ಭಜನೆ ಇದ್ದಲ್ಲಿ ವಿಭಜನೆ ಇಲ್ಲ , ಭಜನೆಯ ಮೂಲಕ ಸಾಂಸ್ಕೃತಿಕ ಸಾಮಾಜಿಕ ಹಾಗೂ ಆರೋಗ್ಯದ ಜನಜಾಗೃತಿ ಸಾದ್ಯ:ಅರುಣ್ ಐತಾಳ್.

96.5K Views 21 May 2024

ಮಂಗಳಾದೇವಿ :ಕುಣಿತ ಭಜನೆ ಎಂಬುದು ದೈಹಿಕ ಮಾನಸಿಕ ಸಾಮಾಜಿಕ ಆರೋಗ್ಯ ನೀಡುವುದಲ್ಲದೇ ಸಾಹಿತ್ಯ ಸಂಸ್ಕೃತಿಯ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಜಾತಿ ನೀತಿ ಗುಂಪು ಪಂಗಡ ಪಕ್ಷ ಮೇಲು ಕೀಳು ಬಡವ ಬಲ್ಲಿದ ಭಾವನೆಗಳನ್ನು ತೊಡೆದು ಹಾಕಿ, ಆಡಂಬರದ ತೋರಿಕೆಯ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೇ ಒಂದಾಗಿ ಭಗವಂತನನ್ನು ಅತೀ ಸುಲಭವಾಗಿ ಒಲಿಸಿ ಕೊಳ್ಳುವ ಏಕೈಕ ಮಾರ್ಗವೇ ಭಜನೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ
ಎಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿಸ್ತಾಮಹೋತ್ಸವದ ಅಂಗವಾಗಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಹಾಗೂ ಸನಾತನ ಶ್ರೀರಾಮ ಭಜಕರ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಸೇವಾ ರೂಪದ ಕುಣಿತ ಭಜನಾ ಪ್ರದರ್ಶನ ಉದ್ಘಾಟಿಸಿದ ದೇವಸ್ಥಾನದ ಆಡಳಿತ ಮುಕ್ತೇಸರರಾದ ಅರುಣ್ ಐತಾಳ ಅಭಿಪ್ರಾಯ ಪಟ್ಟರು.


ಕಳೆದ ಹತ್ತಾರು ವರ್ಷಗಳಿಂದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಕುಣಿತ ಭಜನ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಒತ್ತು ಕೊಡುತ್ತಾ ಬಂದಿದ್ದು. ಭಜನೆಯನ್ನ ಗತಕಾಲದ ವೈಭವಕ್ಕೆ ತೆಗೆದುಕೊಂಡು ಹೋಗಬೇಕು ಯುವಕರನ್ನು ದುಶ್ಚಟಗಳಿಂದ ಮುಕ್ತಮಾಡಬೇಕು ಎಂಬ ಚಿಂತನೆಯಿಂದ ಮಂಗಳೂರಿನ ಸಮಾನ ಮನಸ್ಕರ ಹಾಗೂ ಹಿರಿಯ ಭಜನಾ ಮಂಡಳಿ ಹಾಗೂ ತಂಡಗಳ ಸಹಾಯ ಸಹಕಾರದಿಂದ ಶ್ರೀ ರಾಮ ಸನಾತನ ಭಜಕರ ಒಕ್ಕೂಟ ಮಂಗಳೂರು ಎಂಬ ಸಂಸ್ಥೆಯನ್ನ ಹುಟ್ಟು ಹಾಕಿ ಭಜನೆಗೆ ಬೆಂಬಲ ನೀಡಲಾಗುತ್ತಿದ್ದು. ಇದಕ್ಕೆ ನಗರದ ಪ್ರಮುಖ ಭಜನಾ ತಂಡಗಳು ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಹಿತೈಷಿ ಸಂಘಟನೆಗಳ ನೂರಾರು ಮಂದಿ ಭಜನಾಪ್ರಿಯರು ಸಾಥ್ ನೀಡಿ ಕಳೆತಂದಿರುವುದು ಸಮಾಜಕ್ಕೆ ಒಂದು ಒಗ್ಗಟ್ಟಿನ ಸಂದೇಶ ಕೊಟ್ಟಿದೆ ಎಂದು ನಗರದ ಖ್ಯಾತ ಲೆಕ್ಕ ಪರಿಶೋಧಕ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಾರ್ಗದರ್ಶಿಗಳಲ್ಲಿ ಓರ್ವರಾದ ಎಸ್.ಎಸ್. ನಾಯಕ್ ಹೇಳಿದರು.
ನಗರದ ಮಂಗಳಾದೇವಿ ಪರಿಸರದ ಹಿರಿಯ ಭಜನಾ ತಂಡಗಳಾದ ಅಂಬಾಮಹೇಶ್ವರಿ , ವಿಶ್ವೇಶ್ವರ ಮಾರಿಗುಡಿ , ಮುಖ್ಯಪ್ರಾಣ ರಾಮಮಂದಿರ , ವಿದ್ಯೋದಯ , ಆದಿ ಮಹೇಶ್ವರಿ ಭಜನಾ ತಂಡದ ಸದಸ್ಯರುಗಳ ಉಪಸ್ಥಿತಿಯಲ್ಲಿ ಜಗದೀಶ್ ಶೇಣವ ಗೋಪಾಲ್ ಕುತ್ತಾರ್ ಯಜ್ಞೇಶ್ ಬರ್ಕೆ ರಾಜೇಶ್ ಉಳ್ಳಾಲ್ ಅಜಿತ್ ರೈ ಮಾಲಾಡಿ ಡಾ ಕೆ ಆರ್ ಕಾಮತ್, ಡಾ ರಂಜನ್ ಪದ್ಮನಾಭ ಅಮೀನ್ ರಮಾನಂದ ಪೂಜಾರಿ. ಐರೋಡಿ ಸಂತೋಷ್ ಶೆಟ್ಟಿ ಸುಧಾಕರ್ ಪೇಜಾವರ ಸಹಿತ ಶ್ರೀದೇವಿ ಕ್ರಿಕೆಟರ್ಸ್ ಒಸಿ ಫ್ರೆಂಡ್ಸ್ ಮುಳಿಹಿತ್ಲು ಫ್ರೆಂಡ್ಸ್ ಮುಂತಾದ ಹತ್ತಾರು ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಸನಾತನ ಶ್ರೀ ರಾಮ ಭಜಕರ ಒಕ್ಕೂಟವನ್ನ ಉದ್ಘಾಟಿಸಿ ಕುಣಿತ ಭಜನೆಗೆ ಚಾಲನೆ ನೀಡಿದರು.


