ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

109.6K Views 17 Aug 2026

ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಬೆಳಗ್ಗಿನ ಬಲಿ ಪೂಜೆಯ ಬಳಿಕ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮ ಪ್ರಾಂತ್ಯದ ಐ ಸಿ ವೈ ಎಂ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ರಾಯನ್ ಮಾರ್ಸೆಲ್ ನೊರೊನ್ಹಾ ಅವರು ದಿನದ ಮಹತ್ವವನ್ನು ವಿವರಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಕ್ರೈಸ್ತರ ಪಾತ್ರವನ್ನು ಉದಾಹರಣೆ ಸಹಿತ ವಿವರಿಸಿದರು.
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ, ಸಹಾಯಕ ಧರ್ಮ ಗುರು ವಂದನೀಯ ಫಾ . ಜೋಸೆಫ್ ಕುವೆಲ್ಲೊ, ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮ ಗುರು ವಂದನೀಯ ಫಾ. ರೋಶನ್ ಡಿ ಸೋಜಾ, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಸಿ. ಮೊಂತಿ, ಸಿ. ವಿನುತಾ, ಉಪಸ್ಥಿತರಿದ್ದರು.

Read More News

Scroll to Top