ಮಂಗಳೂರು- ನಾಗರಿಕ ಸೇವಾ ಸಮಿತಿ.ರಿ.ಅಂಬೇಡ್ಕರ್ ನಗರ, ಕರಂಬಾರು ಇದರ 12 ನೇ ವಾರ್ಷಿಕೋತ್ಸವವು ಕರಂಬಾರಿ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅವರು ಮಾತನಾಡುತ್ತಾ,ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಯನ್ನು ಪ್ರಶಂಸಿದರು. ಸಮಾಜಕ್ಕೆ ಮಾದರಿ ಸಂಘ ಎಂದು ಹೇಳಿದರು. ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು . ಮಾತನಾಡಿದ ವೇಣುಗೋಪಾಲ್ ಶೆಟ್ಟಿ ರವರು ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ನಾಗರಿಕ ಸೇವಾ ಸಮಿತಿಯು ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ಮಾಡಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದೆಂದು ಕೊಂಡಾಡಿದರು.
ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ದಿನೇಶ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಮಳವೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಬೋಧಿ, ಎಸ್ ಡಿಯಂಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ವಾಸು ಪೇಜಾವರ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು. ಕುಮಾರಿ ಕೃತಿ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು, ವೀಣಾ ಸಾಲ್ಯಾನ್ ಪ್ರಾಸ್ತವಿಕ ಮಾತನಾಡಿದರು, ವಿದ್ಯಾ ಮಿಥುನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.





















































































































































































