ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯದ 2026-27 ನೇ ವರ್ಷಕ್ಕೆ ಅಧ್ಯಕ್ಷರಾಗಿ ಸತೀಶ್ ಕುಮಾರ್ ಅಂಚನ್ ಬಜಾಲ್, ಪ್ರಧಾನ ಕಾರ್ಯದರ್ಶಿ ರೋಶನ್ ಕೋಟ್ಯಾನ್ ಪುನರಾಯ್ಕೆ.

95.5K Views 1d ago

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಬೈಲ್ ನ ಪುಳಿ ರೆಸ್ಟೊರೇಂಟ್ ನ ಪ್ಲೆಕ್ಸೊನ್ ಅಡಿಟೋರಿಯಂನಲ್ಲಿ ಸತೀಶ್ ಕುಮಾರ್ ಅಂಚನ್ ಬಜಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖ್ಯಾತ ಯಕ್ಷಗಾನ ಭಾಗವತರಾದ ರೋಶನ್ ಕೋಟ್ಯಾನ್ ರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಗಿ ವೇದಿಕೆಯಲ್ಲಿದ್ದ
ಎಲ್ಲಾ ಗಣ್ಯರು ದೀಪ ಬೆಳಗಿಸಿ ಸಭೆ ಹಾಗು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಸಂಘದ ಪ್ರಧಾನ ಕಾರ್ಯದರ್ಶಿ ವರದಿ ವಾಚಿಸಿದರು, ಖಜಾಂಚಿ ಹರೀಶ್ ಪೂಜಾರಿ ತೋನ್ಸೆ ಲೆಕ್ಕಪತ್ರ ಮಂಡಿಸಿದರು ನಂತರ ವರದಿ ಹಾಗು ಲೆಕ್ಕಪತ್ರ ಮೇಲೆ ಚರ್ಚೆ, ಪ್ರಶ್ನೋತ್ತರ ನಡೆಯಿತು ತದ ನಂತರ ಸಂಘದ ಹಿರಿಯರು ಮತ್ತು ಗೌರವಾಧ್ಯಕ್ಷರಾದ ಸದಾಶಿವ ಪೂಜಾರಿ ಯವರು ನೂತನ ಪದಾಧಿಕಾರಿ ಹಾಗು ಕಾರ್ಯಕಾರಿ ಸಮಿತಿಯನ್ನು ರಚಿಸುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರಲ್ಲದೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು . ವೇದಿಕೆಯಲ್ಲಿದ್ದ ಇನ್ನೋರ್ವ ಗೌರವಾಧ್ಯಕ್ಷರಾದ ಯುವ ಉದ್ಯಮಿ ಯೋಗೇಶ್ ಪೂಜಾರಿ ಕಟಪಾಡಿ ಸಭೆಯನ್ನು ಉದ್ದೇಶಿಸಿ ಶುಭ ಕೋರಿ ಮಾತನಾಡಿ ನೂತನ ಸಮಿತಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.
ಅಧ್ಯಕ್ಷರು 2026-27 ವರ್ಷದ ಕಾರ್ಯಕ್ರಮ ಯೋಜನೆಗಳ ಬಗ್ಗೆ ವಿವರವಾಗಿ ಮಾತನಾಡಿದ್ದಲ್ಲದೆ ಸದಸ್ಯರಿಗೆ ಸಂಘದ ಮಹತ್ವ ಮತ್ತು ಕಾರ್ಯಕ್ರಮದ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರೀಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಸಭೆಯ ನಂತರ ಸದಸ್ಯರಿಂದ ಹಾಗು ಮಕ್ಕಳಿಂದ ಹಾಡು, ನ್ರತ್ಯ ಸಾಂಸ್ಕತಿಕ ಕಾರ್ಯಕ್ರಮದ ನಡುವೆ ರಾಫಲ್ ಟಿಕೆಟ್ ಡ್ರಾ ವನ್ನು ಮನೋಹರ ಅಮೀನ್ ಮತ್ತು ದಕ್ಷಯ್ ಮಾಡಿದರು.
ಸಭೆಯ ಪ್ರಾರಂಭದಿಂದ ಕೊನೆಯವರೆಗೆ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರೊಜೆಕ್ಟರ್ ಮೂಲಕ ಪ್ರವೀಣ್ ಪೂಜಾರಿ ತೋರಿಸಿದರು ಕೊನೆಗೆ,ಸಹ ಕಾರ್ಯದರ್ಶಿ ರಾಜೇಶ್ ತೋನ್ಸೆ ವಂದಿಸಿದರು, ಕಾರ್ಯಕ್ರಮವನ್ನು ಸಂಘಟನ ಕಾರ್ಯದರ್ಶಿ ಹಾಗು ಸಂಯೋಜಕಿ ಶ್ರೀಮತಿ ಚೇತನ ಪೂಜಾರಿ ನಿರ್ವಹಿಸಿದರು.
