ಸಾಮಾಜಿಕ, ಧಾರ್ಮಿಕ ಔದ್ಯಮಿಕ ಕ್ಷೇತ್ರಗಳ ಸಮರ್ಥ ಬಂಟ ನಾಯಕ: ಪಿ.ಮಹಾಬಲ ಚೌಟ ಕೋಡಿಕಲ್

100.5K Views 23 Jan 2026

ಶ್ರೀ ಕುರು ಅಂಬಾ ರಾಜರಾಜೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ, ಕೋಡಿಕಲ್ ಇದರ ಆಡಳಿತ ಮೊಕ್ತೇಸರಾಗಿರುವ ಪಿ.ಮಹಾಬಲ ಚೌಟ ಅವರು ಸಾಮಾಜಿಕ, ಧಾರ್ಮಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಜನಜನಿತರಾಗಿದ್ದಾರೆ. ಇವರು ಕೊಟ್ಟಾರ ಕೋಡಿಕಲ್ ಬಂಟರ ಸಂಘದ ಅಧ್ಯಕ್ಷರಾಗಿದ್ದಾರೆ. ಮೂಲಕೆರೆ ನಾಗಬನ ಟ್ರಸ್ಟ್ ನ ಅಧ್ಯಕ್ಷರು, ಕೆಲಿಂಜ-ಉಳ್ಳಾಲ್ದಿ ಅಮ್ಮ ಕುಟುಂಬಿಕರ ಟ್ರಸ್ಟ್ ನ ಅಧ್ಯಕ್ಷರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಡಿಕಲ್‍ನ ನಿಕಟಪೂರ್ವ ಅಧ್ಯಕ್ಷರು, ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು, ಜೈನ್ಸ್ ಗ್ರೂಪ್ ಇಂಟರ್‍ನ್ಯಾಷನಲ್ ಇದರ ಅಧ್ಯಕ್ಷರು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಡಿಪು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಬೆಂಗಳೂರಿನಲ್ಲಿ ತಾಂತ್ರಿಕ ತರಬೇತಿ, 1987ರಲ್ಲಿ ರುಡ್‍ಶೆಡ್ ಧರ್ಮಸ್ಥಳದಲ್ಲಿ ತರಬೇತಿ, 1988ರಲ್ಲಿ ಶ್ರೀ ಕುರು ಅಂಬಾ ದೇವಸ್ಥಾನ ರಸ್ತೆಯ ದುಗ್ಗಮ್ಮ ಟವರ್ಸ್ ಕೋಡಿಕಲ್‍ನಲ್ಲಿ ಶ್ರೀ ದುರ್ಗಾ ಫರ್ನಿಚರ್ ಎಂಬ ಇಂಟಿರೀಯರ್ ಡೆಕೊರೇಟರ್ಸ್ ಮತ್ತು ಫರ್ನಿಚರ್ಸ್ ಉದ್ಯಮವನ್ನು ಸ್ಥಾಪಿಸಿ ಔದ್ಯಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಾ ಇದ್ದಾರೆ.
ಇವರ ಸಾಧನೆಗೆ ಇವರ ಪತ್ನಿ ಅನುಸೂಯ ಎಂ. ಚೌಟ ಮಕ್ಕಳಾದ ಯು.ಎ.ಎಸ್.ನಲ್ಲಿ ಉದ್ಯೋಗದಲ್ಲಿರುವ ಚೈತ್ರ, ರಿಷಿಕಾ ಅವರು ಸ್ಪೂರ್ತಿಯಾಗಿದ್ದಾರೆ.

Read More News

Scroll to Top