ಕ್ರೈಸ್ತ ಧರ್ಮಗುರುಗಳ ದಿನಾಚರಣೆ: ಪಾಲ್ದನೆ ಚರ್ಚ್ ನಲ್ಲಿ ಮೂವರು ಧರ್ಮಗುರುಗಳಿಗೆ ಸನ್ಮಾನ

90.1K Views 2w ago

ಮಂಗಳೂರು: ಕ್ಯಾಥೊಲಿಕರ ಚರ್ಚ್ ಧರ್ಮಗುರುಗಳ ಪೋಷಕ ಸಂತ ಜಾನ್ ಮೇರಿ ವಿಯಾನ್ನಿ ಅವರ ಸ್ಮರಣಾರ್ಥ ಆಗಸ್ಟ್ 4 ನ್ನು ಧರ್ಮಗುರುಗಳ ದಿನವಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಆಗಸ್ಟ್ 9 ರಂದು ಭಾನುವಾರ ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಬಲಿ ಪೂಜೆಯ ಸಂದರ್ಭ ಪ್ರಧಾನ ಧರ್ಮಗುರು ಸೇರಿದಂತೆ ಮೂವರು ಧರ್ಮಗುರುಗಳನ್ನು ಸನ್ಮಾನಿಸಲಾಯಿತು.
ಪ್ರಧಾನ ಧರ್ಮ ಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಅವರನ್ನು ಚರ್ಚ್ ನ ಕಾರ್ಯದರ್ಶಿ ರೋಷನ್ ಮೊಂತೇರೊ, ಚರ್ಚ್ ನಲ್ಲಿ ಡಿಯಾಕೋನ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿ ಇಂದು ಪಾಲ್ದನೆಗೆ ಅತಿಥಿಯಾಗಿ ಆಗಮಿಸಿ ಬಲಿ ಪೂಜೆಯಲ್ಲಿ ಸಹಭಾಗಿತ್ವ ವಹಿಸಿದ ವಂದನೀಯ ಫಾ. ರೋಶ್ವಿನ್ ಲೋಪೆಜ್ ಅವರನ್ನು ಚರ್ಚ್ ನ ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಅವರು ಹೂ ಗುಚ್ಛ ನೀಡಿ ಅಭಿನಂದಿಸಿದರು.

Read More News

Scroll to Top