ಮಂಗಳೂರಿನ ಹೋಲಿ ಕ್ರಾಸ್ ಚರ್ಚ್ ಕೊರ್ಡೇಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರ ಸಂಜೆ 4.30 ಕ್ಕೆ ‘ಶಿಲುಬೆಯ ಹಾದಿ’.

107.6K Views 12 Mar 2024

ಮಂಗಳೂರು :ಮಂಗಳೂರಿನ ಹೋಲಿ ಕ್ರಾಸ್ ಚರ್ಚು ಕೊರ್ಡೆಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರಂದು ಸಂಜೆ 4.3೦ ಗಂಟೆಗೆ “ಶಿಲುಬೆಯ ಹಾದಿ” (ಕುರ್ಸಾಚಿ ವಾಟ್) ನ್ನು ಸಿಟಿ ವಲಯದ 12 ಚರ್ಚುಗಳ ಸಹಯೋಗದಿಂದ ನಡೆಸಲಾಗುತ್ತದೆ.


ಕೊರ್ಡೆಲ್, ವಾಮಂಜೂರ್, ಪಾಲ್ದಾನೆ, ಬೊಂದೇಲ್, ದೆರೆಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳು ಭಾಗವಹಿಸಲಿದ್ದು, ಏಸುಕ್ರಿಸ್ತರು ಶಿಲುಬೆಯ 14 ಹಾದಿಗಳನ್ನು ಈ ಚರ್ಚುಗಳ ಕಲಾವಿದರ ನಟನೆಯ ಮೂಲಕ ಚರ್ಚಿನ ಆವರಣದ ಒಳಗೆ ನಡೆಸಲಾಗುವುದು. ಶಿಲುಬೆಯ ಹಾದಿಯ 14 ನಿಲ್ದಾಣಗಳನ್ನು (ಸ್ಟೇಶನ್) ನ್ನು ವಲಯದ 12 ಚರ್ಚುಗಳ ಹಾಗೂ ಧರ್ಮಗುರುಗಳ ಮತ್ತು ಧರ್ಮಭಗಿನಿಯರ ಪ್ರತಿನಿಧಿಗಳು ನಡೆಸಿಕೊಡುತ್ತಾರೆ. ಸಂಜೆ 4.30ಕ್ಕೆ ಬಲಿಪೂಜೆ, ನಂತರ ಶಿಲುಬೆಯ ಹಾದಿ, 12ನೇ ನಿಲ್ದಾಣದಲ್ಲಿ ಪ್ರವಚನವನ್ನು ನಡೆಸಿಲಾಗುವುದು.
ಈ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಸ್ಕಿçಪ್ಟ್ ಬಿಡುಗಡೆ ಮಾಡಿದರು. ಸಹಾಯಕ ಧರ್ಮಗುರುಗಳಾದ ವಂ| ಪಾ| ಪಾವುಲ್ ಡಿ’ಸೋಜ, ಧರ್ಮಪ್ರಾಂತ್ಯದ ಪಿ.ಆರ್.ಓ. ರೋಯ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ರೂತ್ ಕ್ಯಾಸ್ಟಲಿನೋ, ಕಾರ್ಯದರ್ಶಿ ಅನಿಲ್ ಡೆಸಾ, ಸರ್ವ ಆಯೋಗದ ಸಂಚಾಲಕ ಡೊಲ್ಫಿ ಡಿ’ಸೋಜ,12 ಚರ್ಚುಗಳ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಲಾವಿದರಿಗೆ ನಿರ್ದೇಶಕರಾಗಿ ಡೆನ್ನಿಸ್ ಮೊಂತೆರೋ ಹಾಗೂ ಸ್ಟ್ಯಾನ್ಲಿ ಅಲ್ವಾರೀಸ್, ಏಸು ಕ್ರಿಸ್ತರ ಪಾತ್ರವನ್ನು ವಿಕಾಸ್ ಕುಲಾಕುಲ್, ಮದರ್ ಮೇರಿಯ ಪಾತ್ರವನ್ನು ಆ್ಯಶೆಲ್ ಡಿ’ಸಿಲ್ವಾ, ಪಿಲಾತನ ಪಾತ್ರವನ್ನು ಆಲ್ವಿನ್ ಪಾಯಸ್ ಮುಂತಾದವರು ನಿರ್ವಹಿಸಲಿದ್ದಾರೆ.

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top