ಬಂಟ್ವಾಳ ತಾಲೂಕಿನ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯ ಬಿಸಾಡುತ್ತಾರೆ. ಇದನ್ನು ತಿನ್ನುವ ದನ ಕರುಗಳು ಪ್ರಜ್ಞೆ ತಪ್ಪುತ್ತಿವೆ. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದೆ

119.8K Views 18 Jun 2024

ಪ್ರತ್ಯಕ್ಷ ವರದಿ: ಸಂಗೀತ ಸತೀಶ್ ಶೆಟ್ಟಿ.
ಬಂಟ್ವಾಳ:ಬಂಟ್ವಾಳ ತಾಲೂಕಿನ ಹಲವೆಡೆ ರಸ್ತೆ ಬದಿಗಳಲ್ಲಿ ಕೆಲವರು ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಾರೆ. ಇವುಗಳ ಬಗ್ಗೆ ಎನೂ ಅರಿಯದ ಮುಗ್ದ ಮೂಕ ಪ್ರಾಣೆಗಳು, ಸಾಕು ಪ್ರಾಣೆಗಳು,ದನ ಕರುಗಳು ಇದನ್ನು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನುತ್ತವೆ. ಪರಿಣಾಮ, ಅವುಗಳು ಸಾಯುತ್ತವೆ, ಇನ್ನು ಕೆಲವು ಪ್ರಜ್ಞೆ ತಪ್ಪುತ್ತವೆ. ಪಾಪ, ಮೂಕ ಪ್ರಾಣಿಗಳಿಗೇನು ಗೊತ್ತು ಇದು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳೆಂದು. ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಷೇಧಿಸಬೇಕಾಗಿದೆ.

ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ.

https://drive.google.com/file/d/1RBgAOKnhaSIBsbaWWlJ3UDgbvDATRNOx/view?usp=sharing

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top