ಮಂಗಳೂರು ನಗರದಲ್ಲಿ ಮೊದಲ ಪೆಟ್ ಡಯಾಲಿಸಿಸ್ ಸೌಲಭ್ಯ- ಕುಳಶೇಖರದ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್‌ನಲ್ಲಿ ಆರಂಭ

101.9K Views 6 Mar 2026

ಮಂಗಳೂರು: ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಅತ್ಯಾವಶ್ಯಕವಾದ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿ, ಕುಳಶೇಖರದಲ್ಲಿರುವ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್ ನಲ್ಲಿ ಪೆಟ್ ಡಯಾಲಿಸಿಸ್ ಯಂತ್ರವನ್ನು ಅಧಿಕೃತವಾಗಿ ಆರಂಭಿಸಲಾಯಿತು. ಮೂತ್ರಪಿಂಡ ಸಂಬಂಧಿತ ತೊಂದರೆಗಳಿಂದ ಬಳಲುವ ಸಾಕುಪ್ರಾಣಿಗಳಿಗೆ ಇದು ಜೀವ ರಕ್ಷಕ ಚಿಕಿತ್ಸೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.
ಈ ಡಯಾಲಿಸಿಸ್ ಘಟಕವನ್ನು ವಿನ್ಸೆಂಟ್ ಜೋಸೆಫ್ ನೀಲಿಯಾರ (ಶಾಜು) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವೈದ್ಯರು ಹಾಗೂ ರೋಟರಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಈ ಉಪಕ್ರಮವನ್ನು ಭಾಜಪ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜಾ ಅವರು ಸಮನ್ವಯಗೊಳಿಸಿ, ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸಹಕಾರವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಯೋಜನೆಯ ಪರಿಕಲ್ಪನೆ ಡಾ. ಶ್ರೇಯಸ್ ಸೊರಕೆ, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಅವರದು. ಮಂಗಳೂರು ಮತ್ತು ಸುತ್ತಮುತ್ತಲಿನ ಸುಮಾರು 200 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳಿಗೆ ಡಯಾಲಿಸಿಸ್ ಸೌಲಭ್ಯ ಇಲ್ಲದಿರುವುದನ್ನು ಗಮನಿಸಿ, ಈ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಅವರು ಈ ಪ್ರಯತ್ನಕ್ಕೆ ಚಾಲನೆ ನೀಡಿದರು. ಅವರ ಈ ದಿ ಗೌರವಿಸಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ‘ದೀರ್ಘ ದೃಷ್ಟಿ ಮತ್ತು ಸೇವಾಭಾವವನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಜಿಲ್ಲಾ 3181 ರ ಸಹಾಯಕ ಗವರ್ನರ್ ಆರ್‌ಟಿಎನ್ ಡಾ. ರವಿಶಂಕರ್ ರಾವ್, ಮಂಗಳೂರುಂತಹ ಬೆಳೆಯುತ್ತಿರುವ ನಗರಕ್ಕೆ ಇಂತಹ ಮಾನವೀಯ ಹಾಗೂ ನವೀನ ಉಪಕ್ರಮಗಳು ಅತ್ಯಂತ ಅಗತ್ಯವೆಂದು ಹೇಳಿದರು. “ಸ್ಮಾರ್ಟ್ ಸಿಟಿ ಎಂದರೆ ಮೂಲಸೌಕರ್ಯಗಳ ಜೊತೆಗೆ ಪ್ರಾಣಿಗಳ ಕಲ್ಯಾಣಕ್ಕೂ ಆದ್ಯತೆ ನೀಡುವ ನಗರವಾಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೌತ್ ಅಧ್ಯಕ್ಷ ಆರ್‌ಟಿಎನ್ ಹರೀಶ್ ಅಡ್ಯಾರ್, ಕಾರ್ಯದರ್ಶಿ ಆರ್‌ಟಿಎನ್ ಸೂರ್ಯಕಾಂತ್ ನಾಯಕ್, ಆರ್‌ಟಿಎನ್ ಜಿ.ಕೆ. ಶೆಟ್ಟಿ, ಕರ್ನಾಟಕ ಸೆಕ್ಯುರಿಟಿಯ ಉದ್ಯಮಿ ಮತ್ತು ರೋಟೇರಿಯನ್‌ ಆರ್‌ಟಿಎನ್ ಟಿ.ಎ. ಅಶೋಕನ್, ಅನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್,
ಡಯಾಲಿಸಿಸ್ ತಂತ್ರಜ್ಞ ನಿತಿನ್ ಕುಮಾರ್ ಹಾಗೂ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್‌ ಡಾ. ಯಶಸ್ವಿ ನಾರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಡಯಾಲಿಸಿಸ್ ಸೌಲಭ್ಯದಿಂದ ಮಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾಕುಪ್ರಾಣಿಗಳಿಗೆ ತುರ್ತು ಮತ್ತು ಪ್ರಗತಿಪರ ಚಿಕಿತ್ಸೆಯನ್ನು ಸ್ಥಳೀಯವಾಗಿ ಪಡೆಯುವ ಅವಕಾಶ ದೊರೆಯಲಿದ್ದು, ಪ್ರಾಣಿಪ್ರೇಮಿಗಳಿಗೂ ಇದು ದೊಡ್ಡ ಸಹಾಯವಾಗಲಿದೆ.
ಸಾಕುಪ್ರಾಣಿಗಳ ಆರೈಕೆಯಲ್ಲಿ ಮಂಗಳೂರಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಈ ಉಪಕ್ರಮವು ಪ್ರಾಣಿಗಳ ಆರೋಗ್ಯ ಸೇವೆಗೆ ಹೊಸ ದಿಕ್ಕು ನೀಡಲಿದೆ.

Read More News

Scroll to Top