ದ.ಕ. ಜಿಲ್ಲಾ ನಾಮಫಲಕ ಕಲಾಕಾರರ ಸಂಘದ ಸದಸ್ಯರಿಗೆ ಅಪಘಾತ ವಿಮಾ ಪ್ರಮಾಣ ಪತ್ರ ವಿತರಣೆ.

106K Views 16 Aug 2024

ಮಂಗಳೂರು: ದ.ಕ. ಜಿಲ್ಲಾ ನಾಮಫಲಕ ಕಲಾಕಾರರ ಸಂಘದ ಸದಸ್ಯರಿಗೆ ಅಪಘಾತ ವಿಮಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ದಿನಾಂಕ ಆಗಸ್ಟ್ 12 ರಂದು ಬಬ್ಬುಸ್ವಾಮಿ ದೈವಸ್ಥಾನ ಕೊಪ್ಪಳ ಹಿತ್ಲು ಕುದ್ರೋಳಿಯಲ್ಲಿ ಜರಗಿತು.
ಈ ಅಪಘಾತ ವಿಮಾ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಅಪಘಾತ ಯಾವಾಗ ಸಂಭವಿಬಹುದು ಎಂಬುವುದು ತಿಳಿಯದು, ಆರೋಗ್ಯ ವಿಮೆಯ ಸೌಲಭ್ಯವು ಆಸ್ಪತ್ರೆಯ ವೆಚ್ಚವನ್ನು ಭರಿಸಬಹುದು. ಆದರೆ ಅಪಘಾತ ಸಂಭವಿಸಿ ದುಡಿಯಲಾಗದಿದ್ದರೆ ಅಥವಾ ಮರಣ ಸಂಭವಿಸಿದರೆ ಈ ಅಂಚೆ ಇಲಾಖೆಯ ವಿಮಾ ಸೌಲಭ್ಯವು ತಮ್ಮ ಅವಲಂಬಿತರಿಗೆ ಪ್ರಯೋಜನವಾಗಬಹುದು ಎಂದು ಪ್ರಾಸ್ತಾವಿಕ ಮಾತಿನಲ್ಲಿ ಕೆ.ಮಾಧವ ಕೋಟ್ಯಾನ್‌ರವರು ನುಡಿದರು.
ಉದ್ಯಮಿ ಚಂಪಾಲಾಲ್ (ಮಹಾಲಕ್ಷ್ಮಿ ಸ್ಟಿಕ್ಕರ್ಸ್) ವಿಮಾ ಪ್ರಮಾಣ ಪತ್ರ ವಿತರಿಸಿದರು. ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಆಚಾರ್ಯ ಪ್ರಾರ್ಥಿಸಿದರು. ದಯಾನಂದ್ ಕಾರ್ಯಕ್ರಮ ನಿರೂಪಿಸಿಸಿದರು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top