ಪಾಲ್ದನೆ ಚರ್ಚ್: ಬೀಳ್ಕೊಡುಗೆ ಸಮಾರಂಭ

112.4K Views 27 Mar 2026

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಡಿಯಾಕೋನ್ ಆಗಿದ್ದ ರೋವಿನ್ ಲೋಪೆಜ್ ಅವರನ್ನು ಬೀಳ್ಕೊಡಲಾಯಿತು.
ಕಳೆದ ಆರು ತಿಂಗಳುಗಳಿಂದ ಪಾಲ್ದನೆ ಚರ್ಚ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಚರ್ಚ್ ಧರ್ಮಗುರುಗಳಾದ ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರೊಂದಿಗೆ ಸಹಕರಿಸುತ್ತಿದ್ದು, ಮುಂದಿನ ತಿಂಗಳ 29 ರಂದು ಕಪುಚಿನ್ ಧರ್ಮಗುರುಗಳಾಗಿ ಗುರು ದೀಕ್ಷೆಯನ್ನು ಹೊನ್ನಾವರ ಚರ್ಚ್ ನಲ್ಲಿ ಸ್ವೀಕರಿಸಲಿದ್ದಾರೆ.
ವಿದಾಯ ಸಮಾರಂಭದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾ . ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ ಶುಭ ಹಾರೈಸಿದರು.
ಚರ್ಚ್ ನ ಜನರಿಂದ ದೊರೆತ ಸಹಕಾರದ ಬಗ್ಗೆ ಡಿಯಾಕೋನ್ ರೋವಿನ್ ಲೋಪೆಜ್ ಅವರು ಕೃತಜ್ಞತಾ ಭಾವನೆಯೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ರೋಶನ್ ಮೊಂತೇರೊ ಪುಷ್ಪಾರ್ಚನೆಗೈದರು. ಸರ್ವ ಆಯೋಗಗಳ ಸಂಚಾಲಕ ವಿಲಿಯಂ ಲೋಬೊ ಉಪಸ್ಥಿತರಿದ್ದರು.
ಮಾಜಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.

Read More News

Scroll to Top