“ಕರ್ನಾಟಕ ಮುಕುಟಮಣಿ” ಪ್ರಶಸ್ತಿಗೆ ಸಮಾಜ ಸೇವಕ ಯು.ಆರ್.ಶೆಟ್ಟಿ ಆಯ್ಕೆ

105.3K Views 28 Oct 2024

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ಬಾರಿ ಕನ್ನಡ ರಾಜ್ಯೋತ್ಸವದ ಸಂದರ್ಭ ನೀಡಲಿರುವ ” ಕರ್ನಾಟಕ ಮುಕುಟಮಣಿ ” ಪ್ರಶಸ್ತಿಗೆ ಮಂಗಳೂರಿನ ಸಮಾಜ ಸೇವಕ ಯು.ಆರ್.ಶೆಟ್ಟಿ ಯವರನ್ನು ಆಯ್ಕೆಗೊಳಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿರುವ ಯು.ಆರ್.ಶೆಟ್ಟಿ ಮಾಡಿರುವ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಗೊಳಿಸಲಾಗಿದೆ. ತುರ್ತು ಸಂದರ್ಭ ಗಳಲ್ಲಿ ಅನೇಕ ಬಾರಿ ರಕ್ತದಾನವನ್ನು ಮಾಡಿರುವ ಇವರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕವೂ ಜನಮನ್ನಣೆ ಪಡೆದಿರುವರು. ಕೋವಿಡ್-19 ತುರ್ತುಸ್ಥಿತಿ ಯಲ್ಲಿ ಪ್ಲಾಸ್ಮಾ ದಾನ ಮಾಡಿರುವ ಯು.ಆರ್.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಸತತ ಏಳು ಬಾರಿ ಆಯ್ಕೆಗೊಂಡು ಇಲಾಖೆಗೆ ಹೆಮ್ಮೆ ತಂದಿರುವರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತರು ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವರು.

Read More News

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

Scroll to Top