ಸಂದೀಪ್ ವಾಗ್ಲೆ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀಳ್ಕೊಡುಗೆ

98.3K Views 3d ago

ಮಂಗಳೂರು-ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಕನ್ನಡಪ್ರಭ ದೈನಿಕದ ಮಂಗಳೂರು ಪ್ರಧಾನ ವರದಿಗಾರ ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಸಂದೀಪ್ ವಾಗ್ಲೆ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಏಪ್ರಿಲ್ 28ರಂದು ಅಧ್ಯಕ್ಷ ಪುಷ್ಪರಾಜ್ ಬಿ. ಎನ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು,ಮಾಧ್ಯಮ ಮಿತ್ರರ ಉಪಸ್ಥಿತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್.,ಪತ್ರಿಕಾಭವನ ಟ್ರಸ್ಟ್ ನ ಅಧ್ಯಕ್ಷ ಅನ್ನು ಮಂಗಳೂರು,ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರಿಫ್ ಪಡುಬಿದ್ರಿ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್,ಕಾರ್ಯದರ್ಶಿ ಸಿದ್ದಿಕ್ ನೀರಾಜೆ,ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್,ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ ಬಿ.ಎನ್,ಸುರೇಶ್ ಪಳ್ಳಿ, ಕಿರಣ್ ಸಿರ್ಸಿಕರ್, ಲಕ್ಷ್ಮೀ ನಾರಾಯಣ ರಾವ್,ಹರೀಶ್ ಕೆ. ಅದ್ದೂರು, ಅಭಿಷೇಕ್ ಹೆಚ್.ಎಸ್ , ಜಯಶ್ರೀ,ಮಾಧ್ಯಮ ಮಿತ್ರರಾದ ವಿನೋದ್ ಕುಮಾರ್ ಕೆ, ನಮ್ಮ ಟಿವಿಯ ಪ್ರಸನ್ನ ಪೂಜಾರಿ,ಕರಾವಳಿ ತರಂಗಿಣಿ ಪತ್ರಿಕೆಯ ಪ್ರೀತಮ್ ರೈ, ಲಲಿತಶ್ರೀ ಮೊದಲಾದವರು ಉಪಸ್ಥಿತರಿದ್ದರು. ಸಂದೀಪ್ ವಾಗ್ಲೆಯವರು ಮಂಗಳೂರು ವಿ. ವಿ.ಯಿಂದ ಪತ್ರಿಕೋದ್ಯಮದಲ್ಲಿ ಪಿಹೆಚ್ ಡಿ ಪದವಿ ಪಡೆದವರು. ಕಳೆದ 22 ವರ್ಷಗಳಲ್ಲಿ ಮಂಗಳೂರು ಪತ್ರಿಕೋದ್ಯಮದಲ್ಲಿ ಅಧ್ಯಯನಶೀಲ ಪತ್ರಕರ್ತರಾಗಿ ಗುರುತಿಸಿಕೊಂಡವರು. ಪ.ಗೋ .ಪ್ರಶಸ್ತಿ ಗೆ ಪಾತ್ರರಾಗಿರುವ ಅವರು ಉತ್ತಮ ಪತ್ರಕರ್ತರೆಂದು ಅಧ್ಯಕ್ಷ ಪುಷ್ಪರಾಜ್ ಬಿ. ಎನ್.ಹೇಳಿದರು. ಆರಿಫ್ ಪಡುಬಿದ್ರಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಾ ಗೌರವಿಸುವ ಸಂದೀಪ್ ವಾಗ್ಲೆಯವರು ಭವಿಷ್ಯ ದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ.ಅವರಿಗೆ ಶುಭವಾಗಲೆಂದು
mpmlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭ ಹಾರೈಸಿದ್ದಾರೆ.

Read More News

Scroll to Top