ನಿವೃತ್ತ ಸರಕಾರಿ ನೌಕರರ ವೇದಿಕೆ ಹೋರಾಟಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

91.1K Views 17 Dec 2024

ಬೆಳಗಾವಿ: ಕರ್ನಾಟಕ ನಿವೃತ್ತ ನೌಕರರ ವೇದಿಕೆಯು ಡಿಸೆಂಬರ್16ರಂದು ಬೆಳಗಾವಿ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನನ್ನು ಭೇಟಿಯಾದ 12 ಜನ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ತಂಡದವರಿಗೆ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನಿವೃತ್ತ ನೌಕರರ ಸಮಸ್ಯೆ ಯನ್ನು ಸಮಾಧಾನದಿಂದ ಆಲಿಸಿದ ಮುಖ್ಯಮಂತ್ರಿ ಯವರು-” ನಾವೇ ಖುದ್ದಾಗಿ ನಮ್ಮ ಸರ್ಕಾರದ ಗೌರವಾನ್ವಿತ ಮಾನ್ಯ ಸತೀಶ ಜಾರಕಿಹೊಳೆಯರನ್ನೂಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳನ್ನು ತಮ್ಮ ಪ್ರತಿಭಟನಾ ಸ್ಥಳಕ್ಕೆ ಕಳಿಸಿದ್ದೆವು ಎಂದೂ ತಮ್ಮ ಬೇಡಿಕೆಯು ನಮ್ಮ ಗಮನದಲ್ಲಿದೆ ಎಂದೂ ಕೂಡಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನುಕೂಲ ಮಾಡಿಕೊಡೋಣ ಎಂದರು. ಧನಾತ್ಮಕವಾಗಿ ಅತ್ಯಂತ ಆತ್ಮೀಯವಾಗಿ ಕಳಕಳಿಯಿಂದ ಗೌರವಾನ್ವಿತ ಜನಪ್ರಿಯ ಮುಖ್ಯಮಂತ್ರಿಗಳು ವೇದಿಕೆಯ ತಂಡದವರಿಗೆ ತಿಳಿಸಿದರು.ಇದು ತಮ್ಮೆಲ್ಲರ ಹೋರಾಟದ ಫಲ ಪೂರ್ಣ ಪ್ರಮಾಣದ ಪರಿಹಾರದ ಆದೇಶ ಆಗುವವರೆಗೆ ಹೋರಾಟ ನಿರಂತರವಾಗಿರಿಸೋಣ ಉತ್ಸಾಹ ಸಹಕಾರ ಪ್ರಯತ್ನದಿಂದಿರೋಣ. ತಮಗೆಲ್ಲರಿಗೂ ದನ್ಯವಾದಗಳೆಂದು ಶೇಖರಪ್ಪ ಬಿಸೇರೊಟ್ಟಿ ಸಂಸ್ಥಾಪಕ ರಾಜ್ಯ ಸಂಚಾಲಕರು, ನಿವೃತ್ತ ನೌಕರರ ವೇದಿಕೆ ಇವರು ತಿಳಿಸಿದ್ದಾರೆ

ನಮ್ಮ ವೇದಿಕೆಯ ಹೋರಾಟದ ಫಲವಾಗಿ ವಿವಿಧ ದರ್ಜೆಯ ಅಧಿಕಾರಿಗಳಿಗೆ ಆರ್ಥಿಕವಾಗಿ (ಅಂದಾಜು)ಇಷ್ಟು ಹಣ ದೊರೆಯಲಿದೆ
A ದರ್ಜೆ ಅಧಿಕಾರಿ
,17 ಲಕ್ಷ 35,000 ಸಾವಿರ
B ದರ್ಜೆ ಅಧಿಕಾರಿ,
15 ಲಕ್ಷ 15 ಸಾವಿರ
C ದರ್ಜೆ ಅಧಿಕಾರಿ
12 ಲಕ್ಷ 58000
D, ದರ್ಜೆ ನೌಕರ
8ಲಕ್ಷ 37000 ಸಾವಿರ ನೌಕರ.
DCRG, committeeration, encashment live ಈ ಮೂರು ಸೌಲಭ್ಯಗಳನ್ನು ಆರ್ಥಿಕ ತಜ್ಞರು ಲೆಕ್ಕಾಚಾರ ಮಾಡಿ ಈ ರೀತಿ ಮಾಹಿತಿ ನೀಡಿದ್ದಾರೆ. *ನಮ್ಮ ವೇದಿಕೆಯ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಿ ನಿಮ್ಮ ಆರ್ಥಿಕ ಸೌಲಭ್ಯವನ್ನು ಪಡೆಯಿರೆಂದು ಹೆಚ್ .ಡಿ. ಮಾದಪ್ಪ ಜಿಲ್ಲಾ ಮಹಾ ಪ್ರಧಾನ ಸಂಚಾಲಕರು ಹಾಗೂ ರಾಜ್ಯ ಸಂಚಾಲಕರು, ನಿವೃತ್ತ ನೌಕರರ ವೇದಿಕೆ ಇವರು ತಿಳಿಸಿದ್ದಾರೆ

Read More News

Scroll to Top