7ನೇ ವಾರ್ಷಿಕ ಹಬ್ಬ

113.3K Views 12 Oct 2024

ಮಂಗಳೂರು: ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಸದಸ್ಯರು ಅಕ್ಟೋಬರ್ 5ರಂದು ಸಂಜೆ ತಮ್ಮ ಸಭೆಯ 7 ನೇ ವಾರ್ಷಿಕ ಹಬ್ಬವನ್ನು ಆಚರಿಸಿದರು. ದೇವರಿಗೆ ಸ್ತುತಿ ಸಲ್ಲಿಸಿ ಪವಿತ್ರಾ ಪೂಜಾ ಬಲಿದಾನ ಅರ್ಪಿಸಿ ಚರ್ಚ್ ಸಭಾ ಮಂದಿರದಲ್ಲಿ ಚಿಕ್ಕ ಕಾರ್ಯಕ್ರಮ ನಡೆಸಿದರು. ಆಂಜೆಲೊರ್ ಚರ್ಚಿನ ಪ್ರಧಾನ ಗುರು ವಂದನೀಯ ಫೆಡ್ರಿಕ್ ಮೊಂತೆರೊರವರು ಅಧ್ಯಕ್ಷತೆ ವಹಿಸಿದರು. ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಪ್ರಾಂತೀಯಾ ಸಹಾಯಕರಾದ ವಂದನೀಯ ಪ್ರಕಾಶ್ ಲೋಬೊ ಹಾಗೂ ಚರ್ಚಿನ ಸಹಾಯಕ ಗುರು ವಂದನೀಯ ಸ್ಟೇನಿ ಲೋಬೊ, ಆಂಜೆಲೊರ್ ಚರ್ಚಿನ ಉಪಾಧ್ಯಕ್ಷ ಸಹೋದರ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಸಹೋದರಿ ಲೋಲಿನಾ ಡಿ’ಸೋಜ , 21 ಆಯೋಗಗಳ ಸಂಚಾಲಕಿ ಸಹೋದರಿ ರೆನಿಟಾ ಮಿನೇಜಸ್, ಪ್ರಾಂತೀಯ ಖಜಾಂಚಿ ಸಹೋದರ ಆಲ್ವಿನ್ ಮೊಂತೆರೊ ಹಾಗೂ ಪ್ರತಿನಿಧಿ ಅತಿಥಿಗಳಾಗಿದ್ದರು.
ಅಧ್ಯಕ್ಷೆ ಸಹೋದರಿ ಸಿಂತಿಯಾ ರುಜಾರಿಯೊ ಸ್ವಾಗತಿಸಿದರು. ಕರ್ಯದರ್ಶಿ ಸಹೋದರಿ ಸುನೀತಾ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಮನೋರಂಜನ ಕಾರ್ಯಕ್ರಮದೊಡನೆ ದೇವರನ್ನು ಹರಸಿ ಕಾರ್ಯಕ್ರಮ ಕೊನೆಗೊಂಡಿತು. ಸಹೋದರಿ ಸವಿತಾ ಫೆಲ್ಸಿ ರೊಡ್ರಿಗಸ್ ಕಾರ್ಯ ನಿಯೋಜಿಸಿದರು. ಸಹೋದರ ಡೆನಿಸ್ ಡಿ’ಸೋಜ ಧನ್ಯವಾದ ಸಮರ್ಪಿಸಿದರು.

Read More News

Scroll to Top