Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿ ರಾಜೇಶ್ ಶೆಟ್ಟಿ ಆಯ್ಕೆ.

115.4K Views 16 Jul 2026

ಮಂಗಳೂರು-Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಸೀನಿಯರ್ ಡಿವಿಷನಲ್ ಕಂಟ್ರೋಲರ್ ರಾಜೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.


ಅವರು ಕೆ.ಎಸ್.ಆರ್.ಟಿ.ಸಿ ಗೆ ನೇಮಕಾತಿಗೊಳ್ಳುವ ಮುನ್ನ ಬೆಂಗಳೂರಲ್ಲಿ ಹತ್ತು ವರ್ಷಗಳ ಕಾಲ ಹೈಕೋರ್ಟ್ ಲಾಯರ್ ಆಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನವರಾಗಿರುವ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ (KSRTC Mangalore Senior Divisional controller(Dc)ಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವನ್ನು ಅಭಿವೃದ್ಧಿ ಪಥದಲ್ಲಿ ತಂದು ನಿಲ್ಲಿಸಿದ್ದಲ್ಲದೆ, ರಾಜ್ಯದಲ್ಲೇ ಮಾದರಿ ವಿಭಾಗವೆಂಬ ಜನ ಮನ್ನಣೆಗೆ ಪಾತ್ರವಾಗಿಸಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕ್ಷಿಪ್ರಗತಿಯಲ್ಲಿ ಸುಸಜ್ಜಿತ ಸಕಾಲಿಕ ಸೇವೆ, ಭ್ರಷ್ಟಾಚಾರ ರಹಿತ ಆಡಳಿತ, ದಕ್ಷ, ಪ್ರಾಮಾಣಿಕ, ಜನಸ್ನೇಹಿ ಅಧಿಕಾರಿಯಾಗಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಂಗಳೂರು ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕಲ್ ಬಸ್ಸುಗಳನ್ನು ತರಿಸುವ ಯೋಜನೆ ಅವರದು.ಕಳೆದ 5 ವರ್ಷಗಳಿಂದ ಅವರು ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿಯಾಗಿ ಸ್ವಚ್ಛ ಮತ್ತು ಅಭಿವೃದ್ಧಿ ಪರ ಆಡಳಿತ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ಜನ ಮಾಹಿತಿ, ಸಾರ್ವಜನಿಕ ಅಭಿಪ್ರಾಯಗಳನ್ನು ಆಧರಿಸಿ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿ ರಾಜೇಶ್ ಶೆಟ್ಟಿ ಅವರನ್ನು Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಆಯ್ಕೆ ಮಾಡಲಾಗಿದೆ. ನೇರ ನಡೆ ನುಡಿ, ಸರಳ ಸಜ್ಜನಿಕೆಯ ಉತ್ತಮ ಅಧಿಕಾರಿಯಾಗಿರುವ ರಾಜೇಶ್ ಶೆಟ್ಟಿ ಅವರು ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ, ಮಂಗಳೂರಿನ ಎಸ್ ಡಿ ಯಂ ಲಾ ಕಾಲೇಜ್ ನಲ್ಲಿ ಕಾನೂನು ಪದವಿ ಓದಿದ್ದಾರೆ. Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಆಯ್ಕೆಯಾಗಿರುವ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರನ್ನು Mp MLA’s news ಸಂಪಾದಕ ಮತ್ತು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ. ಬಿ. ಎನ್. ಅವರು ಕೆ.ಎಸ್.ಆರ್.ಟಿ.ಸಿ ಡಿಸಿ ಅವರ ಮಂಗಳೂರು ಕಚೇರಿಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. Mp MLA’s ನ್ಯೂಸ್ 14ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್ ಹಾಲ್ ನಲ್ಲಿ ನವೆಂಬರ್ 24 ರ ಮಂಗಳವಾರ ಸಂಜೆ 4ಗಂಟೆ ಯಿಂದ 9 ರ ತನಕ ನಡೆಯಲಿದ್ದು, ಅಂದು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರಿಗೆ ಬೆಸ್ಟ್ ಆಫೀಸರ್ಸ್ ಅವಾರ್ಡ್ ನೀಡಲಾಗುವುದೆಂದು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ತಿಳಿಸಿದ್ದಾರೆ

Read More News

Scroll to Top