ದ. ಕ. ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ಪಿಯುಸ್ ಎಲ್. ರೋಡ್ರಿಗಸ್ ಸ್ಪರ್ಧೆ. ವಿಸ್ತಾರ ಜನಸೇವೆಯೇ ಇವರ ಧ್ಯೇಯ, ದಣಿವರಿಯದ ನಿರಾಡಂಬರ ನಾಯಕ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಿಷ್ಠವಾಗಿಸಬಲ್ಲ ಅಜಾತ ಶತ್ರು, ಸಮರ್ಥ ಸಂಘಟಕ, ಮಾಸ್ ಲೀಡರ್, ಸೌಹಾರ್ದತೆ, ಸುದೀರ್ಘ ಪಕ್ಷ ನಿಷ್ಠೆಯೇ ಇವರ ಶಕ್ತಿ, MPMLASNEWSTV PUBLIC VIEW BY DR. ASHOK SHETTY B. N.

118.3K Views 2w ago

ಮಂಗಳೂರು: ಸಮಾಜ ಪರ ಚಿಂತಕ, ಬಡವರ ಪರ, ನ್ಯಾಯದ ಪರ ಪ್ರತಿಧ್ವನಿಯಾಗಿ ಬಾಲ್ಯದಲ್ಲೇ ನಾಯಕತ್ವದ ಗುಣಗಳನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದ ನಿಸ್ವಾರ್ಥ ಸಮಾಜ ಸೇವಾ ಮನೋಭಾವದ, ಮಾನವೀಯ ಮೌಲ್ಯಗಳಿಗೆ ಜೀವ ತುಂಬಬಲ್ಲ ಅಲ್ಪಸಂಖ್ಯಾತ ಸಮುದಾಯದ ಸೌಹಾರ್ದ ಜನನಾಯಕ, ಸಂಘಟನಾ ಚತುರ ಪಿಯುಸ್ ಎಲ್ ರೋಡ್ರಿಗಸ್ ಅವರು ಸುಮಾರು 35 ವರ್ಷಗಳ ಹಿಂದೆ ಬಂಟ್ವಾಳದ ಆಗ್ರಾರ್ ಚರ್ಚಿನ ಡಾನ್ ಬೋಸ್ಕೊ ಯುವಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಅವರ ನಾಯಕತ್ವ, ಸಂಘಟನಾ ಸಾಮರ್ಥ್ಯ ಹಾಗೂ ಜನಸೇವೆಯ ಮನೋಭಾವವನ್ನು ಗುರುತಿಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಅಂದಿನಿಂದ ಇಂದಿನವರೆಗೆ ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜನರ ಪ್ರೀತಿಯ ಜನ ನೇತಾರನಾಗಿ ಹಾಗೂ ಸಮಾಜಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಳಮಟ್ಟದ ಸಾಮಾನ್ಯ ಕಾರ್ಯಕರ್ತರಾಗಿ ಆರಂಭವಾದ ಅವರ ರಾಜಕೀಯ ಪಯಣ ಇಂದು ರಾಜ್ಯಮಟ್ಟದ ನಾಯಕತ್ವದವರೆಗೆ ಬೆಳೆದಿದೆ.


ಸಾಮಾನ್ಯ ಎಲೆಕ್ಟ್ರಿಷಿಯನ್ ಆಗಿ ಜೀವನ ಆರಂಭಿಸಿದ ಅವರು ತಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ದೃಢಸಂಕಲ್ಪದಿಂದ ಲೆವಿನ್ ಎಲೆಕ್ಟ್ರಿಕಲ್ಸ್, ಲೆವಿನ್ ಎಂಜಿನಿಯರಿಂಗ್ಸ್, ಲೆವಿನ್ ಫರ್ನಿಚರ್ಸ್ ಹಾಗೂ ಲೆವಿನ್ ಬೋರ್‌ವೆಲ್ಸ್ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸುಮಾರು 300ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ನೂರಾರು ಕುಟುಂಬಗಳ ಜೀವನಕ್ಕೆ ಆಧಾರಸ್ಥoಭವಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿಯೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಅನೇಕ ಯುವಕರಿಗೆ ಉದ್ಯೋಗ, ಸ್ವ-ಉದ್ಯೋಗ ಹಾಗೂ ಸಮಾಜಸೇವೆಯತ್ತ ಪ್ರೇರಣೆಯಾಗಿದ್ದಾರೆ.
ಸ್ಥಳೀಯ ಪಂಚಾಯತ್, ಪುರಸಭೆ, ಬಂಟ್ವಾಳ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲು–ರಾತ್ರಿ ಶ್ರಮಿಸಿ, ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬಯಸಿ ಪಿಯುಸ್ ಎಲ್ ರೋಡ್ರಿಗಸ್ ವೀಕ್ಷಕರಿಗೆ ಅರ್ಜಿ ಸಲ್ಲಿಸುತ್ತಿರುವುದು.


