಾಡು ರಚಿಸಿದ್ದು, ಚಿತ್ರಕಥೆ, ಸಾಹಿತ್ಯ, ಸಂಕಲನದೊಂದಿಗೆ ದೇವಿಪ್ರಕಾಶ್ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕರಾಗಿ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಸಂಗೀತವನ್ನು ಗಗನ್ ಸುವರ್ಣ ಮೂಲ್ಕಿ, ಗಾಯಕರಾಗಿ ಜಿ.ಎಸ್.ದಿನೇಶ್ ಶೀರ್ಷಿಕೆ ಹಾಡನ್ನು ಹಾಡಿದ್ದಾರೆ. ಪಿಆರ್‌ಒ ಆಗಿ ಸೋನು ಕ್ರಿಯೇಶನ್ಸ್‌ನ ರೋಶನ್ ನೆಲ್ಲಿಗುಡ್ಡೆ, ಪ್ರಚಾರದಲ್ಲಿ ಚಿಗುರು ಸಂಸ್ಥೆಯ ರಾಕೇಶ್ ಎಕ್ಕಾರು, ವಿನ್ಯಾಸವನ್ನು ಮೂಲ್ಕಿಯ ಇಂಪ್ರೇಷನ್ ಸಂಸ್ಥೆ ನಿರ್ವಹಿಸಿದೆ. ಕಲಾವಿದರಾಗಿ ಸುರೇಶ್ ವರ್ಕಾಡಿ, ದೇವಿಪ್ರಕಾಶ್, ನರೇಂದ್ರ ಕೆರೆಕಾಡು, ಹರೀಶ್ ಪಿ. ಕೋಟ್ಯಾನ್, ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಪೂರ್ಣಿಮಾ ಸುರತ್ಕಲ್, ಕೃತಿಕಾ ಉಲ್ಲಂಜೆ, ನಾಗರಾಜ್ ಪೂಜಾರಿ ಬಪ್ಪನಾಡು, ಧರ್ಮಾನಂದ ಶೆಟ್ಟಿಗಾರ್, ವಿಲ್‌ಫ್ರೇಡ್ ಕೊಲ್ಲೂರು ಮತ್ತಿತರರು ಅಭಿನಯಿಸಿದ್ದಾರೆ.“ನಮನ ಕಾಮಿಡಿ” ಛಾನೆಲ್‌ನ ಮೂಲಕ ಈ ಧಾರಾವಾಹಿ ಅತೀ ಶೀಘ್ರದಲ್ಲಿಯೇ ಪ್ರಸಾರಗೊಳ್ಳಲಿದೆ ಎಂದು ಶ್ರೀಗುರುನಮನಸಂತೃಪ್ತಿ ಸಂಸ್ಥೆಯು ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ

ಮಂಗಳೂರು, ಸೆಪ್ಟೆಂಬರ್ 28,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ ಹಭಾಗಿತ್ವ ದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ ಅಕ್ಟೋಬರ್ ಒಂದರಂದು ಬೆಳಿಗ್ಗೆ 10 ಗಂಟೆಗೆ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಆನಂದ್ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡಲಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬ್ರಾಯನ್ ಪಿಂಟೋ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾ0ಶುಪಾಲ ಡಾ ಜಗದೀಶ ಬಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ದಕ್ಷಿಣಕ್ಕೆ ಮೀಸಲಿರಿಸಿದ ಕುಡ್ಸೆoಪುನ 78 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ವರ್ಗಾಯಿಸಿದ ಕಾಂಗ್ರೆಸ್ ಸರಕಾರ. ಪರಿಣಾಮ, ಪಾಲಿಕೆ ವ್ಯಾಪ್ತಿಯ 38 ವಾರ್ಡ್ ಗಳ ರಸ್ತೆ, ಡ್ರೈನೇಜ್ ಕಾಮಗಾರಿ ಅಪೂರ್ಣ. ಜೆಪ್ಪು ಕುಡಪಾಡಿ ರಸ್ತೆ ಸ್ಥಿತಿ ಶೋಚನೀಯ. ಇದನ್ನು ಸದನದಲ್ಲಿ ಪ್ರಶ್ನಿಸಿ ನ್ಯಾಯ ದೊರಕಿಸಿ, ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದ ಶಾಸಕ ವೇದವ್ಯಾಸ ಕಾಮತ್

