ದಾಸ್ ಪ್ರಮೋಷನ್ಸ್: ನವೀಕೃತ ಕಚೇರಿ ಉದ್ಘಾಟನೆ

113.6K Views 14 Jul 2026

ಮಹಾನಗರ: ನಗರದ ದಾಸ್ ಪ್ರಮೋಷನ್ಸ್ ಇದರ ನವೀಕೃತ ಕೇಂದ್ರ ಕಚೇರಿಯ ಉದ್ಘಾಟನೆಯು ಕಂಕನಾಡಿಯ ಎಂಪೋರಿಯಂ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಯು.ಟಿ. ಖಾದರ್ ಅವರು ಕಚೇರಿ ಉದ್ಘಾಟಿಸಿ, ಸಂಸ್ಥೆಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿ ಶುಭ ಹಾರೈಸಿದರು. ಶ್ರೀಕ್ಷೇತ್ರ ಕಟೀಲು ಮುಖ್ಯ ಅರ್ಚಕ ಕಮಲಾದೇವಿ ಪ್ರಸಾದ್ ಅಸ್ರಣ್ಣ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಡೈಜಿ ವರ್ಲ್ಡ್ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ನಾಮಫಲಕ ಅನಾವರಣಗೊಳಿಸಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘಿಸಿದರು.


ಖ್ಯಾತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ ಕಾಮತ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಪಣೋಲಿ ಬೈಲು ಭಂಡಾರ ಮನೆಯ ರಮೇಶ್, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಪಂಜಿಕಲ್ಲು, ಸೌಂದರ್ಯ ರಮೇಶ್, ಸುರೇಶ್ ನಾವೂರ್, ಬಿಜೆಪಿ ಜಿಲ್ಲಾ ಮುಖಂಡೆ ಧನಲಕ್ಷ್ಮಿ ಗಟ್ಟಿ ಮಹಾಬಲ ಕೊಟ್ಟಾರಿ, ನಾಗೇಂದ್ರ ಕುಮಾರ್, ಕುದ್ರೋಳಿ ಗಣೇಶ್, ಡಾ| ಅಣ್ಣಯ್ಯ ಕುಲಾಲ್, ದಯಾನಂದ್ ಅಡ್ಯಾರ್, ಜಯರಾಜ್ ಪ್ರಕಾಶ್ ಮೊದಲಾದವರು ಶುಭ ಹಾರೈಸಿದರು.

Read More News

Scroll to Top