ಒಲಿಂಪಿಕ್ಸ್ ವಿಜೇತರನ್ನು ಅಭಿನಂದಿಸಿದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಬಿ. ಗುಣರಂಜನ್ ಶೆಟ್ಟಿ

114.4K Views 13 Aug 2024

ಪುತ್ತೂರು: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ ಕ್ರೀಡಾಕೂಟದ 57 ಕೆ.ಜಿ. ಫ್ರೀ ಸ್ಟ್ರೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಕುಸ್ತಿಪಟು ಅಮನ್ ಅವರನ್ನು ಭಾರತ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಭಾರತೀಯ ಕುಸ್ತಿ ಸಂಘದ ಅಧ್ಯಕ್ಷ ಸಂಜಯ್ ಸಿಂಗ್ ಅವರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ನ ಇಂಡಿಯಾ ಹೌಸ್‌ನಲ್ಲಿ ಅಭಿನಂದಿಸಿದರು.


ಇವರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಇಂಡಿಯಾ ಹೌಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳ ವಿಜೇತರಾದ ನೀರಜ್ ಚೋಪ್ರಾ, ಮನುಬಾಕರ್ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಗುಣರಂಜನ್ ಶೆಟ್ಟಿಯವರು ರಿಪಬ್ಲಿಕ್ ಆಫ್ ಫ್ರಾನ್ಸ್ ನ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಮತ್ತು ಜೆ.ಎಸ್.ಡಬ್ಲೂ ಗ್ರೂಫ್‌ನ ಬಿಸಿನೆಸ್ ಟೈಕೂನ್ ಪಾರ್ಥ್ ಜಿಂದಾಲ್ ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ ಅವರನ್ನು ಭೇಟಿಯಾದರು.
ಕರ್ನಾಟಕ ಕುಸ್ತಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸ್, ಕಾರ್ಯದರ್ಶಿ ಕುಮಾರ್ ಜಯರಾಮ್ ಉಪಸ್ಥಿತರಿದ್ದರು.

Read More News

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

Scroll to Top