.ಮಂಗಳೂರು -ಮನಸ್ಸು,ನಮ್ಮ ಶರೀರ ನಮ್ಮ ಅಧ್ಯಾತಿಕತೆ ಅದರ ಜೊತೆಗೆ ಸ೦ಸ್ಕಾರ , ಸಮಾಜ ಸೇವೆ ಇ೦ದಿನ ಜೀವನಕ್ಕೆಅನಿವಾರ್ಯ, ಯೋಗದಿ೦ದ ರೋಗ ಮುಕ್ತ ಜೀವನವನ್ನು ನಾವು ಪಡೆಯಬೇಕು ಎ೦ದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ )ಕರ್ನಾಟಕ, ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇ ಶನ್ (ರಿ)ಮಂಗಳೂರು ಮಹಾನಗರ ಇದರ ವತಿಯಿಂದ ಪಾಲೇಮಾರ್ ಕನ್ಫವೆನ್ಷನಲ್ ಹಾಲ್ ನ ಆವರಣ,ಮೇರಿಹಿಲ್ ಇಲ್ಲಿ ನಡೆದ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆಯುನ್ನು ಉದ್ಯಮಿ ಹಾಗೂ ಸಮಾಜ ಸೇವಾಕರ್ತರಾದ ಪ್ರಶಾಂತ ಪೈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮೂಲಕ ಉದ್ಘಾಟನೆ ಮಾಡಿದರು.
ಯೋಗದ ಮಹತ್ವವನ್ನು ತಿಳಿದುಕೊ೦ಡು ಹಾಗೂ ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡು ಆರೋಗ್ಯಕರ ಜೀವನವನ್ನು ಅನುಭವಿಸಬೇಕು ಎ೦ದು ಮುಖ್ಯ ಆತಿಥಿ ಮಾಜಿ ಮೇಯರ್ ಜಯಾನಂದ ಅಂಚನ್ ರವರು ಮಾತನಾಡಿದರು..


ಯೋಗಭ್ಯಾಸ ಮಾಡುವುದರಿ೦ದ ಸಾವಧನತೆ ಮತ್ತು ಭಾವನತ್ಮಕ ನಿಯ೦ತ್ರಣವನ್ನು ಬೆಳೆಸುವ ಮೂಲಕ ಮಾನಸಿಕ ಮತ್ತು ಅ೦ತರಿಕ ಶಾ೦ತಿ ಮತ್ತು ವಿಶ್ರಾ೦ತಿಯ ಭಾವನೆಯನ್ನು ಉತ್ತೇಜಿಸುತ್ತದೆ ಎ೦ದು ಕುಮಾರಿ ಆರಾಧ್ಯ ಅವರು ಯೋಗ ದಿನದ ಮಹತ್ವದ ಬಗ್ಗೆ ಬೌದ್ಧಿಕ ನೀಡಿದರು.
ಪ್ರಾರಂಭದಲ್ಲಿ ಭಜನೆ ಯನ್ನು ವೀರಾಂಜನೇಯ ಶಾಖೆ ಅಡ್ಯಾರ್ ಇಲ್ಲಿನ ಯೋಗ ಬಂಧುಗಳು ನಡೆಸಿ ಕೊಟ್ಟರು.
ಅಮೃತ ವಚನ ವನ್ನು ಶಿವಪ್ಪ ಅವರು ನಡೆಸಿಕೊಟ್ಟರು. ಪಂಚಾಗ ಪಠಣ ವನ್ನು ಶ್ರೀಮತಿ ಪ್ರಪುಲ್ಲ ಇವರು ನಡೆಸಿಕೊಟ್ಟರು.
ಮಾನಸಿಕ ಸಿದ್ಧತೆ, ಉಸಿರಾಟದ ಕ್ರಿಯೆ, ಗಣಪತಿ ನಮಸ್ಕಾರ ವನ್ನು ಸುರೇಂದ್ರ ಹಾಗೂ ಪ್ರಾತ್ಯಕ್ಷಿತೆ ಯನ್ನು ರೇಣುಕಾ ಹಾಗೂ ಸದಾಶಿವ ಅವರು ನಡೆಸಿಕೊಟ್ಟರು.
ಭಾಸ್ಕರ್ ,ಉಮಾ ,ರಾಮಕೃಷ್ಣ, ಸುಮಿತ್ರ, ಲೋಕೇಶ್ ಜಯಂತಿ ದಂಪತಿಗಳು ಅಗ್ನಿ ಹೋತ್ರ ಕಾರ್ಯಕ್ರಮ ನಡೆಸಿದರು.
ಆಯುಷ್ ಪಠ್ಯ ಕ್ರಮ ದ ಯೋಗಭ್ಯಾಸವನ್ನು ಹಿರಿಯ ಶಿಕ್ಷಕರಾದ ಶಿವಾನಂದ ಹಾಗೂ ಪ್ರತ್ಯಕ್ಷಿಕೆಯನ್ನು ವಿನೀತ್ , ಭವ್ಯ ಅವರು ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಚಾಲಕರಾದ ಮಹಾಬಲ ಅವರು ವಂದನಾರ್ಪಣೆ ಮಾಡಿದರು.
ಶ್ರೀಮತಿ ದಿವ್ಯಶ್ರೀ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಅನ್ನಪೂರ್ಣೇ ಮಂತ್ರ ಹೇಳಿ ಪ್ರಸಾದ ಸ್ವೀಕರಿಸಿಸಲಾಯಿತು.
ಸಮಿತಿ ಪ್ರಮುಖರಾದ ರವೀಶ್, , ಆನಂದ, ಗೋಕುಲ್ ನಾಥ , ಪ್ರಕಾಶ್ , ದಾಮೋದರ , ಪ್ರವೀಣ್ , ಉಮೇಶ್ ಪೊಳಲಿ, ವೇಣುಗೋಪಾಲ್ ,ಜನಾರ್ಧನ್ ,ಉಮೇಶ್ ಕದ್ರಿ, ಪ್ರಸಾದ್ ನಂಬಿಯರ್, ಗೀತಾ ,ಪುಷ್ಪಾ ಲತಾ,ಭಾರತಿ , ವಿಶಾಲಕ್ಷಿ ಲೀಲಾ ,ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.
ಕದ್ರಿ, ಕಂಕನಾಡಿ, ಪೊಳಲಿ, ಹಳೆಯಂಗಡಿ, ಮಂಗಳೂರು ನಗರದ ಯೋಗ ಬಂಧುಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆ ಯ ಬಂಧುಗಳು, ಸಾರ್ವಜನಿಕರು ಸುಮಾರು ಒಟ್ಟು 500ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
























































































































































































