ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ “ನವಗ್ರಹ ಶಾಂತಿ ಹೋಮ”

104.6K Views 2 Dec 2025

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬುಧವಾರ ದಿನಾಂಕ 26-11-2025 ರಂದು ನವಗ್ರಹ ಶಾಂತಿ ಹೋಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಅಮ್ಮನ ಆಶ್ರಮದ ಹಿರಿಯ ಸನ್ಯಾಸಿ ಶಿಷ್ಯೆಯರು ಈ ವಿಶೇಷ ಹೋಮದ ಪೂಜಾ ವಿಧಾನಗಳನ್ನು ನೆರವೇರಿಸಿದರು.


ಮಂಗಳೂರಿನ ಆಶ್ರಮದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ, ಹೈದರಾಬಾದ್ ಮಠದಲ್ಲಿರುವ ಹಾಗೂ ತೆಲಂಗಾಣ, ಆಂದ್ರಪ್ರದೇಶದ ಜವಾಬ್ದಾರಿ ಹೊಂದಿರುವ ಸ್ವಾಮಿನಿ ಸುವಿದ್ಯಾಮೃತ ಪ್ರಾಣ, ಕೊಟ್ಟಾಯಂ ಆಶ್ರಮದ ನಿಷ್ಟಾಮೃತ ಪ್ರಾಣ ಹಾಗೂ ಕಾರವಾರದಿಂದ ಸ್ವಾಮಿನಿ ಅಮಲಾಮೃತ ಪ್ರಾಣ ರವರು ಜೊತೆಯಾಗಿ ಸೇರಿ ಆಶ್ರಮದ ವಿಧಿವಿಧಾನಗಳ ಅನುಸಾರ ಪೂಜೆಗೈದರು.


ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ,ಡಾ.ವೈ.ಸನತ್ ಹೆಗ್ಡೆ, ಶ್ರುತಿ ಸನತ್ ಹೆಗ್ಡೆ, ಅಧ್ಯಕ್ಷರಾದ ಸುರೇಶ್ ಅಮೀನ್ ಮತ್ತು ಪದಾಧಿಕಾರಿಗಳು, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಉಡುಪಿ ಸೇವಾಸಮಿತಿಯ ಅಧ್ಯಕ್ಷ ಯೋಗೀಶ್ ಬೈಂದೂರು, ನವೀನ್ ಪಿವಿಟಿ, ಕುಂದಾಪುರ ಸಮಿತಿಯ ಕಲ್ಪನಾ ಭಾಸ್ಕರ್, ಮಾಲತಿ ಬಂಗೇರ ಹಾಗೂ ಕರಾವಳಿ ಕರ್ನಾಟಕದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಮ್ಮನ ಭಕ್ತರು ಭಾಗವಹಿಸಿದ್ದರು.
ಯುವ ಉದ್ಯಮಿ ಶರಣ್ ರಾಜ್ ಮತ್ತು ಭರತ್ ಹೊಸಬೆಟ್ಟು ರವರನ್ನು ಸನ್ಮಾನಿಸಲಾಯಿತು.


ಅತಿಥಿಯಾಗಿ ಆಗಮಿಸಿದ ವಿ4 ಮೀಡಿಯ ಮಾಲಕರಾದ ಲಕ್ಷ್ಮಣ್ ಕುಂದರ್ ಮತ್ತು ಖ್ಯಾತ ಚಿತ್ರನಟ ಅರ್ಜುನ್ ಕಾಪಿಕಾಡ್ ರವರಿಗೆ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಗೌರವ ಪ್ರಸಾದ ನೀಡಿದರು.
ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.ಈ ಶುಭ ಸಂದರ್ಭದಲ್ಲಿ
ನೂತನ ಪಾರ್ಕಿಂಗ್ ಪ್ರದೇಶದ ಉದ್ಘಾಟನೆ ನೆರವೇರಿಸಲಾಯಿತು.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top