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ. ಬಿ. ಎನ್.ಮಂಗಳೂರು :ಪಾಲಿಕೆಯ 59 ನೇ ಜೆಪ್ಪು ವಾರ್ಡಿನ ಜೆಪ್ಪು ಕುಡುಪಾಡಿಯಲ್ಲಿ ಕಳೆದ ಒಂದು ತಿಂಗಳಿಂದ ಡ್ರೈನೇಜ್ ಕೆಲಸ ನಡೆಯುತ್ತಿದ್ದೂ, ಇಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ mp mlas ನ್ಯೂಸ್ ಶಾಸಕ ವೇದವ್ಯಾಸ ಕಾಮತ್ ರಲ್ಲಿ, ಜೆಪ್ಪು ಕುಡಪಾಡಿ ರಸ್ತೆ ಯಾವಾಗ ರಿಪೇರಿಯಾಗಬಹುದೆಂದು ಕೇಳಿದಾಗ, ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಕೇವಲ ಜೆಪ್ಪು ಕುಡುಪಾಡಿ ಮಾತ್ರವಲ್ಲ, ಮಂಗಳೂರು ದಕ್ಷಿಣದ 38 ವಾರ್ಡ್ ಗಳ ರಸ್ತೆ ದುರಸ್ತಿ, ಡ್ರೈನೇಜ್ ಕಾಮಗಾರಿಗಳಿಗೆ ಕುಡ್ಸೆoಪ್ ನಲ್ಲಿ ಮೀಸಲಿರಿಸಿದ 78 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೇರೆಡೆಗೆ ಡೈವರ್ಟ್ (ವರ್ಗಾಯಿಸಿದೆ)ಮಾಡಿದೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಿ ಕಾಂಗ್ರೆಸ್ ಸರಕಾರ ಇಲ್ಲಿನ ಜನರಿಗೆ ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸಿ,ನ್ಯಾಯ ದೊರಕಿಸಿ ಕೊಡುವೆಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಈ ಬಗ್ಗೆ ಗಮನ ಹರಿಸಬೇಕಾಗಿದೆ. ತನ್ನ ಸರಕಾರ ಮಾಡಿದ ಎಡವಟ್ಟಿಗೆ ಸಮಸ್ಯೆ ತಕ್ಷಣ ಸರಿಪಡಿಸಿ ಮಂಗಳೂರು ದಕ್ಷಿಣಕ್ಕೆ ಸಲ್ಲಬೇಕಾದ 78 ಕೋಟಿ ರೂಪಾಯಿ ಹಣವನ್ನು ವಾಪಾಸ್ ಮಾಡುವಲ್ಲಿ ಸೂಕ್ತ ಕ್ರಮ ಜರುಗಿಸಬೇಕಾದದ್ದು ಅವರ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದಲ್ಲಿ ಅವರು ಉಸ್ತುವಾರಿ ಸಚಿವರಾಗಿದ್ದು ಏನು ಪ್ರಯೋಜನ? ಜನ ಕಾಂಗ್ರೆಸ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನರಿಗೆ 5 ಗ್ಯಾರಂಟಿ ಕೊಟ್ಟು ಅದನ್ನು ಅರ್ಧದಲ್ಲೇ ನಿಲ್ಲಿಸುವ ಹಂತ ತಲುಪಿದ ಕಾಂಗ್ರೆಸ್ ಸರಕಾರ ಅಂಗವಿಕಲರ ಮಾಸಾಶನವನ್ನು ಕಸಿದು ಕೊಂಡಿದೆ. ಇದೀಗ ಮಂಗಳೂರು ದಕ್ಷಿಣಕ್ಕೆ ಮೀಸಲಿರಿಸಿದ 78 ಕೋಟಿ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿ ಬಹುದೊಡ್ಡ ಅನ್ಯಾಯವೆಸಗಿದೆ. ಇಲ್ಲಿನ ಜನ ಕಾಂಗ್ರೆಸ್ ಗೆ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಾವುಟಗುಡ್ಡದಿಂದ ಮಂಗಳಾದೇವಿಗೆ 103 ರೂಪಾಯಿ ಆಟೋ ಚಾರ್ಜ್. ನಗರದಲ್ಲಿ ಹೀಗೂ ಉಂಟೇ?