ಪ್ರಸ್ತುತ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಸದಸ್ಯರಾಗಿದ್ದು,ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ,ಮಾಜಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿ ,ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ (ಬೂಡಾ) ಮಾಜಿ ಅಧ್ಯಕ್ಷರಾಗಿ ಹಾಗೂ ಬಂಟ್ವಾಳ ಕಂಬಳ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸುಮಾರು 35 ವರ್ಷಗಳ ರಾಜಕೀಯ ಅನುಭವದೊಂದಿಗೆ, ಹಳ್ಳಿಯ ಸಾಮಾನ್ಯ ಕಾರ್ಯಕರ್ತರಿಂದ ದೆಹಲಿಯ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನಾಯಕರವರೆಗೆ ಉತ್ತಮ ಒಡನಾಟ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರು ಮತ್ತು ಜನಸೇವೆಯೇ ಅವರ ರಾಜಕೀಯ ಬದುಕಿನ ಮೂಲಾಧಾರವಾಗಿದೆ.
ಜನಪರ ಹೋರಾಟಗಳು, ಪಾದಯಾತ್ರೆಗಳು, ಪ್ರತಿಭಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಾವಿರಾರು ಕಾರ್ಯಕರ್ತರು ಮತ್ತು ಯುವಕರನ್ನು ಸಂಘಟಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಪಕ್ಷದ ತತ್ವ–ಸಿದ್ಧಾಂತಗಳನ್ನು ತಳಮಟ್ಟಕ್ಕೆ ತಲುಪಿಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.
ಬಂಟ್ವಾಳ ಕಂಬಳದ ಅಧ್ಯಕ್ಷರಾಗಿ ಕಂಬಳ ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ್ದು, ಅವರ ಆಹ್ವಾನವನ್ನು ಸ್ವೀಕರಿಸಿ ಅಂದಿನ ಮುಖ್ಯಮಂತ್ರಿ (ಈಗ ಮಾಜಿ ಮುಖ್ಯಮಂತ್ರಿ) ಸಿದ್ದರಾಮಯ್ಯ ಅವರು ಬಂಟ್ವಾಳ ಕಂಬಳಕ್ಕೆ ಆಗಮಿಸಿ, ಪಿಯುಸ್ ಎಲ್. ರೋಡ್ರಿಗಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಬಂಟ್ವಾಳದ ಜನರಿಗೆ, ಕಂಬಳ ಪ್ರಿಯರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಹೆಮ್ಮೆಯ ಮತ್ತು ಸ್ಮರಣೀಯ ಕ್ಷಣವಾಗಿದೆ.
ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ SIR ಫಾರ್ಮ್ ಅಭಿಯಾನ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮ–ಗ್ರಾಮ, ಮನೆ–ಮನೆಗೆ ತಲುಪಿಸುವಲ್ಲಿ ಅವರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತರು, ಯುವಕರ ತಂಡಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಾವಿರಾರು ಜನರಿಗೆ ನೆರವಾಗುವ ಮೂಲಕ ಜನಸೇವೆಗೆ ಹೊಸ ಆಯಾಮ ನೀಡಿದ್ದಾರೆ. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಅವರ ಸೇವೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದೆ.
ಸರಳತೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ, ಸಂಘಟನಾ ಸಾಮರ್ಥ್ಯ, ದೂರದೃಷ್ಟಿಯ ನಾಯಕತ್ವ ಹಾಗೂ ಜನಪರ ಕಾಳಜಿಯಿಂದ ಜನರ ಅಪಾರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ ಪಿಯುಸ್ ಎಲ್. ರೋಡ್ರಿಗಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇರಬೇಕಾದ ಸರ್ವ ಅರ್ಹತೆಗಳೊಂದಿಗೆ ಅಪಾರ ರಾಜಕೀಯ ಅನುಭವ ಹಾಗೂ ನಾಯಕತ್ವ ಗುಣ ಹೊಂದಿರುವ ಜನ ನಾಯಕರಾಗಿದ್ದಾರೆ ಎಂಬುದು ಬಂಟ್ವಾಳ ತಾಲೂಕಿನ ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ವಿಶ್ವಾಸ ಮತ್ತು ಆಶಯವಾಗಿದೆ. ಪಿಯುಸ್ ಎಲ್. ರೋಡ್ರಿಗಸ್ ಅವರು ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ತುಂಬಾ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.MPMLASNEWSTV ಈ ಬಗ್ಗೆ 7 ತಿಂಗಳ ಹಿಂದೆಯೇ ಜನಾಭಿಪ್ರಾಯವನ್ನು ಆಧರಿಸಿ ದ. ಕ. ಜಿಲ್ಲಾ ಕಾಂಗ್ರೆಸ್ ಗೆ ಪಿಯುಸ್ ಎಲ್. ರೋಡ್ರಿಗಸ್ ಅವರೇ ಜಿಲ್ಲಾಧ್ಯಕ್ಷರಾಗಲಿ. ಸಮರ್ಥ ಮತ್ತು ಅರ್ಹರೆಂದು ಪಬ್ಲಿಕ್ ವ್ಯೂ ವರದಿ ಪ್ರಕಟಿಸಿತ್ತು. ಪಿಯುಸ್ ಎಲ್
ರೋಡ್ರಿಗಸ್ ಅವರು ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗುವುದರಲ್ಲಿ ಅನುಮಾನವೇ ಇಲ್ಲ.ಅವರಿಗೆ ಆಲ್ ದಿ ಬೆಸ್ಟ್.

Read More News

Scroll to Top