MP MLA’S NEWS PUBLIC VIEW:DR ASHOk SHETTY BN ಮಂಗಳೂರು :ಪ್ರತಿ ಸಲ ರಾಜ್ಯೋತ್ಸವ ಬಂದಾಗಲೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ದಕ್ಷಿಣಕನ್ನಡ ಸದ್ದು ಮಾಡುತ್ತದೆ. ಅರ್ಹರ ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬರುತ್ತದೆ. ಇದಕ್ಕೆ ಕಾರಣ ಇಲ್ಲಿ ಪ್ರತಿ ಸಲ ರಾಜ್ಯೋತ್ಸವದಂದು ನೀಡಲಾಗುವ ಪ್ರಶಸ್ತಿ ರಾದ್ದಾಂತ. ಈ ಹಿಂದೆ ನೀಡಲಾಗುತ್ತಿದ್ದ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಬದಲು ಜಿಲ್ಲಾ ಪ್ರಶಸ್ತಿ ಕೊಡಲಾಗುತ್ತದೆ. ಈ ಸಲ ರಾಜ್ಯೋತ್ಸವದ ದಿನದಂದೇ ಜಿಲ್ಲಾ ಉಸ್ತುವಾರಿ ಸಚಿವರು ಭಾಷಣ ಮಾಡುತ್ತಿದ್ದಾಗಲೇ ವಾರ್ತಾ ಇಲಾಖೆ ಗ್ರೂಪ್ ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಮಾಧ್ಯಮದ ಮಂದಿಗೆ ತಡವಾಗಿ ಬಿಡುಗಡೆ ಮಾಡಲಾಗಿದೆ. ಇದು ವ್ಯಾಪಕ ಟೀಕೆಗೆ ಗುರಿಯಾಯಿತು.ಬರೋಬರೀ 120 ಮಂದಿಗೆ ಪ್ರಶಸ್ತಿ, 54 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ. ದ. ಕ.ದ ಎಂಪಿ ಎಂಎಲ್ ಎಗಳು ಸೂಚಿಸಿದ ಮಂದಿಗೆ ಮಾತ್ರ ಪ್ರಶಸ್ತಿ. ಉಳಿದ ಅರ್ಹರಿಗೆ ಚೆಂಬು. ಹಿಂದಿನ ಉಳ್ಳಾಲ ಅಂದರೆ ಮಂಗಳೂರು ಕ್ಷೇತ್ರದ ಅರ್ಹರನ್ನು ಮಾತ್ರ ಸಚಿವರು ಆಯ್ಕೆ ಮಾಡಿದ್ದು ಬಿಟ್ಟರೆ ಉಳಿದ 7 ಕ್ಷೇತ್ರಗಳ ಆಯ್ಕೆಯನ್ನು ಎಂಪಿ ಎಂಎಲ್ ಎ ಗಳ ಶಿಫಾರಸ್ಸು ಮೇರೆಗೆ ನೀಡಲಾಗಿದೆ. ಉಳಿದ 12ಮಂದಿ ಅರ್ಹರ ಆಯ್ಕೆಯನ್ನು ಸ್ವತಃ ಯು. ಟಿ. ಖಾದರ್ ಅವರೇ ಮಾಡಿದ್ದಾರೆ.
ಪ್ರಶಸ್ತಿ ಸಿಗದವರು ದೂರುವುದು ಸಹಜ.ಈ ರೀತಿ, ಗೊಂದಲ, ಅಸಮಾಧಾನ ಸೃಷ್ಟಿಸುವ ಪ್ರಶಸ್ತಿ ಸಾಹಸವೇ ಬೇಡವೆಂದು ಉಡುಪಿಯಲ್ಲಿ ಈ ಸಲ ಪ್ರಶಸ್ತಿಯನ್ನೇ ರದ್ದು ಗೊಳಿಸಲಾಗಿದೆ. ಎಂಪಿ ಎಂಎಲ್ ಎಗಳ ಶಿಫಾರಸ್ಸು ಅಲ್ಲದೆ ಮಾಜಿ ಎಂಪಿ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ತನ್ನ ಶಿಫಾರಸ್ಸು ಪತ್ರ ನೀಡಿ ಜಿಲ್ಲಾ ಪ್ರಶಸ್ತಿ ಆಯ್ಕೆಯಲ್ಲಿ ತನ್ನ ಪಾತ್ರವನ್ನು ತೋರಿಸಿದ್ದಾರೆ. ಅದೇನೇ ಇರಲಿ, ಅರ್ಜಿ ಸಲ್ಲಿಸಿ ರಾಜಕೀಯ ಲಾಬಿ ಮೇಲೆ ಪ್ರಶಸ್ತಿ ಪಡೆದರೆ ಈ ಪ್ರಶಸ್ತಿಗೆ ಏನು ಬೆಲೆ ಇದೆ.?ಪ್ರಶಸ್ತಿ ಆಯ್ಕೆಯಲ್ಲಿ ಎಂಪಿ ಎಂ ಎಲ್ ಎಗಳ ಸ್ಪಷ್ಟ ಪಾತ್ರ ಇದ್ದರೂ ಎಲ್ಲರು ಬೊಟ್ಟು ಮಾಡುವುದು ಯು. ಟಿ. ಖಾದರ್ ಅವರನ್ನು. ಇದು ಎಷ್ಟು ಸರಿ ಎನ್ನುತ್ತಾರೆ ಸಚಿವರ ನಿಕಟವರ್ತಿಗಳು. ರಾಜಕೀಯದಲ್ಲಿ ಉಜ್ವಲ ಭವಿಷ್ಯವುಳ್ಳ, ಮುಖ್ಯಮಂತ್ರಿಯಾಗುವ ಯೋಗವುಳ್ಳ ಯು ಟಿ. ಖಾದರ್ ಅವರು ಮುಂದಿನ ವರ್ಷದಿಂದ ಜಿಲ್ಲಾ ಪ್ರಶಸ್ತಿಯನ್ನು ರದ್ದು ಗೊಳಿಸಿ ಜಿಲ್ಲೆಯ ಘನತೆ ಕಾಪಾಡಲಿ ಎಂದು ಜನ ಒತ್ತಾಯಿಸಿದ್ದಾರೆ.




















































































































































































