DMart -22 anniversary gift ಹೆಸರಲ್ಲಿ ಫೇಕ್ ಲಿಂಕ್.

95.5K Views 25 Sep 2024

ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: DMart -22 anniversary gift ಹೆಸರಲ್ಲಿ ಲಿಂಕ್ ವೊಂದು ನಿಮ್ಮ ಮೊಬೈಲ್ ಗೆ ಬರುತ್ತದೆ. ಅದನ್ನು ಒತ್ತಿದರೆ 4 ಆಯ್ಕೆ ಬಟನ್ ಗಳಿದ್ದು,ಅವುಗಳಲ್ಲಿ ಒಂದರಲ್ಲಿ 25 ಸಾವಿರ ರೂಪಾಯಿ ಗೆದ್ದಿದ್ದೀರಿ. ಈ ಲಿಂಕ್ ನ್ನು 20 ಜನರಿಗೆ ಫಾರ್ವರ್ಡ್ ಮಾಡಿ ಇಲ್ಲವೇ 5 ಗ್ರೂಪ್ ಗಳಿಗೆ ಕಳುಹಿಸಿವೆಂಬ ಸಂದೇಶವಿರುತ್ತದೆ. ನೀವು ಆ ರೀತಿ ಫಾರ್ವರ್ಡ್ ಮಾಡಿದರೂ ನಿಮಗೆ ಹಣ ಬರುವುದಿಲ್ಲ. ಆದರೆ, ಕೆಲವರು ತಮಗೆ ಹಣ ಬಂದಿದೆಂದು ಹೇಳುವ ಕಾಮೆಂಟ್ಸ್ ಕೂಡಾ ಈ ಲಿಂಕ್ ನಲ್ಲಿರುತ್ತದೆ.ಇದೆಲ್ಲ ಅಪ್ಪಟ ಸುಳ್ಳಾಗಿದ್ದು, ಇದು ನಕಲಿ ಲಿಂಕ್ ಆಗಿದೆ. ಕಳೆದ ಒಂದು ವಾರದಿಂದ ಇದು ಎಲ್ಲೆಡೆ ವೈರಲ್ ಆಗುತ್ತಿದ್ದೂ ಹಣ ಸಿಗಬಹುದೆನ್ನುವ ಆಸೆಯಿಂದ ಎಲ್ಲರೂ ಈ ಲಿಂಕ್ ನ್ನು ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ, ಇದು ನಕಲಿಯಾಗಿದ್ದು, ಈ ಬಗ್ಗೆ DMart ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತು ನಿಜಾಂಶ ಬಹಿರಂಗ ಪಡಿಸಬೇಕಾಗಿದೆ. ಇಲ್ಲದಿದ್ದಲ್ಲಿ, DMart ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ.

Read More News

Scroll to Top