ಮಂಗಳೂರು ನಗರದಲ್ಲಿ ಗಮನ ಸೆಳೆದ ವಿನೂತನ ಶೈಲಿಯ ಗಾಂಧಿ ಜಯಂತಿ ಆಚರಣೆ. ಪ್ಲಾಸ್ಟಿಕ್ ಚೀಲ ಬದಲು ಬಟ್ಟೆ ಚೀಲ ವಿತರಣಾ ಅಭಿಯಾನದೊಂದಿಗೆ ಗಾಂಧಿ ಜಯಂತಿ ಆಚರಣೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ನಗರದಲ್ಲಿ ವಿಶೇಷ ಅಭಿಯಾನ.

100.7K Views 1w ago

ಮಂಗಳೂರು,ಅ.2; ಸ್ವಚ್ಛ ಮಂಗಳೂರು, ಪ್ಲಾಸ್ಟಿಕ್ ಮುಕ್ತ ಪರಿಸರದ ಧ್ಯೇಯ ದೊಂದಿಗೆ ಪ್ಲಾಸ್ಟಿಕ್ ಚೀಲ ಬದಲು ಬಟ್ಟೆ ಚೀಲ ವಿತರಣಾ ಅಭಿಯಾನದೊಂದಿಗೆ ನಗರದ ಸಂತ ಅಲೋಶಿ ಯಸ್ ಐ.ಟಿ.ಐ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಕ್ಟೋಬರ್ 2ರ ಶುಕ್ರವಾರ ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಹಸಿರು ದಳ,ಸೂಜಿ ಮಲ್ಲಿಗೆ ಸ್ವಸಹಾಯ ಗುಂಪು,ಲಯನ್ಸ್ ಕ್ಲಬ್ ಮಂಗಳೂರು,ಲಿಯೊ ಕ್ಲಬ್ ಸೈಂಟ್ ಅಲೋಶಿಯಸ್ ಐಟಿಐ, ಲಿಯೊ ಕ್ಲಬ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಮಂಗ ಳೂರಿಗಾಗಿ ನಮ್ಮ ಕೌಶಲ್ಯ ಧ್ಯೇಯದೊಂದಿಗೆ ಹಳೆಯ ಬಟ್ಟೆಯಿಂದ ತಯಾರಿಸಿದ 1000 ಚೀಲಗಳನ್ನು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯಕ್ರಮ ಪ್ಲಾಸ್ಟಿಕ್ ಮುಕ್ತ ಪರಿಸರ “ನಮ್ಮ ಜವಾಬ್ದಾರಿ.
ಸಂತ ಅಲೋಶಿಯಸ್‌ನಿಂದ ಪ್ರಾರಂಭ ಗೊಂಡು ಬಂಟ್ಸ್ ಹಾಸ್ಟೆಲ್ – ಮಲ್ಲಿಕಟ್ಟೆ ಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಜನಸಾಮಾನ್ಯರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಪಡೆದು ತಮ್ಮಲ್ಲಿದ್ದ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸುವ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು.
ಪ್ರಾಂಶುಪಾಲರಾದ ರೋಶನ್ ಡಿಸೋಜ ಐಟಿಐ ನ ವಿದ್ಯಾರ್ಥಿಗಳು ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ಬಳಸಿ ಸುಮಾರು ಒಂದು ಸಾವಿರ ಬಟ್ಟೆ ಚೀಲ ತಯಾರಿಸಿದ ಬಗ್ಗೆ ವಿವರಿಸಿ ಸಹಕಾರ ನೀಡಿದವರನ್ನು ಸ್ಮರಿಸಿದರು.


ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಐ.ಟಿ.ಐ. ಮಂಗಳೂರು ಇದರ ನಿರ್ದೇಶಕ ವಂ. ಜಾನ್ ಡಿಸೋಜ ಎಸ್.ಜೆ,ಹಸಿರು ದಳದ ಸಂಚಾಲಕರಾದ ನಾಗರಾಜ್ ಬಜಾಲ್, ಮಂಗಳೂರು ಲಯನ್ಸ್ ಕ್ಲಬ್‌ ಅಧ್ಯಕ್ಷೆ ಹೇಮ ರಾವ್ ಉಪ ಪ್ರಾಂಶುಪಾಲ ಆಲ್ವಿನ್ ಮಿನೇಜಸ್ ನೋಯೆಲ್ ಲೋಬೊ ಹಾಗೂ ವಿಲ್ಸನ್ ಎನ್ ತರಬೇತಿ ಅಧಿಕಾರಿ ಸೈಂಟ್ ಅಲೋಶಿಯಸ್ ಐಟಿಐ ಲಿಯೋ ಕ್ಲಬ್ ಅಧ್ಯಕ್ಷ ನಾಗರಾಜ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More News

Scroll to Top