ವಿವೇಕಾನಂದ ಜಯಂತಿಯಂದು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದರ್ಶನ್ ಸೋಶಿಯಲ್ ಕಲ್ಚರಲ್ ಅಕಾಡೆಮಿ (ರಿ) ಬೆಂಗಳೂರು ಇವರ 98ನೇ ಸಾಂಸ್ಕೃತಿಕ ಕಾರ್ಯಕ್ರಮ ಯುವ ಸಂಭ್ರಮ ದಿನಾಂಕ 12 -01 – 25 ರಂದು ಬೆಂಗಳೂರಿನ ಸಾಂಸ್ಕೃತಿಕ ಕಲಾಗ್ರಾಮ ಮಲ್ಲತ್ತಳ್ಳಿ ಇಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಶ್ರೀಯುತ ಎನ್ ನಾಗೇಂದ್ರ ಇವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ
ಪ್ರಧಾನ ಮಾಡಲಾಯಿತು.


ಇವರು ಸ್ವಂತ ರಚಿಸಿ ಹಾಡಿರುವ ಕೊರೋನಾ Song ಹಾಗೂDRUG Awareness song ಗಳು ಯುವ ಜನತೆಯಲ್ಲಿ ಜನ ಜಾಗೃತಿ ಮೂ ಡಿಸಿದ್ದು ಇವೆರಡೂ ವಿಷಯಗಳು national Issue ಗಳಾಗಿರುತ್ತವೆ.ಈ ಜಾಗೃತಿ ಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.


ಈ ಸಂದರ್ಭದಲ್ಲಿ ಪ್ರಖ್ಯಾತ ಹಿರಿಯ ಚಲನಚಿತ್ರ ನಟರಾದ ಶ್ರೀ ಶ್ರೀನಿವಾಸ ಮೂತಿ೯,ನಟ ನವೀನ್ ಶಂಕರ್,ನಟ ಗಣೇಶ್ ರಾವ್ ಕೇಸರ್ ಕರ್, ದರ್ಶನ್ ಅಕಾಡೆಮಿಯ ಅಧ್ಯಕ್ಷ ದರ್ಶನ್,ಕಿರುತೆರೆಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ,ಕರ್ನಾಟಕ ರಾಜ್ಯ ಸಹಕಾರ ಮಂಡಳದ ಕಾರ್ಯದರ್ಶಿಯವರಾದ ಲಕ್ಷ್ಮಿಪತಯ್ಯ ಹಾಗೂ ಇತರರು ಉಪಸ್ಥಿತರಿದ್ದರು



















































































































































