ಗೌರವ ಅಧ್ಯಕ್ಷರು: ಸದಾಶಿವ ಪೂಜಾರಿ ಮತ್ತು ಯೋಗೇಶ್ ಪೂಜಾರಿ ಕಟಪಾಡಿ.
ಅಧ್ಯಕ್ಷರು: ಸತೀಶ್ ಕುಮಾರ್ ಅಂಚನ್ ಬಜಾಲ್.
ಉಪಾಧ್ಯಕ್ಷರು: ವಿಶ್ವನಾಥ್ ಸುವರ್ಣ ಮತ್ತು ಸುಂದರದಾಸ್ ಪೂಜಾರಿ.
ಪ್ರಧಾನ ಕಾರ್ಯದರ್ಶಿ: ರೋಶನ್ ಕೋಟ್ಯನ್.
ಸಹ ಕಾರ್ಯದರ್ಶಿ: ರಾಜೇಶ್ ತೋನ್ಸೆ, ಮನೋಹರ ಅಮೀನ್.
ಖಜಾಂಚಿ: ಹರೀಶ್ ಪೂಜಾರಿ ತೋನ್ಸೆ.
ಸಹ ಖಜಾಂಚಿ: ಶ್ರೀಮತಿ ಪ್ರೀತ ಎ ಬಂಗೇರ.
ಮಖ್ಯ ಸಂಯೋಜಕರು: ಶ್ರೀಮತಿ ಚೇತನ ಎಸ್ ಪೂಜಾರಿ.
ಸಹ ಸಂಯೋಜಕರು: ಅಜೀತ್ ಸನಿಲ್ ಕಟಪಾಡಿ.
ಸಾಂಸ್ಕ್ರತಿಕ ಕಾರ್ಯದರ್ಶಿ: ಯಶವಂತ್ ಸನಿಲ್ .
ಸಹ ಸಾಂಸ್ಕ್ರತಿಕ ಕಾರ್ಯದರ್ಶಿಗಳು: ಸಂದೀಪ್ ಬಜಾಲ್, ದಕ್ಷಯ್ ಪೂಜಾರಿ.
ಕ್ರೀಡಾ ಕಾರ್ಯದರ್ಶಿ: ದೇವಾಂಗ್ ಸುವರ್ಣ.
ಸಹ ಕ್ರೀಡಾ ಕಾರ್ಯದರ್ಶಿಗಳು: ಗಣೇಶ್ ಪಾಲನ್ ಮತ್ತು ಪ್ರಮೋದ್ ಪೂಜಾರಿ.
ಮಾಧ್ಯಮ ಸಮಿತಿ ಮುಖ್ಯಸ್ಥರು: ಪುಷ್ಪರಾಜ್ ಪೂಜಾರಿ ಗಡಿಯಾರ್.
ಕಾರ್ಯಕಾರಿ ಸಮಿತಿ ಸದಸ್ಯರು: ಅರುಣ್ ಬಂಗೇರ, ಉಮೇಶ್ ಬಿಲ್ಲವ, ಶ್ರೀ ಪ್ರವೀಣ್ ಪೂಜಾರಿ, ಶ್ರೀಮತಿ ವಿಧ್ಯಾಶ್ರೀ ತೋನ್ಸೆ, ಶ್ರೀಮತಿ ಭಾಗ್ಯಜ್ಯೋತಿ ತೋನ್ಸೆ, ಶ್ರೀಮತಿ ಸುನೀತ ಸುವರ್ಣ, ಶ್ರೀಮತಿ ಸುಚಿತ್ರ ಬಜಾಲ್ , ಶ್ರೀಮತಿ ದೀಕ್ಷಾ ಕೋಟ್ಯಾನ್, ಶ್ರೀಮತಿ ದಿವ್ಯ ಅಮೀನ್, ಕುಮಾರಿ ಸುಹಾಸಿನಿ ಬಿಲ್ಲವ., ವೇದಾವತಿ ಪೂಜಾರಿ.
ಮಾರ್ಗದರ್ಶಿ ಮಂಡಲಿ: ಸುದರ್ಶನ್ ಡಿ ಪೂಜಾರಿ, ಶೇಖರ್ ಕೋಟ್ಯಾನ್, ಆನಂದ ಪೂಜಾರಿ, ಜಯ ಸುವರ್ಣ.
ಸಾಮಾಜಿಕ ಮಾಧ್ಯಮ ಸಮಿತಿ*: ಪ್ರವೀಣ್ ಪೂಜಾರಿ, ಶ್ರೀಮತಿ ಸುನೀತ ಸುವರ್ಣ, ಪ್ರಮೋದ್ ಪೂಜಾರಿ, ಅಕ್ಷಾನ್ ಪಾಲನ್.
ಸಾಂಸ್ಕ್ರತಿಕ ಸಮಿತಿ:: ಅಂಕಿತ್ ಪೂಜಾರಿ ಎರ್ಮಾಲ್, ಸಂದೀಪ್ ಸಾಲ್ಯನ್, ಅವನೀತ್ ಪೂಜಾರಿ, ರಾಜೇಶ್ ಪಡುಬಿದ್ರೆ, ಸುರೇಶ್ ಸುವರ್ಣ, ಶ್ರುಜನ್ ಪೂಜಾರಿ, ಕುಮಾರಿ ನಮಿತ ಸಾಲ್ಯನ್.
ಕ್ರೀಡಾ ಸಮಿತಿ: ಸಂತೋಷ್ ಜೆ ಡಿ ಪೂಜಾರಿ, ಪ್ರತೀಕ್ ಪೂಜಾರಿ, ಮಹೇಂದ್ರ ಬಿಲ್ಲವ, ದೀಕ್ಷೀತ್ ಕೋಟ್ಯಾನ್, ಶೀಮತಿ ದೀಕ್ಷ ಆರ್ ಕೋಟ್ಯಾನ್, ಕುಮಾರಿ ಸುಹಾಸಿನಿ ಬಿಲ್ಲವ.
ಆಹಾರ ವ್ಯವಸ್ಥೆ ಸಮಿತಿ: ಶ್ರೀಮತಿ ಮಮತ ಪೂಜಾರಿ, ಶ್ರೀಮತಿ ವೇದಾವತಿ ಪೂಜಾರಿ, ಆನಂದ ಪೂಜಾರಿ, ವಿಶ್ವನಾಥ್ ಸುವರ್ಣ ಮತ್ತು ಸುಂದರದಾಸ್ ಪೂಜಾರಿ, ಸದಾಶಿವ ಪೂಜಾರಿ.

Read More News

Scroll to Top