ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ವೇದಿಕೆಯಲ್ಲಿ ಜನಮನ ರಂಜಿಸಿದ ಕನ್ನಡ ಗೀತಗಾಯನ ಕಾರ್ಯಕ್ರಮ

105.5K Views 19 Nov 2024

ದಸರಾ ವಸ್ತು ಪ್ರದರ್ಶನ 2024 ರ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ಪ್ರತಿನಿತ್ಯ ಮೈಸೂರು ವಸ್ತು ಪ್ರದರ್ಶನ ವೇದಿಕೆಯಲ್ಲಿ ಆಯೋಜಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾನು ವೀಕ್ಷಿಸಿದ್ದೇನೆ. ಹಾಗೇನೇ 15-11-2024ರಂದು ಸಂಜೆ ಆಯೋಜಿಸಲಾದ ಗಂಗಾಧರ ಗಾಂಧಿ ಮತ್ತು ಬಳಗದ ಸಂಗೀತ ಕಾರ್ಯಕ್ರಮವನ್ನು ಕುತೂಹಲದಿಂದ ನೋಡಿದೆ.


ಒಂದು ಸುಮಧುರ ಗೀತೆಗಳ ಲೋಕವೇ ಅಲ್ಲಿ ಅನಾವರಣ ಗೊಂಡಿತ್ತು. ಅಲ್ಲಿ ಮೂಡಿಬಂದ ಮಾಧುರ್ಯ ಪ್ರಧಾನವಾದ ಗೀತೆಗಳೇ ಆಗಿದ್ದವು. ಈ ಕಾರಣದಿಂದ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಸರಿಯಾಗಿ ಸಂಜೆ 6 ಗಂಟೆಗೆ ‘ಈ ದೇಶ ಚೆನ್ನ ಈ ಮಣ್ಣು ಚೆನ್ನ, ಎಂದು ನಾ ಕಾಣೆನಲ್ಲ’ ಎಂಬ ಹಾಡಿನೊಂದಿಗೆ ಆರಂಭಗೊಂಡು ದ್ವಿತೀಯ ಹಾಡಾಗಿ’ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ ‘ ಹಾಡುವ ಮೂಲಕ ನಿರಂತರ ಸುಮಾರು 45ಕ್ಕು ಹೆಚ್ಚು ಗೀತೆಗನ್ನು ಹಾಡುವುದೆಂದರೆ ತಮಾಷೆ ಮಾತಲ್ಲ ಮತ್ತು ಅನೇಕರು ಗಾಯನ ಕಂಡು ಮುಖವಿಸ್ಮಿತಾರಾದರು. ಸುಮಧುರ ಹಾಡುಗಳು ಜನರನ್ನು ಮನರಂಜಿಸಿತು…
ಹಿನ್ನಲೆಯಲ್ಲಿ ಸಂಗೀತ ಪರಿಕರ ನುಡಿಸುವವರು ಇರಲಿಲ್ಲ ನಿಜ . ಹಾಗಾಗಿ ಇತ್ತೀಚಿನ ನೂತನ ಆವಿಷ್ಕಾರದ ಕರೋಕೆ ಮಾದರಿಯಲ್ಲಿ ಹಿನ್ನಲೆ ಸಂಗೀತವನ್ನು ಅಳವಡಿಸಲಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪರಿಕರ ನುಡಿಸುವಿಕೆಯಲ್ಲಿ ಅಥವಾ ಗಾಯನದಲ್ಲಿ ವ್ಯತ್ಯಾಸವಾದರೆ ಸರಿದೂಗಿಸಿಕೊಳ್ಳಲು ಅವಕಾಶವಿರುತ್ತದೆ. ಕರೋಕೇ ಹಿನ್ನಲೆ ಸಂಗೀತದಲ್ಲಿ ಹಾಡುವಾಗ ಗಾಯಕ ಒಂದು ಕ್ಷಣ ತಪ್ಪಿದರೂ ಹಾಡಿನ ರೂಪವೇ ಬದಲಾದೀತು. ಹಾಗಾಗಿ ಕರೋಕೆ ಗಾಯನವನ್ನು ಸಾಮಾನ್ಯವೆಂದು ಪರಿಭಾವಿಸುವಂತಿಲ್ಲ ಮತ್ತು ಅದೊಂದು ತಪ್ಪಸ್ಸೆ ಸರಿ.
