BREAKING FLASH NEWS. ನಾಳೆ ಪಾಕಿಸ್ತಾನದಲ್ಲಿ ಅಮೇರಿಕಾ,ಇಸ್ರೇಲ್- ಇರಾನ್ ನಡುವೆ ಮೊದಲ ಸುತ್ತಿನ ಮಾತುಕತೆ ಫಲಪ್ರದವಾಗುತ್ತದಾ? ಇಲ್ಲ, ಮತ್ತೆ ಯುದ್ಧ ಶುರುವಾಗುತ್ತದಾ?

94.7K Views 10 Apr 2026

*ಡಾ. ಅಶೋಕ್ ಶೆಟ್ಟಿ ಬಿ. ಎನ್.
ಏಪ್ರಿಲ್ 11ರಂದು ಪಾಕಿಸ್ತಾನದ ಪ್ರಧಾನಿ ಶೆರೀಫ್ ಮಧ್ಯಸ್ಥಿಕೆಯಲ್ಲಿ ಅಮೇರಿಕಾ, ಇಸ್ರೇಲ್, ಇರಾನ್ ನಡುವೆ ನಡೆಯುವ ಮೊದಲ ಸುತ್ತಿನ ಮಾತುಕತೆ ಸಫಲವಾಗುತ್ತದಾ ?ವಿಫಲವಾಗುತ್ತದಾ ಎಂಬ ಬಗ್ಗೆ ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ.ಸದ್ಯದ ಪರಿಸ್ಥಿತಿಯಲ್ಲಿ ಕದನ ವಿರಾಮ ಘೋಷಿಸಿದರೂ ,ಟ್ರಂಪ್ ಮಾತ್ರ ಅಮೇರಿಕಾ ಸೇನೆಯನ್ನು ಇರಾನ್ ನ ಸುತ್ತಮುತ್ತ ನಿಲ್ಲಿಸಿ ಯಾವುದೇ ಕ್ಷಣ ದಾಳಿ ಮಾಡಲು ಸಜ್ಜಾಗಿರುವಂತೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.ಇನ್ನೊಂದು ಕಡೆ,ಇಸ್ರೇಲ್ ಲೆಬನಾನ್ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದೆ.ಕೇವಲ ಒಂದೇ ನಿಮಿಷ ದಲ್ಲಿ ಲೆಬನಾನ್ ನ 100 ಕಡೆ ದಾಳಿ ನಡೆಸಿ 300ಮಂದಿಯನ್ನು ಬಲಿ ತೆಗೆದುಕೊಂಡಿದೆ.ಇದರಿಂದ ಇರಾನ್ ಕದನ ವಿರಾಮದ ಷರತ್ತುಗಳಿಗೆ ವ್ಯತಿರಿಕ್ತವಾಗಿ ಹಾರ್ಮೋಜ್ ಜಲಸಂಧಿಯನ್ನು ಮುಚ್ಚಿ ಯುದ್ಧಕ್ಕೆ ಸಿದ್ದವೆಂದು ಹೇಳಿದೆ. ಇರಾನ್ ನೊಳಗೆ ನುಗ್ಗಿ ಯುರೇನಿಯಂ ಪರಮಾಣು ವಶಪಡಿಸುವತ್ತ ಅಮೇರಿಕಾ,ಇಸ್ರೇಲ್ ಕಾದು ಕುಳಿತಿದೆ .ಈ ಪರಿಸ್ಥಿತಿಯಲ್ಲಿ ನಾಳೆ ನಡೆಯುವ ಮಾತುಕತೆ ಫಲಪ್ರದ ವಾಗುತ್ತದಾ.ಎಲ್ಲದ್ದಕ್ಕೂ ಕಾಲವೇ ಉತ್ತರಿಸಬೇಕು.ಇನ್ನೊಂದು ಕಡೆ ಅಮೇರಿಕಾದ 60 ಶೇಕಡಾ ಜನರು ಇಸ್ರೇಲ್ ಪ್ರತಿಕೂಲ ದೇಶವೆಂದು ಹೇಳಿದ್ದು ಟಂಪ್ ಇಸ್ರೇಲ್ ಪರ ವಹಿಸಿ ಇರಾನ್ ಮೇಲೆ ದಾಳಿ ನಡೆಸಬಾರದೆಂದು ಹೇಳಿದ್ದಾರೆ.

Read More News

Scroll to Top