ರೆಡ್‌ಕ್ರಾಸ್‌ನಿಂದ ಪರಿಸರ ದಿನಾಚರಣೆ

119.7K Views 9 Jun 2026

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೆಡ್‌ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ರಕ್ತದಾನ ಶಿಬಿರ, ವಿಪತ್ತ ನಿರ್ವಹಣೆ, ಆರೋಗ್ಯ ಜಾಗೃತಿ ಸಹಿತ ವಿವಿಧ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೆಡ್ ಕ್ರಾಸ್ ಸೊಸೈಟಿ ಪರಿಸರ ಸಂರಕ್ಷಣೆಗೂ ವಿಶೇಷ ಆದ್ಯತೆ ನೀಡಿದೆ. ಎಂದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ನಾಯಕ್, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಆಡಳಿತ ಸಮಿತಿ ನಿರ್ದೇಶಕರಾದ
ಪಿ.ಬಿ.ಹರೀಶ್ ರೈ, ಡಾ.ಸುಮನ .ಬಿ., ರಾಘವೇಂದ್ರ ರಾವ್, ಕಚೇರಿ ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

Read More News

Scroll to Top