ವರದಿ : ಡಾ. ಅಶೋಕ್ ಶೆಟ್ಟಿ. ಬಿ.ಎನ್.ಮಂಗಳೂರು: ಮಂಗಳೂರಿನ ಮಹಿಳಾ ಪ್ರಯಾಣಿಕರೊಬ್ಬರು ಬಾವುಟಗುಡ್ಡದ ಬಳಿ ನಿಂತು ಮಂಗಳಾದೇವಿಗೆ ಡ್ರಾಪ್ ಮಾಡಿಯೆಂದು ಎಲೆಕ್ಟ್ರಿಕ್ ಆಟೋಚಾಲಕಿಯೊಬ್ಬರಲ್ಲಿ ಹೇಳಿದಾಗ ಆ ಚಾಲಕಿ ಕಂಕನಾಡಿ -ಮಾರ್ನಮಿಕಟ್ಟೆ ಮಾರ್ಗವಾಗಿ ಆ ಮಹಿಳಾ ಪ್ರಯಾಣಿಕರನ್ನು ತನ್ನ ಆಟೋದಲ್ಲಿ ತಲುಪಿಸಿದರು. ಆಗ ಮೀಟರ್ ಚಾರ್ಜ್ ಬರೋಬ್ಬರಿ 103 ರೂಪಾಯಿ ಆಗಿತ್ತು. ಇಷ್ಟಕ್ಕೂ ಆ ಮಹಿಳಾ ಆಟೋ ಚಾಲಕಿಗೆ ಬಾವುಟಗುಡ್ಡೆಯಿಂದ ಜ್ಯೋತಿ -ಆರ್ ಟಿ ಓ ಮಾರ್ಗವಾಗಿ ಮಂಗಳಾದೇವಿಗೆ ಹೋಗಲು ಗೊತ್ತಿಲ್ಲವೇ?ಹಾಗೆ ಹೋಗಿದ್ದರೆ ಮೀಟರ್ ಚಾರ್ಜ್ 55 ರೂಪಾಯಿ ಆಗುತ್ತಿತ್ತು. ಪಾಪ! ಬಡಪಾಯಿ ಮಹಿಳಾ ಪ್ರಯಾಣಿಕೆ ದುಬಾರಿ ಆಟೋ ಚಾರ್ಜ್ ಕೊಟ್ಟು ಮಂಗಳಾದೇವಿ ತಲುಪಬೇಕಾದ ಪರಿಸ್ಥಿತಿ ಬಂದಿದೆ. ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಬಂದ ಮೇಲೆ ಹೊರಗಿನ ಜಿಲ್ಲೆಯವರು ರಾಶಿ ರಾಶಿಯಾಗಿ ಮಂಗಳೂರಿಗೆ ವಕ್ಕರಿಸಿದ್ದು,ಅವರಿಗೆ ಸರಿಯಾಗಿ ಮಂಗಳೂರು ಸಿಟಿಯ ಮಾರ್ಗಗಳ ಅನುಭವವೇ ಇಲ್ಲ. ಇಂತಹವರು ಆಟೋ ಓಡಿಸಿದರೆ ಇದೇ ಪರಿಸ್ಥಿತಿ ಬರುವುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಇಂತಹ ಅನನುಭವಿ ಚಾಲಕರ ಪಟ್ಟಿ ತಯಾರಿಸಿ ಸೂಕ್ತ ಕ್ರಮ ಕೈ ಗೊಳ್ಳಿ. ಇಲ್ಲದಿದ್ದಲ್ಲಿ ಮಂಗಳೂರಿನ ಬಡಪಾಯಿ ಪ್ರಯಾಣಿಕರ ಪರಿಸ್ಥಿತಿ ಅಧೋಗತಿಯಾಗುವ ಅಪಾಯವಿದೆ.

