ಪ್ರತಿ ಕ್ಷೇತ್ರದಲ್ಲೂ ಕರಾವಳಿಗರ ಸಾಧನೆ: ಧರಣಿದೇವಿ. ದಕ್ಷಿಣ ಕನ್ನಡಿಗರ ಸಂಘದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

105.9K Views 23 Dec 2024

ಬೆಂಗಳೂರು: ಕರಾವಳಿಗರಿಗೆ ತಮ್ಮ ಜೀವನ ಶೈಲಿಯನ್ನು ಪ್ರಪಂಚದ ಎಲ್ಲಾ ಭಾಗಕ್ಕೂ ಕೊಂಡೊಯ್ಯುವ ಶಕ್ತಿ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.


ನಯನ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದಿಂದ ಭಾನುವಾರ ನಡೆದ ‘ಕರಾವಳಿ ರತ್ನ’ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.
ಕರಾವಳಿಗರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ, ಪ್ರತಿ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಾರೆ. ಸಮಾಜದ ಸಾಮರಸ್ಯಕ್ಕೆ ಹಾಗೂ ಒಗ್ಗಟ್ಟಿಗೆ ಸದಾ ಬೆಂಬಲವಾಗಿ ನಿಂತು, ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ಕರಾವಳಿಯು ಕೇವಲ ಸಮೃದ್ಧವಾದ ಪ್ರದೇಶ ಮಾತ್ರವಲ್ಲ, ಅಲ್ಲಿನವರ ಮನಸ್ಸು ಪರಿಶುದ್ಧವಾಗಿದೆ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.


ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಮಾತನಾಡಿ, ಸಮಾಜ ಮುಖಿ ಕಾರ್ಯಗಳನ್ನು ಅಭಿನಂದಿಸುವ ಜವಾಬ್ದಾರಿ ಸಮಾಜದ್ದು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಸಂಘವು ಕಾರ್ಯೋ ನುಖವಾಗಿದೆ. ಸಮಾಜದಲ್ಲಿನ ಉತ್ತಮ ಕಾರ್ಯವನ್ನು ಅಭಿನಂದಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.


ಕರಾವಳಿ ರತ್ನ ಪ್ರಶಸ್ತಿ: 2023-24ನೇ ಸಾಲಿನ ‘ಕರಾವಳಿ ರತ್ನ’ ಪ್ರಶಸ್ತಿಯನ್ನು ಟೀಕೇಸ್ ಗ್ರೂಪ್‌ನ ಸ್ಥಾಪಕ ಉಮರ್ ಟೀಕೇ, ವರ್ಲ್ಡ್ ಫೆಡರೇಷನ ಆಫ್ ಬಂಟ್ಸ್ ಅಸೋಸಿಯೇಷನ್‌ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕ್ಯಾಂಟರ್ಬೆರಿ ಗ್ರೂಪ್‌ನ ಅಧ್ಯಕ್ಷ ಲಿಯೋ ಕ್ವಾಡೋಸ್ ಹಾಗೂ ಆದಾಯ ತೆರಿಗೆಯ ಅಧಿಕಾರಿ ನಿವ್ಯಾ ಶೆಟ್ಟಿ ಅವರಿಗೆ බදයි ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ 13 ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡ ಲಾಯಿತು. ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top