ಖ್ಯಾತ ಹಿರಿಯ ಕ್ರೀಡಾ ಅಂಕಣಕಾರ,4,500 ಕ್ರೀಡಾ ಲೇಖನಗಳ ದಾಖಲೆ ಸರದಾರ, ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಅನುಭವಿ ಬರವಣಿಗೆಗಳ ಮೂಲಕ ತನ್ನದೇ ಶೈಲಿಯ ವಿಶೇಷ ಛಾಪು ಮೂಡಿಸಿದ ಪ್ರತಿಭಾವಂತ ಕ್ರೀಡಾ ಪತ್ರಕರ್ತ ಎಸ್. ಜಗದೀಶ್ಚಂದ್ರ ಅಂಚನ್‌ ಸೂಟರ್ ಪೇಟೆ ಅವರಿಗೆ  ‘ಸಾಧಕ ರತ್ನ’ ಪ್ರಶಸ್ತಿ ಪ್ರದಾನ

95.5K Views 1w ago

ಕೊಚ್ಚಿ: ಕಳೆದ ಮೂರುವರೆ ದಶಕಗಳಿಂದ ಕ್ರೀಡಾ ಪತ್ರಿಕೋದ್ಯಮದಲ್ಲಿ ತಮ್ಮ ಅನುಭವಿ ಲೇಖನಿಗಳ ಮೂಲಕ ಖ್ಯಾತರಾಗಿರುವ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಪ್ರತಿಷ್ಠಿತ *‘ಸಾಧಕ ರತ್ನ’ ಪ್ರಶಸ್ತಿ* ನೀಡಿ ಗೌರವಿಸಲಾಯಿತು.
ಕೇರಳದ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ *‘ಕೇರಳ-ಕರ್ನಾಟಕ ಜಾನಪದ ಉತ್ಸವ’* ಸಮಾರಂಭದಲ್ಲಿ ಕೇರಳ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ವಿ.ಇ. ಅಬ್ದುಲ್ ಗಫೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.


ಈ ಕಾರ್ಯಕ್ರಮವು ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಜಂಟಿ ಆಶ್ರಯದಲ್ಲಿ ನಡೆದಿತ್ತು.
ಜಗದೀಶ್ಚಂದ್ರ ಅಂಚನ್ ಅವರು ಈ ಹಿಂದೆ ಎಂಪಿ ಎಂಎಲ್ ಎ ಮೀಡಿಯಾ ಅವಾರ್ಡ್ (2013), ಸಮಾಜ ರತ್ನ ರಾಜ್ಯ ಪ್ರಶಸ್ತಿ (2014), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಮತ್ತು ಅಂತರರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಅವರು ಬೆಳಕು ಚೆಲ್ಲಿದ ಬರವಣಿಗೆ ವಿಸ್ತಾರವಾದದ್ದು. ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಸನ್ಮಾನಗಳು ಅರಸಿಕೊಂಡು ಬರಲಿ ಎಂದು  Mp MLA’s News ಶುಭ ಹಾರೈಸುತ್ತದೆ

Read More News

Scroll to Top