ಕನ್ನಡ ಝೇಂಕಾರ ಎಂದರೆ ನಮ್ಮ ಕನ್ನಡ ಭಾಷೆಯ ಮಧುರ ಧ್ವನಿಯ ಪ್ರತಿಫಲನ – ಪ್ರೊ. ಹೆಚ್ ಎನ್ ಆಂಜನೇಯಪ್ಪ.

76.9K Views 19h ago

ಕನ್ನಡದ ಸೊಗಸು ಶ್ರೀಮಂತಿಕೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಕನ್ನಡವು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಅಸ್ತಿತ್ವ ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಪ್ರತೀಕವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆ ಅನೇಕ ಕವಿಗಳು ಸಾಹಿತ್ಯ ಸಾಹಿತ್ಯ ಕರು ಮತ್ತು ಚಿಂತಕರಿಂದ ಬೆಳಗಿದೆ. ಹಳೆಗನ್ನಡ ನಡುಗನ್ನಡ ಮತ್ತು ಹೊಸಗನ್ನಡ ಕವಿಗಳ ಬಗ್ಗೆ ಮಾತನಾಡಿದರು ಈ ಕಾರ್ಯಕ್ರಮವು ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕನ್ನಡದ ಬಗ್ಗೆ ಆಸಕ್ತಿ ಗೌರವ ಮತ್ತು ಅಭಿಮಾನವನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊಫೆಸರ್ ಹೆಚ್ ಎನ್ ಆಂಜನೇಯಪ್ಪ ಹೇಳಿದರು.

ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭೀವೃದ್ದಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ 25-04- 2026 ರಂದು ಆಯೋಜಿಸಿದ್ದ ಕನ್ನಡ ಝೇಂಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ತಂತ್ರಜ್ಞಾನದಲ್ಲಿ ನಾವು ಇಂಗ್ಲಿಷ್ ಮತ್ತು ಇತರ ಭಾಷೆಗಳೊಂದಿಗೆ ಮುಂದೆ ಸಾಗುತ್ತಿದ್ದರು ತಮ್ಮ ತಾಯಿ ಭಾಷೆಯನ್ನು ಮರೆಯಬಾರದು. ಕನ್ನಡವನ್ನು ದಿನನಿತ್ಯ ಜೀವನದಲ್ಲಿ ಬಳಸುವುದರಿಂದ ಮಾತ್ರ ಅದು ಜೀವಂತವಾಗಿರುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ನಮ್ಮ ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ವೇದಿಕೆಯಾಗಿ ಈ ಕಾರ್ಯಕ್ರಮ ಕಾರ್ಯ ನಿರ್ವಹಿಸುತ್ತದೆ. ಹಾಡು ನೃತ್ಯ ಕವನ ನಾಟಕ ಇತ್ಯಾದಿಗಳ ಮೂಲಕ ಕನ್ನಡದ ವೈವಿಧ್ಯತೆಯನ್ನು ನಾವು ಕಾಣಬಹುದು. ಇಂದಿನ ತಂತ್ರಜ್ಞಾನದಲ್ಲಿ ನಾವು ನಮ್ಮ ಭಾಷೆಯನ್ನು ಮರೆಯದೆ ಅದನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯ ಮನೆಗಳಲ್ಲಿ ಶಾಲೆಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ನಾವು ಅದನ್ನು ಜೀವಂತವಾಗಿಡಬಹುದು ಎಂದ ಅವರು ಇಂತಹ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಿದ ರಾಣಿ ಪುಷ್ಪಲತಾ ದೇವಿ ಸಾರಥ್ಯದ KSSAP ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತನ್ನ ವಿಶ್ರಾಂತ ಜೀವನದಲ್ಲೂ ಶಾಲಾ ಮಕ್ಕಳ ಬುದ್ಧಿಮತ್ತೆಯನ್ನು ವೃದ್ಧಿಸಲು 1400ಕ್ಕೂ ಹೆಚ್ಚು ಉಪನ್ಯಾಸ ನೀಡಿರುವ /ನೀಡುತ್ತಿರುವ ಬೆಂಗಳೂರಿನ ಓಂಕಾರಪ್ರಿಯ ಬಾಗೇಪಲ್ಲಿ ಅವರಿಗೆ KSSAP ಕನ್ನಡ ಕಣ್ಮಣಿ ಪ್ರಶಸ್ತಿ ಹಾಗೂ ಮಂಗಳೂರಿನ ಸೌಂಡ್ ಇಂಜಿನಿಯರ್ ಗಣೇಶ್ ಬಂಗೇರ ಇವರಿಗೆ ಸೂಪರ್ ಸೌಂಡ್ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ಅಕ್ಷಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಮೂಗಪ್ಪ ಗಾಳೇರ, ಆಕೃತಿ ಐ.ಎಸ್.ಭಟ್, ತನ್ಸೀರಾ ಆತೂರು, ಸುಲೋಚನಾ ನವೀನ್ ಕೊಟ್ಟಾರ, ನಿರೀಕ್ಷಿತಾ ಮಂಗಳೂರು, ರಶ್ಮಿ ಸನಿಲ್, ಸುಖಲತ ಶೆಟ್ಟಿ. ರೇಖಾ ಸುದೇಶ್ ರಾವ್, ವ. ಉಮೇಶ್ ಕಾರಂತ, ಅನಿತಾ ಶೆಣೈ, ಎಂ.ಎ. ಮುಸ್ತಫಾ ಬೆಳ್ಳಾರೆ, ಓಂಕಾರಪ್ರಿಯ ಬಾಗೇಪಲ್ಲಿ, ಮುಂತಾದ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಮ.ನ.ಪಾ. ನಗರ ಯೋಜನಾಧಿಕಾರಿ ನಾಗೇಂದ್ರ ಎನ್. ಕವಿ ಬರಹಗಾರ, ಶಿವಪ್ರಸಾದ್ ಕೊಕ್ಕಡ, ಸಾಮಾಜಿಕ ಚಿಂತಕ ರಂಜನ್ ಕುಮಾರ್, ಸಾಮಾಜಿಕ ಚಿಂತಕ ಗಂಗಾಧರ್ ಗಾಂಧೀ ಭಾಗವಹಿಸಿದ್ದರು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಡಿನಾಡು ಸಾಂಸ್ಕೃತಿಕ ಕಲಾ ತಂಡ ಇವರಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ಗಾಯನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧೀ ಬಳಗವು ಬೆಳ್ಳಿ ತೆರೆಯ ಬಂಗಾರದ ಗೀತೆಗಳನ್ನು ಸಾದರ ಪಡಿಸಿತು.

ಕನ್ನಡ ಶಿಕ್ಷಕಿ ರೇಖಾ ಸುದೇಶ್ ರಾವ್ ಒಂದೇ ಮಾತರಂ ಗೀತೆ ಹಾಡಿ ಪ್ರಾರ್ಥಿಸಿದರು.
ರಶ್ಮಿ ಸನಿಲ್ ನಿರೂಪಿಸಿದರು

Read More News

Scroll to Top