ಉಲ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ , ಬೈಂದೂರು ತ್ರಾಸಿಯ ಶ್ರೀ ಮಾಣಿ ಸಿದ್ದೇಶ್ವರ ತಂಡ, ಉಡುಪಿ ಬಿಜಾಡಿಯ ಶ್ರೀ ರಾಮ ಭಜನಾ ತಂಡ, ಮಂಗಳೂರು ಕುಳಾಯಿ ಹೊಸಬೆಟ್ಟಿನ ಬಾಲ ವಿಕಾಸ ಭಜನಾ ಮಂಡಳಿಗಳು ಭಕ್ತಿ ಭಾವ ಪರಾಕಾಸ್ಟೆಯ ಭಜನಾ ನೃತ್ಯ ಪ್ರದರ್ಶನ ಮಾಡಿ ನೆರೆದ ಭಜಕರ ಮೆಚ್ಚುಗೆಗೆ ಪಾತ್ರರಾದರು.
ನವಕೀರ್ತಿ ಯುವಕ ಮಂಡಲ ವೀರನಗರ ಪಡೀಲ್ ಶಿವ ಫ್ರೆಂಡ್ಸ್ ಕ್ಲಬ್ ಕೊಡಾಕಲ್ ಐಎಂಎ. ವೆನ್ಲಾಕ್ ಹಾಗೂ ಕುಟುಂಬ ವೈದ್ಯರ ಸಂಘಟನೆಯ ಹಿರಿಯ ವೈದ್ಯಮಿತ್ರರು, ನಗರದ ಬಂಟ , ಬಿಲ್ಲವ , ಮಲೆಯಾಳಿ ಬಿಲ್ಲವ , ಮೊಗವೀರ, ಕುಲಾಲ್, ರಾಮಕ್ಷತ್ರಿಯ , ಸಂಘಗಳ ನಾಯಕರ ಜೊತೆ ಕುಂದಾಪುರ ಕಾರ್ಕಳ ಉಡುಪಿ ಕಾಪು ಸುರತ್ಕಲ್ ಕುಳಾಯಿ ನೀರುಮಾರ್ಗ ಮಂಗಳೂರು ಬಂಟ್ವಾಳ ವ್ಯಾಪ್ತಿಯ ಕುಲಾಲ ಸಂಘ ಹಾಗೂ ಯುವ ವೇದಿಕೆಯ ನಾಯಕರುಗಳು ಭಾಗವಹಿಸಿ ಸೇವಾ ಸಹಕಾರ ನೀಡಿದ್ದರು.
ಸನಾತನ ಶ್ರೀರಾಮ ಭಜಕರ ಒಕ್ಕೂಟದ ಸಂಚಾಲಕರುಗಳಾದ ಸಂತೋಷ್ ಶೆಟ್ಟಿ, ಸುರೇಶ್ ಆಚಾರ್ ,ನಿಶ್ಚಿತ್ ಪಡೀಲ್ ,ದೇವದಾಸ್ ಶೆಟ್ಟಿ ಕೊಡಾಕಲ್ ,ಸುಧಾಕರ್ ಸಾಲ್ಯಾನ್ , ಶ್ರೀಮತಿ ಮಮತಾ ಕುಲಾಲ್ , ಮಹಾಬಲ ಕುಲಾಲ್ , ಶರತ್ ಮಂಕಿಸ್ಟಾಂಡ್ , ಹರೀಶ್ ಶೆಟ್ಟಿ ಜಪ್ಪು , ದಿನೇಶ್ ಕರ್ಕೇರ ಮಹಾಕಾಳಿಪಡ್ಪು, ಅಜಿತ್ ಬೋಳಾರ , ಅನನ್ಯ ಕುಲಾಲ್ ಕಾರ್ಯಕ್ರಮವನ್ನ ಸಂಯೋಜಿಸಿದರು. ಗಣೇಶ್ ಶೆಟ್ಟಿ ವೀರನಗರ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಪ್ರಧಾನ ಸಂಚಾಲಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಸ್ವಾಗತಿಸಿ ವಂದಿಸಿದರು.

Read More News

Scroll to Top