ನಿತ್ಯಶ್ರೀ ಬಿ.ವಿ.ಗೆ ಪಿಎಚ್ ಡಿ ಪದವಿ

103.6K Views 13 Apr 2026

ಮಂಗಳೂರು: ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿತ್ಯಶ್ರೀ ಬಿ.ವಿ. ಇವರು ಮಂಗಳೂರಿನ ಆಯ್ದ ಶಾಲೆಗಳ ಹದಿಹರೆಯದ ಬಾಲಕಿಯರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಅರಿವು, ದೃಢವಾದ ನಡವಳಿಕೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಸಾಮರ್ಥ್ಯ
ವರ್ಧನಾ ಕಾರ್ಯಕ್ರಮದ ಪರಿಣಾಮಕಾರಿತ್ವದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಯೆನೆಪೋಯ ಪರಿಗಣಿತ ವಿ.ವಿ. ಪಿಎಚ್ ಡಿ ಪದವಿ ನೀಡಿದೆ. ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರೈಸಿದ್ದರು. ಯೆನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್
ಅಧಿಕಾರಿಯಾಗಿರುವ ನಿತ್ಯಶ್ರೀ ಬಿ.ವಿ. ಇವರು ಸುಳ್ಯದ ನಿವೃತ್ತ ಸರ್ವೆ ಮೇಲ್ವಿಚಾರಕ ವಿಠಲ ಬಿ.ಕೆ.- ರುಕ್ಮಿಣಿ ಬಿ.ವಿ. ದಂಪತಿ ಪುತ್ರಿ .ಗಣೇಶ್ ಮಾಣಿಬೆಟ್ಟು ಅವರ ಪತ್ನಿ.

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top