ಇವರೇ ತಮಗೆ ಬೇಕಾದಂತೆ ಪಟ್ಟಿ ಮಾಡುವುದಾದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೇಳುವುದು ಯಾಕೆ? ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಾರದರ್ಶಕವೇ?

119.4K Views 25 Oct 2024

ತನಿಖಾ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಎನ್.
ಬೆಂಗಳೂರು: ಕಳೆದ ಒಂದು ತಿಂಗಳಿಂದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಾಗಿ ಲಾಬಿ ನಡೆಸುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಈ ಪೈಕಿ,ಬಂಟ ಉದ್ಯಮಿಯೊಬ್ಬರು 15 ಲಕ್ಷ ರೂಪಾಯಿ ಖರ್ಚು ಮಾಡಿದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪ್ರಶಸ್ತಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನಾಂಕವಾಗಿತ್ತು. ಹೀಗೇ 2,800 ಅರ್ಜಿಗಳು ಬಂದಿದ್ದವು. ಅವುಗಳನ್ನು 700 ಕ್ಕೆ ಇಳಿಸಿ ಪಟ್ಟಿ ಮಾಡಲಾಗಿತ್ತು.

ಗಮನಿಸಬೇಕಾದ ವಿಷಯವೆಂದರೆ,ಕೇವಲ ಆನ್ಲೈನ್ ಅರ್ಜಿ ಸಲ್ಲಿಸಿ ಸುಮ್ಮನೆ ಕುಳಿತವರಿಗೆ ಪ್ರಶಸ್ತಿ ಇಲ್ಲ. ಎಂಎಲ್ಎ, ಮಂತ್ರಿಗಳ ಮೂಲಕ ಲಾಬಿ ನಡೆಸಿದವರಿಗೆ ಮಾತ್ರ ಪ್ರಶಸ್ತಿವೆಂಬುದು ಬಹಿರಂಗ ಸತ್ಯವಾಗಿದೆ. ಕೇವಲ ಲಾಬಿ ನಡೆಸುವವರಿಗೆ ಪ್ರಶಸ್ತಿ ನೀಡುವುದಾರೆ ಆನ್ಲೈನ್ ಮೂಲಕ ಪ್ರಶಸ್ತಿಗೆ ಅರ್ಜಿ ಕರೆಯುವುದು ಯಾವ ಪುರುಷಾರ್ಥಕ್ಕೆ?ಇದು ಜನರ ಕಣ್ಣೆಗೆ ಮಣ್ಣೆರೆಚುವುದೇ? ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರಶಸ್ತಿಗೆ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೆ ಮುನ್ನ ಪರಿಶೀಲಿಸಬೇಕಾಗಿದೆ. ಕಳೆದ ವರ್ಷ ವಿದೇಶದಲ್ಲಿರುವ ಬಂಟ ಉದ್ಯಮಿಯೊಬ್ಬರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದೂ ಗುಟ್ಟಾಗಿ ಉಳಿದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಹಣ ಮಾಡುವ ಸ್ಕೀಮೇ ಅಥವಾ ಅರ್ಹರನ್ನು ಗೌರವಿಸುವ ಸರಕಾರದ ಯೋಜನೆಯೇ? ಗೊಂದಲದಲ್ಲಿದ್ದಾರೆ ಜನ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿಯವರಿಗೆ ಫುಲ್ ಪವರ್ ಅಂತೆ? ರಿಮೋಟ್ ಕಂಟ್ರೋಲ್ ಸಿಎಂ ಕೈಯಲ್ಲಂತೆ. ಅರ್ಹರನ್ನು, ಪ್ರತಿಭಾವಂತರನ್ನು ಹಾಗೇ ಸುಮ್ಮನೆ ಗೌರವಿಸಿ ಪ್ರಶಸ್ತಿ ನೀಡುವ ಶುಭ ಘಳಿಗೆ ಸಿಎಂ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಖಂಡಿತ ಸಾಧ್ಯವಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಇದು ಸಾಧ್ಯನಾ? ಕಾತರದಿಂದ ಕಾಯುತ್ತಿದ್ದಾರೆ ಜನ.

Read More News

Scroll to Top