ಕರ್ನಾಟಕ ವಾರ್ತೆಗಳು

ಮುಡಾ ಕೇಸ್‌ನಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿರುವ ಸಿಎಂ ನಡೆ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು: ಕ್ಷಣಕ್ಷಣಕ್ಕೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಕುತೂಹಲ ಕೆರಳಿಸುತ್ತಿದೆ. ತನ್ನ ವಿರುದ್ಧ ಮುಡಾ ಹಗರಣದ ತನಿಖೆಯ ಕುಣಿಕೆಯಿದ್ದರೂ ಸಿದ್ದರಾಮಯ್ಯನವರು ಸುತರಾಂ ರಾಜೀನಾಮೆ ನೀಡುವುದಿಲ್ಲ, ತನಿಖೆ ಎದುರಿಸುವೆ ಎನ್ನುತ್ತಿದ್ದಾರೆ.ಸಿದ್ಧರಾಮಯ್ಯ ಅವರು ತನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ರಹಿತ ರಾಜಕಾರಣಿಯೆಂದು ಜನಜನಿತರಾದವರು. ಆದರೆ, 4೦ ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊತ್ತ ತನಿಖೆ ಎದುರಾಗಿದೆ.ಈ ತನಿಖೆಯನ್ನು ಲೋಕಾಯುಕ್ತ ನಡೆಸಬೇಕಾಗಿದ್ದು, ಅದು ಕರ್ನಾಟಕ ಸರಕಾರದ ಅಧೀನದಲ್ಲಿದೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡದೆ ಸಿಎಂ ಆಗಿಯೇ ತನಿಖೆ ಎದುರಿಸಿದರೆ ಇದು ಪಾರದರ್ಶಕವಾಗಿರುವುದಿಲ್ಲವೆಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಮತ್ತೆ ಹೈಕೋರ್ಟು ಮೆಟ್ಟಿಲೇರಿದ್ದು, ಇದನ್ನು ಸಿಬಿಐಗೆ ನೀಡುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ. ಅಬಕಾರಿ ಹಗರಣದಲ್ಲಿ ಜೈಲು ಸೇರಿ ಬಿಡುಗಡೆಯಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅವತ್ತು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಿದ್ದರಾಮಯ್ಯನವರ ಮೇಲೆ ಎಫ್‌ಐಆರ್ ದಾಖಲಾದರೂ ಕರ್ನಾಟಕ ಪೊಲೀಸರು ಬಂಧಿಸಲಾರರು.ಯಾಕೆಂದರೆ, ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಸರಕಾರದ ಕೈಯಲ್ಲಿದೆ. ಆದರೆ, ಇಲ್ಲಿ ಪೊಲೀಸ್ ವ್ಯವಸ್ಥೆ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿಯೇ ಮುಂದುವರಿದರೆ ಕರ್ನಾಟಕ ಪೊಲೀಸರು ಅವರನ್ನು ಹೇಗೇ ಬಂಧಿಸಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.ಪ್ರಶ್ನೆಗಳು ಹಲವು ಇರಬಹುದು. ಆದರೆ, ಉತ್ತರ ಒಂದೇ, ಸಿದ್ಧರಾಮಯ್ಯನವರು ಮೂಡಾ ಕೇಸ್‌ನಿಂದ ಹೇಗೇ ನಿರಪರಾಧಿಯಾಗಿ ಹೊರ ಬರುತ್ತಾರೆಂಬ ಜನರ ಸಹಜ ಕುತೂಹಲದ ಕಾತರ. ಏನಿದ್ದರೂ, ಸಿದ್ಧರಾಮಯ್ಯನವರು ಪ್ರಸ್ತುತ ನಡೆ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಅದು ಸಿದ್ಧರಾಮಯ್ಯನವರು ಊಹಿಸಿದ್ದಷ್ಟು ಸುಲಭವಲ್ಲ ಎಂಬುವುದು ಸ್ಪಷ್ಟ ಸಂಗತಿ. ಒಂದು ವೇಳೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಿಪಕ್ಷಗಳ ಕೈ ಮೇಲಾಗುತ್ತದೆ. ಮುಂದೆ ಬರಲಿರುವ ಹೊರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಹೈಕಮಾಂಡ್ ನ ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ತನಿಖೆಯನ್ನು ಎದುರಿಸುತ್ತೇನೆ ಎನ್ನುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವೇ? ಯಾವುದಕ್ಕೂ ಸ್ವಲ್ಪ ಕಾದು ನೋಡೋಣ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಅಂತೂ ಇಂತೂ ಸಿಎಂ ಕುರ್ಚಿ ಅಲುಗಾಡುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