ಅನೇಕ ಬೇರೆ ಬೇರೆ ಸಂಗೀತ ಪರಿಕರಗಳನ್ನು ಬಳಸಿ ಮಧ್ಯೆ ಮಧ್ಯೆ ಸಂಗೀತ ನುಡಿಸುವಿಕೆಗೆ ಸಮಯ ಕಳೆದುಕೊಳ್ಳುವ ಈ ಸಂದರ್ಭಗಳಲ್ಲಿ ಕಡಿಮೆ ಅವಧಿಯಲ್ಲಿ ಕರೋಕೆ ಮೂಲಕ ಸುಮಾರು _45 ಕ್ಕು ಹೆಚ್ಚು ಹಾಡುಗಳನ್ನು ಸಾದರ ಪಡಿಸಿದ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ರವರ ಗಾಯನ ನಿಜಕ್ಕು ಅದ್ಭುತವೆನಿಸಿತು.
ಅಲ್ಲದೆ ಪ್ರತಿ ಹಾಡಿನ ಮಧ್ಯೆ ಗೀತೆಯ ಬಗ್ಗೆ ಅತ್ಯಂತ ಕಡಿಮೆ ಶಬ್ಧಗಳಲ್ಲಿ ಹಾಡಿನ ನಿರೂಪಣೆ ಗೈದ ರೇಷ್ಮಾ ಶೆಟ್ಟಿ ಗೋರೂರು ಹಾಗೂ ಮಧ್ಯೆ ಮಧ್ಯೆ ಮೂಡಿಬಂದ ಬಾಲ ಕಲಾವಿದೆ ಲಾಲಿತ್ಯ ಬೇಲೂರು ಇವರ ನೃತ್ಯ ಮನಸಿಗೆ ಮುದನೀಡಿತು.
ಬಹಳ ಮುಖ್ಯವಾಗಿ ಒಂದಕ್ಕಿಂತ ಒಂದು ಮಾಧ್ಯರ್ಯ ಪ್ರಧಾನ ಕನ್ನಡ ಗೀತೆಗಳು ಮೂಡಿ ಬಂದಿರುವುದಲ್ಲದೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಒಂದೆರಡು ಹಿಂದಿ ಹಾಡುಗಳನ್ನು ಸಾದರ ಪಡಿಸಿ ಜನಮೆಚ್ಚುಗೆಗೆ ಪಾತ್ರರಾದರು. ಈ ಕಾರ್ಯಕ್ರಮದ ನಂತರ ತಿಳಿದ ವಿಚಾರವೇನೆಂದರೆ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ , ಶ್ರೀ ರಕ್ಷಾ ಸರ್ಪಗಳ ಮತ್ತು ನೇತ್ರಾ ಖುಷಿ ಕಳೆದ 2023 ರ ನವೆಂಬರ್ ತಿಂಗಳಲ್ಲಿ ಮಂಗಳೂರಿನ ಪುರಭನದಲ್ಲಿ ನಿರಂತರ 12 ಗಂಟೆ ಹಾಡುವ ಮೂಲಕ ಎರಡು ವಿಶ್ವದಾಖಲೆಯನ್ನು ನಿರ್ಮಿಸಿರುವ ವಿಚಾರ ಬೆಳಕಿಗೆ ಬಂತು. ಮತ್ತು ಕರ್ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ ಮತ್ತು ವರ್ಷ ಕರ್ಕೇರಾ 45 ಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ನಿಜಕ್ಕೂ ಶ್ಲಾಘನೀಯ ವೆನಿಸಿದರು.
ಈ ತಂಡವನ್ನು ಗುರುತಿಸಿ ಮೈಸೂರಿನ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ “ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ” ದ ಅಧ್ಯಕ್ಷ ರಘುರಾಜ್ ಅರಸ್ ಹಾಗೂ ಉಪಾಧ್ಯಕ್ಷ ರಾಜೇಶ್ ಸಿ.ಗೌಡ ಅಭಿನಂದನಾರ್ಹರು ಅನಿಸಿತು. ಇಂತಹ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲಿ ಎಂಬುದೇ ನನ್ನ ಆಶಯ.
ಡಾ. ಕೊಲ್ಚಪ್ಪೆ ಗೋವಿಂದ ಭಟ್.

Read More News

Scroll to Top