ದುಬೈಯ ಹೆಸರಾಂತ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಪ್ರಸ್ತುತಪಡಿಸುವ ಬಹು ನಿರೀಕ್ಷೆಯ ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಡಿಸೆಂಬರ್ ನಲ್ಲಿ ತೆರೆಗೆ. ಇದು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾದ ವಿರುದ್ಧ ಸಿಡಿದೆದ್ದ ನಿಷ್ಠಾವಂತ ವೈದ್ಯನೊಬ್ಬನ ಕಥೆ .ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶನದ ಡಾ.ಸುಧಾಕರ್ ಶೆಟ್ಟಿ ಪುಣೆ- ಮೂಡಬಿದ್ರಿ ಪರಿಕಲ್ಪನೆಯ ಸಿನಿಮಾ.

96.3K Views 1w ago

ಮಂಗಳೂರು/ದುಬೈ, ಅ.3:
ತುಳು ಚಿತ್ರರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗಿದೆ. ದುಬೈನಲ್ಲಿ ಉದ್ಯಮಿಯಾಗಿ ಹೆಸರು ಮಾಡಿರುವ ಉಡುಪಿ ಮೂಲದ ಪ್ರಸಾದ್ ಕುಮಾರ್ ಶೆಟ್ಟಿ ಅವರು ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಅಕ್ಟೋಬರ್ ತಿಂಗಳಾಂತ್ಯದಲ್ಲಿ ಚಿತ್ರದ ಅಂತಿಮ ಹಂತದ ಹೊರಾಂಗಣ ಚಿತ್ರೀಕರಣ ಆರಂಭವಾಗಲಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲು ಸಿದ್ಧವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ವೈದ್ಯನೊಬ್ಬನ ಸಮರ್ಪಣಾ ಪಯಣದ ಕಥೆ

ಈ ಚಿತ್ರದ ಕಥೆ ಒಬ್ಬ ನಿಷ್ಠಾವಂತ ವೈದ್ಯನ ಸಮರ್ಪಣಾ ಪಯಣವನ್ನು ಆಧರಿಸಿದೆ. ಗ್ರಾಮೀಣ ಭಾಗದಿಂದ ಬಂದು ವೈದ್ಯನಾಗಿ, ನೈತಿಕ ವೈದ್ಯ ಪದ್ಧತಿಯನ್ನು ಉಳಿಸಿಕೊಳ್ಳಲು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾ ವಿರುದ್ಧ ಹೋರಾಡುವ ವೈದ್ಯನ ಕಥೆ ಇದಾಗಿದೆ.
ಬಲಿಷ್ಠ ಕಥಾವಸ್ತು, ಸುಮಧುರ ಸಂಗೀತ, ಭಾವನಾತ್ಮಕ ಸನ್ನಿವೇಶಗಳು, ನೈತಿಕ ವೈದ್ಯ ಪದ್ಧತಿ ಮತ್ತು ವೈದ್ಯಕೀಯ ಮಾಫಿಯಾದ ಕರಾಳ ಮುಖವನ್ನು ಈ ಚಿತ್ರ ಅನಾವರಣಗೊಳಿಸಲಿದೆ.

ಪ್ರಶಸ್ತಿ ವಿಜೇತ ತಂಡದ ಕೊಡುಗೆ

ಚಿತ್ರವನ್ನು ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಅಮೃತಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ.
ಈ ಯೋಜನೆಯನ್ನು ಪುಣೆಯ ಪ್ರಸಿದ್ಧ ಮಕ್ಕಳ ತಜ್ಞ ಮೂಡಬಿದ್ರೆ ಮೂಲದ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022 ಪುರಸ್ಕೃತ ಡಾ. ಸುಧಾಕರ್ ಶೆಟ್ಟಿ ಅವರು ಆರಂಭಿಸಿದ್ದಾರೆ. ಅವರ ಪರಿಕಲ್ಪನೆ ಮತ್ತು ಸ್ಫೂರ್ತಿಯಿಂದ ಈ ಚಿತ್ರ ಮೂಡಿಬರುತ್ತಿದೆ. ಡಾ. ಸುಧಾಕರ್ ಶೆಟ್ಟಿ ಅವರು ಬಿಡುವಿಲ್ಲದ ಜನಪ್ರಿಯ ವೈದ್ಯರಾಗಿದ್ದರೂ , ಅವರಿಗೆ ಸಿನಿಮಾದ ಬಗ್ಗೆ ಇರುವ ಅಭಿರುಚಿ,ಸಿನಿಮಾದ ಕುರಿತು ಇರುವರು ಸೃಜನಶೀಲ ಮನೋಭಾವ ಶ್ಲಾಘನೀಯವಾಗಿದೆ.ಈ ಹಿಂದೆ MPMLAS NEWS ಅವರಿಗೆ ಸೌಹಾರ್ದ ಸಂಗಮದಲ್ಲಿ ಸಮಾಜರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ದುಬೈ – ಕರಾವಳಿ ಸಂಬಂಧ

ಪ್ರಸಾದ್ ಕುಮಾರ್ ಶೆಟ್ಟಿ ಅವರು ದುಬೈನಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ತುಳು ಭಾಷೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಅವರ ಆಶಯದ ಭಾಗವಾಗಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಮೂಡಬಿದ್ರಿ, ಮಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ.

Read More News

Scroll to Top