ಪ್ರಾದೇಶಿಕ ವಾರ್ತೆಗಳು

DMart -22 anniversary gift ಹೆಸರಲ್ಲಿ ಫೇಕ್ ಲಿಂಕ್.

ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: DMart -22 anniversary gift ಹೆಸರಲ್ಲಿ ಲಿಂಕ್ ವೊಂದು ನಿಮ್ಮ ಮೊಬೈಲ್ ಗೆ ಬರುತ್ತದೆ. ಅದನ್ನು ಒತ್ತಿದರೆ 4 ಆಯ್ಕೆ ಬಟನ್ ಗಳಿದ್ದು,ಅವುಗಳಲ್ಲಿ ಒಂದರಲ್ಲಿ 25 ಸಾವಿರ ರೂಪಾಯಿ ಗೆದ್ದಿದ್ದೀರಿ. ಈ ಲಿಂಕ್ ನ್ನು 20 ಜನರಿಗೆ ಫಾರ್ವರ್ಡ್ ಮಾಡಿ ಇಲ್ಲವೇ 5 ಗ್ರೂಪ್ ಗಳಿಗೆ ಕಳುಹಿಸಿವೆಂಬ ಸಂದೇಶವಿರುತ್ತದೆ. ನೀವು ಆ ರೀತಿ ಫಾರ್ವರ್ಡ್ ಮಾಡಿದರೂ ನಿಮಗೆ ಹಣ ಬರುವುದಿಲ್ಲ. ಆದರೆ, ಕೆಲವರು ತಮಗೆ ಹಣ ಬಂದಿದೆಂದು ಹೇಳುವ ಕಾಮೆಂಟ್ಸ್ ಕೂಡಾ ಈ ಲಿಂಕ್ ನಲ್ಲಿರುತ್ತದೆ.ಇದೆಲ್ಲ ಅಪ್ಪಟ ಸುಳ್ಳಾಗಿದ್ದು, ಇದು ನಕಲಿ ಲಿಂಕ್ ಆಗಿದೆ. ಕಳೆದ ಒಂದು ವಾರದಿಂದ ಇದು ಎಲ್ಲೆಡೆ ವೈರಲ್ ಆಗುತ್ತಿದ್ದೂ ಹಣ ಸಿಗಬಹುದೆನ್ನುವ ಆಸೆಯಿಂದ ಎಲ್ಲರೂ ಈ ಲಿಂಕ್ ನ್ನು ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ, ಇದು ನಕಲಿಯಾಗಿದ್ದು, ಈ ಬಗ್ಗೆ DMart ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತು ನಿಜಾಂಶ ಬಹಿರಂಗ ಪಡಿಸಬೇಕಾಗಿದೆ. ಇಲ್ಲದಿದ್ದಲ್ಲಿ, DMart ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ.

ಪ್ರಾದೇಶಿಕ ವಾರ್ತೆಗಳು

ಮುಂಬೈ ವಾಲ್ಕೆಶ್ವರ ಶ್ರೀ ಕಾಶೀ ಮಠದಲ್ಲಿ ಸೆಪ್ಟೆಂಬರ್ 27 ರಂದು ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ

ಮಂಗಳೂರು, ಸೆಪ್ಟೆಂಬರ್ 25,ಕಾಶೀ ಮಠಾಧಿಪತಿ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಚತುರ್ಮಾಸ ವೃತದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಸೆಪ್ಟೆಂಬರ್ 27 ರಂದು ಮುಂಬೈ ಯ ವಾಲ್ಕೆಶ್ವರ ಶ್ರೀ ಕಾಶೀ ಮಠ ದಲ್ಲಿ ಸಂಜೆ 7 ಗಂಟೆ ಯಿಂದ 9 ಗಂಟೆ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Scroll to Top