ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆ ಅಭೂತಪೂರ್ವ ಜಯ ದೊರೆತಿದೆ-ನಳಿನ್ ಕುಮಾರ್ ಕಟೀಲ್

102.3K Views 4 Jun 2024

ಮಂಗಳೂರು, ಜೂ.4: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಭೂತಪೂರ್ವ ಜಯ ದೊರೆತಿದೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮ ಪ್ರತಿದಿನಗಳ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮುಂದೆ ಕ್ಯಾಬೃಜೇಶ್ ಚೌಟರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ಮುಂದುವರಿಯುವ ವಿಶ್ವಾಸವಿದೆ. ರಾಜ್ಯದಲ್ಲಿಯೂ ನಿರೀಕ್ಷೆ ಯಂತೆ ಬಿಜೆಪಿ 17ಕ್ಷೇತ್ರದಲ್ಲಿ ಜಯಗಳಿಸಿದೆ.ದೇಶದಲ್ಲಿ ಎನ್ ಡಿಎ ನೇತೃತ್ವದ ಸರಕಾರ ರಚನೆಯಾಗಲಿದೆ. 295 ಕ್ಷೇತ್ರ ಗಳಲ್ಲಿ ಮತದಾರರು ಎನ್ ಡಿಎ ಸರಕಾರವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಸರಳ ಬಹುಮತದೊಂದಿಗೆ ಮತ್ತೊಮ್ಮೆ ಎನ್ ಡಿಎ ಸರಕಾರ ಅಧಿಕಾರ ಪಡೆದಿದೆ.
ಕೇರಳ ರಾಜ್ಯದಲ್ಲಿ ನಾನು ಚುನಾವಣಾ ಕೆಲಸಲ್ಲಿ ತೊಡಗಿಸಿಕೊಂಡಿರುತ್ತೇನೆ. ಈ ಬಾರಿ ಪ್ರಥಮ ಬಾರಿಗೆ ತ್ರಿಶೂರಿನಲ್ಲಿ ಬಿಜೆಪಿ ಖಾತೆ ತೆರೆದಿರುವುದಕ್ಕೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿ ಗಾರರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Read More News

Scroll to Top