ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ. ಬಿ. ಎನ್.
ಬೆಂಗಳೂರು: ಕರ್ನಾಟಕ ಉಪ ಚುನಾವಣೆಯು ಚನ್ನಪಟ್ಟಣ, ಶಿಗ್ಗಾoವಿ, ಸಂಡೂರ್ ಕ್ಷೇತ್ರಗಳಲ್ಲಿ ನಡೆದಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ -ಜೆಡಿಎಸ್ ಅಂದರೆ ಎನ್ ಡಿಎ ಮೈತ್ರಿ ಕೂಟ ನೆಲ ಕಚ್ಚಿದೆ.ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ದುರ್ಬಲ ನಾಯಕತ್ವ, ಪಕ್ಷದೊಳಗೆ ವಿಜಯೇಂದ್ರ ಸೃಷ್ಟಿಸಿದ ಗುಂಪುಗಾರಿಕೆಯೇ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕೂಡಾ ಬಿ ಎಸ್ ವೈ ಮತ್ತು ವಿಜಯೇಂದ್ರ ಇಬ್ಬರು ಸೇರಿಕೊಂಡು ಪಕ್ಷದ ಟಿಕೆಟ್ ಹಂಚುವಿಕೆ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲು, ಡಿವಿಎಸ್, ಪ್ರತಾಪ್ ಸಿಂಹ ಅವರಂಥ ಸಮರ್ಥರಿಗೆ ಟಿಕೆಟ್ ನೀಡದೆ ಜನ ಟೀಕೆಗೆ ಒಳಗಾಗಿದ್ದರು. ನಳಿನ್ ಕುಮಾರ್ ಕಟೀಲು ಅವರು ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯದಾದ್ಯoತ ಹಲವು ಬಾರಿ ಪ್ರವಾಸ ಮಾಡಿ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಿದ್ದರು. ಇವರ ನಾಯಕತ್ವದಲ್ಲಿ ಬಿಜೆಪಿ ಬಲಿಷ್ಠವಾಗಿತ್ತು. ಆದರೆ, ವಿಜಯೇಂದ್ರ ಪೇಪರ್ ಟೈಗರ್ ಆಗಿದ್ದು, ಈ ಉಪ ಚುನಾವಣೆಯಲ್ಲಿ ಫ್ಲಾಪ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ವಿಜಯೇಂದ್ರರ ಸರ್ವಾಧಿಕಾರಿ ಧೋರಣೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ದುರ್ಬಲಗೊಳಿಸುತ್ತಿದೆ ಇದಲ್ಲದೆ,ಎಚ್ ಡಿಕೆ ಜೊತೆಗಿನ ಮೈತ್ರಿ ಬಿಜೆಪಿಗೆ ಮುಳುವಾಗಿ ಪರಿಣಮಿಸಿದೆ ವಿಜಯೇಂದ್ರರನ್ನು ಕೂಡಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಆ ಜಾಗದಲ್ಲಿ ಸಮರ್ಥರಿಗೆ ಅವಕಾಶ ನೀಡಬೇಕೆಂಬ ಕೂಗು ಪಕ್ಷದೊಳಗೆ ಕೇಳಿ ಬರುತ್ತಿದೆ.
























































































































































































