ಮಂಗಳೂರು ಐಎಎಸ್‌ನಿಂದ ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಯ ಉತ್ತರ ಕೀ ಬಿಡುಗಡೆ

109.8K Views 1w ago

ಮಂಗಳೂರು, ಆ. 2: ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ಲಿಖಿತ ಪರೀಕ್ಷೆ ಭಾನುವಾರ ನಡೆದ ಬೆನ್ನಲ್ಲೇ, ನಗರದ ಮಂಗಳೂರು ಐಎಎಸ್ ಸಂಸ್ಥೆಯು ಪರೀಕ್ಷೆಯ ಅನಧಿಕೃತ ಉತ್ತರ ಕೀ (Answer Key) ಬಿಡುಗಡೆ ಮಾಡಿದೆ.

ಪರೀಕ್ಷೆ ಮುಕ್ತಾಯಗೊಂಡ ತಕ್ಷಣವೇ ಸಂಸ್ಥೆಯ ವಿಷಯ ತಜ್ಞರು ಪ್ರಶ್ನೆಪತ್ರಿಕೆಯನ್ನು ವಿಶ್ಲೇಷಿಸಿ ಉತ್ತರ ಕೀಯನ್ನು ಸಿದ್ಧಪಡಿಸಿದ್ದು, ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಂಡು ಸಂಭವನೀಯ ಅಂಕಗಳನ್ನು ಅಂದಾಜಿಸಿಕೊಳ್ಳಲು ಇದು ನೆರವಾಗಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪರೀಕ್ಷಾರ್ಥಿಗಳು ಮಂಗಳೂರು ಐಎಎಸ್ ಕ್ಯಾಂಪಸ್‌ಗೆ ಭೇಟಿ ನೀಡಿ ಯಾವುದೇ ಶುಲ್ಕವಿಲ್ಲದೆ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ, ಸಂಸ್ಥೆಯ ಅಧ್ಯಾಪಕರು ಪ್ರಶ್ನೆಪತ್ರಿಕೆ ಕುರಿತು ಅಭ್ಯರ್ಥಿಗಳ ಸಂದೇಹಗಳಿಗೆ ಸ್ಪಷ್ಟನೆ ನೀಡಲಿದ್ದಾರೆ.

ಈ ಕುರಿತು ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ಕುಮಾರ್ ಎಸ್. ಮಾತನಾಡಿ, “ಪರೀಕ್ಷಾರ್ಥಿಗಳಿಗೆ ತ್ವರಿತ ಶೈಕ್ಷಣಿಕ ನೆರವು ನೀಡುವ ಉದ್ದೇಶದಿಂದಲೇ ಪರೀಕ್ಷೆ ಮುಗಿದ ಕೂಡಲೇ ಉತ್ತರ ಕೀ ಬಿಡುಗಡೆ ಮಾಡಲಾಗಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಸಾಧನೆಯನ್ನು ತಕ್ಷಣವೇ ಮೌಲ್ಯಮಾಪನ ಮಾಡಿಕೊಂಡು ನೇಮಕಾತಿಯ ಮುಂದಿನ ಹಂತಗಳಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಲು ಅನುಕೂಲವಾಗುತ್ತದೆ,” ಎಂದು ತಿಳಿಸಿದರು.

ನಾಗರಿಕ ಸೇವೆಗಳು, ಪೊಲೀಸ್, ಬ್ಯಾಂಕಿಂಗ್ ಹಾಗೂ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಮಂಗಳೂರು ಐಎಎಸ್ ಸಂಸ್ಥೆಯು ಗುಣಮಟ್ಟದ ಬೋಧನೆ, ಪರಿಣತ ಬೋಧಕ ವರ್ಗ ಹಾಗೂ ನಿಯಮಿತ ಮಾದರಿ ಪರೀಕ್ಷೆಗಳ ಮೂಲಕ ಸಾವಿರಾರು ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದೆ.

ಉತ್ತರ ಕೀ ಪರಿಶೀಲನೆಗೆ ಸಂಪರ್ಕ:

ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವೀಸಸ್
ಸಂದೇಶ ಫೌಂಡೇಶನ್, ಪ್ರೇಮನಗರ, ಬಜ್ಜೋಡಿ, ಮಂಗಳೂರು – 575005.
ದೂರವಾಣಿ: 70221 85544

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top