*ಬಂಟ್ವಾಳ:* ಗ್ರಾಮೀಣ ಜನತೆಗೆ ಭಾರೀ ಸಿಹಿ ಸುದ್ದಿ ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು *1000 ಚದರ ಮೀಟರ್ ಅಂದರೆ 25 ಸೆಂಟ್ಸ್ ವರೆಗಿನ Single Plot ವಿನ್ಯಾಸ ಅನುಮೋದನೆ, 9/11 ಮತ್ತು ಕಟ್ಟಡ ಲೈಸೆನ್ಸ್ ಅನುಮೋದನೆ ಅಧಿಕಾರವನ್ನು* ನೇರವಾಗಿ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡಿ *ಸೆಪ್ಟೆಂಬರ್ 24, 2026 ರಂದು ಅಧಿಕೃತ ಆದೇಶ (No. UDD 186 GEL 2026) ಹೊರಡಿಸಿದೆ.*
*ಆದೇಶದಲ್ಲಿ ಏನಿದೆ? – 1 of 2 ಪುಟದ ವಿವರ*
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಸೆಕ್ಷನ್ 81 ರಡಿ ಸರ್ಕಾರ ಈ ಅಧಿಕಾರವನ್ನು ವರ್ಗಾಯಿಸಿದೆ.
– ಇನ್ನು ಮುಂದೆ 1000 ಚ.ಮೀ ವರೆಗಿನ ನಿವೇಶನ ವಿನ್ಯಾಸಕ್ಕೆ MUDA/BDA/ ನಗರ ಯೋಜನಾ ಪ್ರಾಧಿಕಾರಕ್ಕೆ ಅಲೆಯಬೇಕಿಲ್ಲ.
– *ಯಾರಿಗೆ ಅಧಿಕಾರ?*
a) ಮಹಾನಗರ ಪಾಲಿಕೆ – ವಲಯ ಆಯುಕ್ತರು
b) ನಗರಸಭೆ – ಆಯುಕ್ತರು
c) ಪುರಸಭೆ/ಪಟ್ಟಣ ಪಂಚಾಯತ್ – ಮುಖ್ಯಾಧಿಕಾರಿಗಳು
d) *ಗ್ರಾಮ ಪಂಚಾಯತ್ – Senior PDO / PDO*
ಇದು ಸಾರ್ವಜನಿಕ ಅನುಕೂಲ ಮತ್ತು ಆಡಳಿತಾತ್ಮಕ ದಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಎಂದು ಸರ್ಕಾರ ತಿಳಿಸಿದೆ.
*ಬೇಬಿ ಕುಂದರ್ ಸ್ವಾಗತ – ಸರ್ಕಾರಕ್ಕೆ ಅಭಿನಂದನೆ*
ಈ ಐತಿಹಾಸಿಕ ನಿರ್ಧಾರವನ್ನು *ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್* ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
> “25 ಸೆಂಟ್ಸ್ ವರೆಗಿನ ವಿನ್ಯಾಸ ಅನುಮೋದನೆ, 9/11 ಮತ್ತು ಕಟ್ಟಡ ಲೈಸೆನ್ಸ್ ಅಧಿಕಾರವನ್ನು ಪಂಚಾಯತ್ಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಜನತೆಗೆ ದೊಡ್ಡ ಅನುಕೂಲ ಮಾಡಿಕೊಟ್ಟಿದೆ. ತಿಂಗಳುಗಟ್ಟಲೆ ಕಾಯುತ್ತಿದ್ದ ಜನರಿಗೆ ಈಗ ಸ್ಥಳೀಯವಾಗಿಯೇ ಅನುಮೋದನೆ ಸಿಗಲಿದೆ.
> ಈ ಜನಪರ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ *ಡಿ.ಕೆ ಶಿವಕುಮಾರ್*, ನಗರಾಭಿವೃದ್ಧಿ ಖಾತೆ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ *ಯು.ಟಿ ಖಾದರ್* ರವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬೇಬಿ ಕುಂದರ್ ತಿಳಿಸಿದ್ದಾರೆ.
*ಇದರಿಂದ ಲಾಭವೇನು?*
✅ ಸಣ್ಣ ನಿವೇಶನದವರಿಗೆ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಗೋಜು ಇಲ್ಲ
✅ 9/11, ಕಟ್ಟಡ ಪರವಾನಗಿ ಇನ್ನು ನಿಮ್ಮ ಪಂಚಾಯತ್ನಲ್ಲೇ
✅ ಭ್ರಷ್ಟಾಚಾರ, ವಿಳಂಬಕ್ಕೆ ಬ್ರೇಕ್
✅ ಗ್ರಾಮೀಣ ಜನರಿಗೆ ಸಮಯ ಮತ್ತು ಹಣ ಉಳಿತಾಯ.


















































































































































































