ಬೋಂದೆಲ್ ಚರ್ಚ್ ನಲ್ಲಿ ಜೀವನ್ ದಿಶಾ ಶಿಬಿರ

10.9K Views 2h ago

ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ 12 ಚರ್ಚ್ ಗಳನ್ನು ಒಳಗೊಂಡ ಸಿಟಿ ವಲಯ ವ್ಯಾಪ್ತಿಯ 7 ನೇ ತರಗತಿಯ ಮಕ್ಕಳಿಗಾಗಿ ಜೀವನ್ ದಿಶಾ ಎಂಬ ತರಬೇತಿ ಶಿಬಿರವನ್ನು ಬೋಂದೆಲ್ ಚರ್ಚ್ ನ ಸಂತ ಲಾರೆನ್ಸ್ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಿಟಿ ವಲಯದ ವಿಗಾರ್ ವಾರ್ ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಶಿಬಿರವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಯೇಸು ಕ್ರಿಸ್ತರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಇಂದಿನ ಎಳೆಯ ಮಕ್ಕಳು ಮುಂದಿನ ಜನಾಂಗ ಆಗಿರುವುದರಿಂದ ಅವರು ಉತ್ತಮ ಪ್ರಜೆಗಳಾಗಿ ಬೆಳವಣಿಗೆ ಹೊಂದಲು ಶಿಸ್ತು, ಸಹನೆ ಮತ್ತು ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳ ಬೇಕಾಗಿದ್ದು, ಈ ದಿಶೆಯಲ್ಲಿ ಇಂತಹ ಶಿಬಿರಗಳು ಬಹಳ ಉಪಯುಕ್ತ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಬೋಂದೆಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಬೇಸಿಲ್ ವಾಸ್, ವಂದನೀಯ ಫಾ. ಲಾಯ್ಡ್ ರೋಷನ್ ಡಿ ಸೋಜಾ, ವಂದನೀಯ ಫಾ. ಐವನ್ ಪೀಟರ್ ಕೊರ್ಡೆರೋ, ಚರ್ಚ್ ಉಪಾಧ್ಯಕ್ಷ ಜಾನ್ ಡಿ ಸಿಲ್ವಾ, ಸಮಿತಿಯ ಸದಸ್ಯರಾದ ಹೆಲೆನ್ ಮಿನೇಜಸ್, ಫ್ಲಾವಿಯಾ ಪಿಂಟೊ, ವಿಯೋಲಾ ಫೆರ್ನಾಂಡಿಸ್, ಜೂಲಿಯಾನಾ ಕುವೆಲ್ಲೊ, ಪಮೇಲಾ ಡಿ ಸೋಜಾ ಹಾಗೂ ಎಲಿಜಬೆತ್ ರೊಡ್ರಿಗಸ್ ಉಪಸ್ಥಿತರಿದ್ದರು. ಹೆಲೆನ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.

Read More News

Scroll to Top