ಬಿ.ಸಿ.ರೋಡ್ -ಮುಕ್ಕ ಷಟ್ಪಥ ಹೆದ್ದಾರಿ ಬಗ್ಗೆ ಮಾಹಿತಿ ನೀಡಿದ ಎಂಪಿ ನಳಿನ್‌ಕುಮಾರ್ ಕಟೀಲು.

119.6K Views 1 Mar 2024

ಮಂಗಳೂರು: ಬಿ.ಸಿ.ರೋಡ್ ಹಾಗೂ ಮುಕ್ಕ ಮಧ್ಯೆ ಇರುವ ಚತುಷ್ಪಥ ಹೆದ್ದಾರಿಯನ್ನು ಷಟ್ಪಥಕ್ಕೆ ವಿಸ್ತರಿಸುವ ಯೋಜನೆ ಇದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತವಾಗಿ ಬೈಕಂಪಾಡಿ-ಕೂಳೂರು ಮಧ್ಯೆ ಸುಮಾರು 4 ಕಿ.ಮೀ. ಉದ್ದ ಎಲಿವೇಟೆಡ್ ಹೈವೇ ನಿರ್ಮಾಣಗೊಳ್ಳಲಿದೆ ಎಂದು ನಳಿನ್‌ಕುಮಾರ್ ಕಟೀಲು ಅವರು ಹೇಳಿದರು.
ಎಲಿವೇಟೆಡ್ ಹೈವೇಯ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳುತ್ತಿದೆ. ರಾ.ಹೆ. ಪ್ರಾಧಿಕಾರ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದವರು ಒಟ್ಟಾಗಿ ಇದನ್ನು ಕಾರ್ಯಗತಗೊಳಿಸಲಿದ್ದಾರೆ. ಮುಂದಿನ ಹಂತಗಳಲ್ಲಿ ಮುಕ್ಕ ಬಿ.ಸಿ. ರೋಡ್ ಮಧ್ಯೆ ಸಾಧ್ಯವಿರುವ ಕಡೆ ಭೂಸ್ವಾಧೀನ ಮಾಡುವುದು, ಇತರ ಕಡೆ ಎಲೆವೇಟೆಡ್ ಹೈವೇಯಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಬಿ.ಸಿ.ರೋಡ್ ಪೆರಿಯ ಶಾಂತಿ ಮಧ್ಯೆಯ ೪೮ ಕಿ.ಮೀ. ಉದ್ದದ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಕಾಮಗಾರಿ ಶೇ. 4೦ರಷ್ಟು ಆಗಿದೆ. ಇದರಲ್ಲಿ ಕಲ್ಲಡ್ಕ ಮೇಲ್ಸೇತುವೆ ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿ ಸೇತುವೆ ಕೂಡ ಸೇರುವುದರಿಂದ ಕಾಮಗಾರಿ ಸಮಯ ತೆಗೆದುಕೊಂಡಿದೆ. ಬಿಕರ್ನಕಟ್ಟೆ ಸಾಣೂರು ಹೆದ್ದಾರಿ ಚತುಷ್ಪಥ ಯೋಜನೆಯಲ್ಲೂ ಬಹುತೇಕ ಭೂಸ್ವಾಧೀನ ಪೂರ್ಣಗೊಂಡಿದೆ. ಕಾಮಗಾರಿ ಚುರುಕಾಗಿದೆ. ಬಿ.ಸಿ. ರೋಡ್ ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಪೂಂಜಾಲಕಟ್ಟೆ-ಚಾರ್ಮಾಡಿ ನಡುವೆ ಪ್ರಗತಿಯಲ್ಲಿದ್ದು ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆಗೆ ಶಿಲಾನ್ಯಾಸ ಆಗಿದೆ ಎಂದು ವಿವರಿಸಿದರು.
ನಂತೂರು ಹಾಗೂ ಕೆಪಿಟಿ ಮೇಲ್ಸೇರುವೆ ಕಾಮಗಾರಿಗಳಿಗೆ ಟೆಂಡರ್ ಆಗಿದ್ದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ತೆರವಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.

Read More News

Scroll to Top